Home News Robbery: ಮೊಬೈಲ್‌ ಟವರ್‌ಗೆ ಅಳವಡಿಸಿದ್ದ 24 ಬ್ಯಾಟರಿಗಳು ಕಳವು

Robbery: ಮೊಬೈಲ್‌ ಟವರ್‌ಗೆ ಅಳವಡಿಸಿದ್ದ 24 ಬ್ಯಾಟರಿಗಳು ಕಳವು

Image Credit Source: David chico

Hindu neighbor gifts plot of land

Hindu neighbour gifts land to Muslim journalist

Robbery: ಕಾರ್ಕಳದ ಪಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ಅಳವಡಿಸಲಾಗಿದ್ದ ಕಂಪೆನಿಯ ಮೊಬೈಲ್‌ ಟವರ್‌ನಲ್ಲಿದ್ದ 24 ಬ್ಯಾಟರಿಗಳನ್ನು ಕಳ್ಳರು (Robbery) ಕಳವುಗೈದಿರುವ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರಿನ ದಿನೇಶ್ ಎಂಬವರು INDUS MOBILE TOWER ಸೆಕ್ಯುರಿಟಿ ಸೂಪ‌ರ್ ವೈಸರ್ ಅಗಿ ಕೆಲಸ ಮಾಡುತ್ತಿದ್ದು ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಸರ್ವೆ ನಂಬ್ರ 238/4ಎ, ದಿನೇಶ್ ಎಂಬುವವರ ಜಾಗದಲ್ಲಿIN 1248275 Site ID PALLI 1 ನಂಬ್ರದ ಮೊಬೈಲ್ ಟವ‌ರ್ ನಿರ್ಮಿಸಿದ್ದು, ಜೂ.14 ರಂದು ಸಂಸ್ಥೆಯ ಪ್ರದೀಪ್‌ ಅವರು ಬಂದು ನೋಡಿದಾಗ ಟವರ್‌ನ ಬ್ಯಾಟರಿಗಳು ಸುಸ್ಥಿತಿಯಲ್ಲಿದ್ದವು. ಬಳಿಕ ಜೂ.17ರಂದು ಟವರ್ ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ ಸಂಸ್ಥೆಯ ದಿನೇಶ್ ಅವರು ಟವರ್ ಪರಿಶೀಲಿಸಿದಾಗ ಟವರ್‌ನಲ್ಲಿದ್ದ 24 ಬ್ಯಾಟರಿಗಳು ಕಳವಾಗಿದ್ದವು. ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.