Home News Death: 12ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕಿ ಮೃತ್ಯು

Death: 12ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕಿ ಮೃತ್ಯು

Gujarat

Hindu neighbor gifts plot of land

Hindu neighbour gifts land to Muslim journalist

Death: ವಸತಿ ಕಟ್ಟಡದ 12ನೇ ಮಹಡಿಯಿಂದ ಬಿದ್ದು 3 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನೈಗಾಂವ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಲಾದ ಪೊಲೀಸ್ ವರದಿಯ ಪ್ರಕಾರ, ಈ ಘಟನೆ ಜುಲೈ 22 ರಂದು ರಾತ್ರಿ 8.20 ರ ಸುಮಾರಿಗೆ ಸಂಭವಿಸಿದೆ.

ಕಟ್ಟಡದ ಅದೇ ಮಹಡಿಯಲ್ಲಿ ವಾಸವಾಗಿದ್ದ ಸಂಬಂಧಿಕರನ್ನು ಭೇಟಿ ಮಾಡಲು ಬಾಲಕಿ ತನ್ನ ಪೋಷಕರೊಂದಿಗೆ ಹೋಗಿದ್ದಳು. ಕುಟುಂಬ ಸದಸ್ಯರು ಮನೆಗೆ ಹಿಂದಿರುಗಲು ಸಿದ್ಧರಾದಾಗ ಬಾಲಕಿಯನ್ನು ಚಪ್ಪಲಿ ಸ್ಟ್ಯಾಂಡ್ ಮೇಲೆ ನಿಲ್ಲಿಸಲಾಗಿತ್ತು. ಆಗ ಪೋಷಕರು ಆಕೆಯ ಕಾಲಿಗೆ ಶೂ ಧರಿಸಲು ಸಹಾಯ ಮಾಡುತ್ತಿದ್ದರು. ಆಗ ಬಾಲಕಿ ಸಮತೋಲನ ಕಳೆದುಕೊಂಡು ಹಿಂದಕ್ಕೆ ಬಾಗಿದ್ದಾಳೆ. ಆಗ 12ನೇ ಮಹಡಿಯ ಕಾರಿಡಾರ್ನಿಂದ ಕೆಳಗೆ ಬಿದ್ದು ಗಂಭೀರ ಗಾಯವಾಗಿತ್ತು.

ತಕ್ಷಣ ಆಕೆಯನ್ನು ವಸಾಯಿಯಲ್ಲಿರುವ ಡಿಎಂ ಪೆಟಿಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಆಕೆಯನ್ನು ಆಸ್ಪತ್ರೆಗೆ ತರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Accident: ಕೆ.ಎಸ್.ಆರ್.ಟಿ.ಸಿ ಬಸ್‌ ಹಾಗೂ ಟ್ರಕ್ ನಡುವೆ ಭೀಕರ ಅಪಘಾತ!