Home News 21 ಹಿಂದೂ ದೇವಾಲಯದ ಚಿನ್ನ ಕರಗಿಸಿ ಬಿಸ್ಕೆಟ್ ಮಾಡಿದ ತಮಿಳುನಾಡು 

21 ಹಿಂದೂ ದೇವಾಲಯದ ಚಿನ್ನ ಕರಗಿಸಿ ಬಿಸ್ಕೆಟ್ ಮಾಡಿದ ತಮಿಳುನಾಡು 

Hindu neighbor gifts plot of land

Hindu neighbour gifts land to Muslim journalist

ಚೆನ್ನೈ: ಭಕ್ತರು ದೇವಾಲಯಗಳಿಗೆ ನೀಡಿದ ಆದರೆ ಬಳಸಲಾಗದ ಸುಮಾರು 1 ಟನ್‌ಗೂ (1,000 ಕೆಜಿಗೂ ಅಧಿಕ) ಅಧಿಕ ತೂಕದ ಚಿನ್ನವನ್ನು ಕರಗಿಸಿ 24 ಕ್ಯಾರೆಟ್‌ನ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ತಮಿಳುನಾಡು ಸರ್ಕಾರದ ತಿಳಿಸಿದೆ.

ಅಲ್ಲಿನ ಮುಜರಾಯಿ ಇಲಾಖೆ ಹೀಗೆ ಬಿಸ್ಕತ್ತುಗಳನ್ನಾಗಿ ಪರಿವರ್ತಿಸಲಾದ 1 ಟನ್‌ಗೂ ಅಧಿಕ ಚಿನ್ನವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆ ಎಂದು ತಿಳಿಸಿದೆ.

ಬ್ಯಾಂಕುಗಳಿಂದ ಈ ಚಿನ್ನದ ಠೇವಣಿಯಿಂದ ವಾರ್ಷಿಕವಾಗಿ ₹17.82 ಕೋ. ಬಡ್ಡಿ ಬರುತ್ತದೆ. ಈ ಬಡ್ಡಿ ಹಣವನ್ನು ಸಂಬಂಧಿತ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಮುಜರಾಯಿ ಇಲಾಖೆ ಹೇಳಿಕೊಂಡಿದೆ. ಕಳೆದ ಮಾರ್ಚ್ 31 ರಂದು ಎಲ್ಲ ಚಿನ್ನವನ್ನು ಠೇವಣಿ ಇಡಲಾಗಿದೆ ಎಂದು ತಮಿಳುನಾಡು ಮುಜರಾಯಿ ಸಚಿವ ಪಿ.ಕೆ. ಶೇಖರ್ ಬಾಬು ತಿಳಿಸಿದ್ದಾರೆ.

ತಮಿಳುನಾಡಿನ ಒಟ್ಟು 21 ಹಿಂದೂ ದೇವಾಲಯಗಳಿಗೆ ಈ ಎಲ್ಲ ಚಿನ್ನ ಸೇರಿದ್ದು, ಅದರಲ್ಲಿ ತಿರುಚಿನಾಪಳ್ಳಿಯ ಸಮಯಾಪುರಂನ ‘ಅರಳ್ಳಿಗು ಮಾರಿಯಮ್ಮನ್’ ದೇವಾಲಯದ ಚಿನ್ನವೇ ಜಾಸ್ತಿ ಇದೆ. ಆ ದೇವಾಲಯದವರು 426.26 ಕೆ.ಜಿ ಚಿನ್ನವನ್ನು ನೀಡಿದ್ದಾರೆ ಎಂದು ಅವರು ವಿವರಿಸಿದ್ದಾರೆ.