Home News ಕೇವಲ 1 ರೂಪಾಯಿಗೆ ಮನೆಗೆ ತನ್ನಿ ಹೊಸ ಸ್ಕೂಟರ್ !! | ಮಹಿಳಾ ದಿನಾಚರಣೆಯ ಪ್ರಯುಕ್ತ...

ಕೇವಲ 1 ರೂಪಾಯಿಗೆ ಮನೆಗೆ ತನ್ನಿ ಹೊಸ ಸ್ಕೂಟರ್ !! | ಮಹಿಳಾ ದಿನಾಚರಣೆಯ ಪ್ರಯುಕ್ತ ಈ ಕಂಪೆನಿ ನೀಡುತ್ತಿದೆ 3 ದಿನಗಳ ಭರ್ಜರಿ ಆಫರ್

Hindu neighbor gifts plot of land

Hindu neighbour gifts land to Muslim journalist

ನೀವು ಹೊಸ ಸ್ಕೂಟಿ ಖರೀದಿಸಲು ಯೋಚಿಸುತ್ತಿದ್ದರೆ, ನಿಮಗಿದೆ ಬಂಪರ್ ಆಫರ್. ಹೌದು. ನೀವು ಹೊಸ ಶೈನಿಂಗ್ ಸ್ಕೂಟಿಯನ್ನು ಕೇವಲ 1 ರೂಪಾಯಿಯ ಡೌನ್ ಪೇಮೆಂಟ್‌ನೊಂದಿಗೆ ಮನೆಗೆ ತರಬಹುದು.. !! ಇದೇನಪ್ಪಾ ಇಂತಹ ಆಫರ್ ಎಂದು ಆಶ್ಚರ್ಯವಾಯಿತೇ?? ಆದರೂ ನೀವು ನಂಬಲೇಬೇಕಾದ ವಿಷಯವಿದು. ದೇಶದ ಹೆಸರಾಂತ ದ್ವಿಚಕ್ರ ವಾಹನ ಕಂಪನಿ ಹೀರೋ ಮೋಟೋಕಾರ್ಪ್ ಮಂಗಳವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಮಹತ್ವದ ಘೋಷಣೆ ಮಾಡಿದೆ.

ಹೀರೋ ಮೋಟೋಕಾರ್ಪ್ ಕಂಪನಿಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಈ ಕೊಡುಗೆಯನ್ನು ಆಯ್ದ ನಗರಗಳಲ್ಲಿ ಮಾತ್ರ ಪ್ರಾರಂಭಿಸಲಾಗಿದ್ದು, ಮಾರ್ಚ್ 11 ರವರೆಗೆ ಈ ಕೊಡುಗೆ ಮುಂದುವರೆಯಲಿದೆ. ಈ ಸಮಯದಲ್ಲಿ ನೀವು ಹತ್ತಿರದ ಯಾವುದೇ ಹೀರೋ ಶೋರೂಮ್‌ಗೆ ಭೇಟಿ ನೀಡುವ ಮೂಲಕ ಯಾವುದೇ ಸ್ಕೂಟಿ ಅಥವಾ ಸ್ಕೂಟರ್ ಅನ್ನು ಖರೀದಿಸಬಹುದು. 1 ರೂಪಾಯಿಯ ಡೌನ್ ಪೇಮೆಂಟ್ ಸೌಲಭ್ಯದ ಜೊತೆಗೆ ಕ್ಯಾಶ್ ಬೋನಸ್ ಆಫರ್ ಕೂಡ ಆರಂಭಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

6 ಸಾವಿರದವರೆಗೆ ಬೋನಸ್ ಕೂಡ ಲಭ್ಯ:

ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಮೆಸ್ಟ್ರೋ ಎಡ್ಜ್ 125, ಡೆಸ್ಟಿನಿ 125 ಮತ್ತು ಪ್ಲೆಷರ್ ಪ್ಲಸ್ ಖರೀದಿಯಲ್ಲಿ ಮಹಿಳೆಯರಿಗೆ 4,000 ರೂಪಾಯಿಗಳವರೆಗೆ ನಗದು ಬೋನಸ್ ನೀಡಲಾಗುತ್ತಿದೆ. ಇದರೊಂದಿಗೆ ಡೆಸ್ಟಿನಿ 125 ಬೈಕು ಖರೀದಿಯ ಮೇಲೆ 2,000 ರೂ. ಲಾಯಲ್ಟಿ ಬೋನಸ್ ಸಹ ಲಭ್ಯವಿದೆ.

ಮಹಿಳೆಯ ಹೆಸರಿನಲ್ಲಿ ಬುಕ್ಕಿಂಗ್ ಮಾಡಬಹುದು:

ಗಮನಿಸಬೇಕಾದ ಅಂಶವೆಂದರೆ ಯಾವುದೇ, ಒಂದು ಕುಟುಂಬವು ತಮ್ಮ ಕುಟುಂಬದ ಮಹಿಳೆಯ ಹೆಸರಿನಲ್ಲಿ ಬುಕ್ಕಿಂಗ್ ಮಾಡಿದರೆ, ಈ ಕೊಡುಗೆಗಳನ್ನು ನೀಡಲಾಗುವುದು ಎಂದು ಕಂಪನಿ ಹೇಳಿದೆ. ಮಾರುಕಟ್ಟೆಯಲ್ಲಿ ಡೆಸ್ಟಿನಿ 125 ಬೆಲೆ 70,400 ರೂ., Maestro Edge 125 ಬೆಲೆ 73,450 ರೂ., Maestro Edge 110 ಬೆಲೆ 66,820 ರೂ. ಆಗಿದೆ.