Home News ಮೂರು ದಿನಗಳ ಹಿಂದೆ ಜೈಲಿನಿಂದ ಹೊರಬಂದಾತ ನಡುರಸ್ತೆಯಲ್ಲಿ ಹೆಣವಾದ!!ಹಳೇ ದ್ವೇಷ ಹೊತ್ತು ಪುನಃ ಫೀಲ್ಡ್ ಗೆ...

ಮೂರು ದಿನಗಳ ಹಿಂದೆ ಜೈಲಿನಿಂದ ಹೊರಬಂದಾತ ನಡುರಸ್ತೆಯಲ್ಲಿ ಹೆಣವಾದ!!ಹಳೇ ದ್ವೇಷ ಹೊತ್ತು ಪುನಃ ಫೀಲ್ಡ್ ಗೆ ಇಳಿದಾತನ ಬೆನ್ನಹಿಂದೆಯೇ ಇತ್ತು ಸಾವು

Hindu neighbor gifts plot of land

Hindu neighbour gifts land to Muslim journalist

ಆತ ನಟೋರಿಯಸ್ ರೌಡಿ, ತನ್ನ 18ನೇ ವಯಸ್ಸಿನಲ್ಲಿ ಕೊಲೆಗಾರನಾಗಿ ಜೈಲು ಸೇರಿದ್ದ ಆತ ಬಿಡುಗಡೆಗೊಂಡು ತನ್ನದೇ ಒಂದು ಗ್ಯಾಂಗ್ ಕಟ್ಟಿಕೊಂಡಿದ್ದ.2016 ರಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಆತ ಪುನಃ ಜೈಲು ಸೇರಿದ್ದ. ಕಳೆದ ಕೆಲ ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡು ಹೊರಬಂದ ಆತನನ್ನು ಆತನ ಸಂಗಡಿಗರು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿದ್ದರು. ಅಣ್ಣ ಬಂದ ಬಾಸ್ ಬಂದ ಎದ್ದು ನಿಲ್ಲೋ ಸ್ಟೆಪ್ ಹಾಕ್ರೋ ಎಂದು ಕುಣಿದು ಕುಪ್ಪಳಿಸಿದ್ದ ಆತನ ಗ್ಯಾಂಗ್ ಈಗ ಸಪ್ಪೆಯಾಗಿ ಹೋಗಿದೆ.ತಮ್ಮ ಗ್ಯಾಂಗ್ ಲೀಡರ್ ನಡುರಸ್ತೆಯಲ್ಲಿ ಹೆಣವಾದದನ್ನು ಕಂಡು ಕಂಗಾಲಾಗಿದ್ದಾರೆ.

ಹೌದು. ಕಳೆದ ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ರೌಡಿಶೀಟರ್ ಜೆ.ಸಿ ಆನಂದ್ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ.ಹಳೆಯ ದ್ವೇಷಕ್ಕೆ ಹತ್ಯೆಯ ಸಂಚು ರೂಪಿಸಿ ಪುನಃ ರೌಡಿಸಂ ಫೀಲ್ಡ್ ಗೆ ಎಂಟ್ರಿ ಕೊಡಲೆಂದು ಊರಿನಿಂದ ಬೆಂಗಳೂರಿಗೆ ಬಂದಾತನ ಸಾವು ಬೆನ್ನಹಿಂದೆಯೇ ಇತ್ತೆಂಬುದನ್ನು ಆತ ಊಹಿಸಿಯೂ ಇರಲಿಲ್ಲ.

ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಗದರಣಹಳ್ಳಿಯ ಶಿವಪುರ ಎಂಬಲ್ಲಿ ದುಷ್ಕರ್ಮಿಗಳಿಂದ ದಾಳಿಯಾಗಿಗೊಳಗಾಗಿ ರಸ್ತೆಮಧ್ಯೆ ಹೆಣವಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಹಳೇ ದ್ವೇಷ ಸಾಧಿಸಲು ಬಂದಿದ್ದಾಗಿ ತಿಳಿದುಬಂದಿದೆ.ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈತನ ಮೇಲೆ ರೌಡಿ ಶೀಟರ್ ತೆರೆದು ಜೈಲಿಗಟ್ಟಲಾಗಿತ್ತು. ಆದರೆ ಜೈಲಿನಿಂದ ಹೊರಬಂದಾತ ಪುನಃ ಹತ್ಯೆ ನಡೆಸಲು ಹೋಗಿ ತಾನೇ ಹತ್ಯೆಯಾಗಿದ್ದಾನೆ.