Home News Breaking News । ಕನಿಷ್ಠ 10 ಮಕ್ಕಳು ಮಾಡಿ,13 ಲಕ್ಷ ನೆಟ್ ಕ್ಯಾಶ್ ಎಣಿಸ್ಕೊಳ್ಳಿ –...

Breaking News । ಕನಿಷ್ಠ 10 ಮಕ್ಕಳು ಮಾಡಿ,13 ಲಕ್ಷ ನೆಟ್ ಕ್ಯಾಶ್ ಎಣಿಸ್ಕೊಳ್ಳಿ – ಅಧ್ಯಕ್ಷರ ಕರೆ !

Hindu neighbor gifts plot of land

Hindu neighbour gifts land to Muslim journalist

ಹೊಸದಿಲ್ಲಿ: ದೇಶಡಾ ಜನಸಂಖ್ಯೆ ಹೆಚ್ಚು ಮಾಡಬೇಕಿದೆ. ಆದಷ್ಟು ಮದರ್ ಗಳು ಫಾದರ್ ಗಳು ಜಂಟಿ ಪ್ರಯತ್ನ ನಡೆಸಿ ಜನಸಂಖ್ಯೆ ಜಾಸ್ತಿ ಮಾಡುವಂತೆ ಅಧ್ಯಕ್ಷರು ಕರೆ ನೀಡಿದ್ದಾರೆ. ಈ ನಿಮ್ಮ ಪ್ರಯತ್ನಕ್ಕೆ ನಮ್ಮ ಸ್ಪೆಷಲ್ ಬಹುಮಾನ ಇದೆ. ಈ ಪ್ರಯತ್ನದಲ್ಲಿ 10 ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಿಗೆ 13 ಲಕ್ಷ ಬಹುಮಾನ ನೀಡುವುದಾಗಿ ಅಧ್ಯಕ್ಷರು ಘೋಷಿಸಿದ್ದಾರೆ. ಘೋಷಣೆ ಕೇಳಿದ ನಂತರ ಎಲಿಜಿಬಲ್ ಫಾದರ್ – ಮದರ್ ಬಾಗಿಲು ಭದ್ರಪಡಿಸಿಕೊಂಡು ಬೆಡ್ ರೂಮ್ ಸೇರಿಕೊಂಡ ಸುದ್ದಿ ಬಂದಿದೆ.

ಮಗು ಮಾಡುವ ಈ ಪ್ರಾಜೆಕ್ಟಿಗೆ “ಮದರ್ ಹೀರೋಯಿನ್” ಎಂಬ ಬಿರುದನ್ನು ಪ್ರಧಾನಿ ಅವರು ನೀಡಿದ್ದಾರೆ. 1944 ರಲ್ಲಿ ಎರಡನೇ ಮಹಾಯುದ್ಧದಲ್ಲಿ ದೇಶದ ಗಮನಾರ್ಹ ಜೀವಹಾನಿಯ ನಂತರ ಜನಸಂಖ್ಯೆಯನ್ನುಮತ್ತೆ ಪಡೆಯಲು ಹೆಚ್ಚೆಚ್ಚು ಮಕ್ಕಳು ಮಾಡುವಂತೆ ಕರೆ ನೀಡಿದ್ದರು. ಈಗ ಮತ್ತೆ ಈ ಬಿಗ್ ಆಫರ್ ನೀಡಲಾಗಿದೆ.

ರಶಿಯಾ ಕೆಲವು ವರ್ಷಗಳಿಂದ ಜನನ ದರದಲ್ಲಿ ಕುಸಿತವನ್ನು ಗಮನಿಸುತ್ತಿದೆ. ಅಂಕಿಅಂಶಗಳು ಹೇಳುವ ಪ್ರಕಾರ 400,000 ರಷ್ಟು ಕುಸಿದಿದೆ. ಈಗ ಜನಸಂಖ್ಯೆ 145.1 ಮಿಲಿಯನ್ಗೆ ಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಪುಟಿನ್ ರಷ್ಯಾದ ಮಹಿಳೆಯರಿಗೆ ದೇಶವನ್ನು ಮತ್ತೆ ಜನಸಂಖ್ಯಾ ರಾಷ್ಟ್ರ ಮಾಡಲು ಮಾಡಲು, ಆ ದೊಡ್ಡ ಸಹಾಯ ಮಾಡಲು ಮಹಿಳೆಯರಿಗೆ ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ಪ್ರೋತ್ಸಾಹಿಸಿ ಕರೆ ನೀಡಿದ್ದಾರೆ.

ಹಿಂದೆ ಸ್ಟಾಲಿನ್ ಕಾಲದಲ್ಲಿ ಶುರುವಾದ ಈ ಗೌರವ ಪ್ರಶಸ್ತಿಯನ್ನು 4,00,000 ಕ್ಕೂ ಹೆಚ್ಚು ನಾಗರಿಕರಿಗೆ ನೀಡಲಾಗಿತ್ತು. ಆದರೆ 1991 ರಲ್ಲಿ ಸೋವಿಯತ್ ಒಕ್ಕೂಟದ ವಿಸರ್ಜನೆಯೊಂದಿಗೆ ಇದನ್ನು ರದ್ದುಗೊಳಿಸಲಾಯಿತು. ರಾಷ್ಟ್ರದ ತ್ವರಿತ ಜನಸಂಖ್ಯಾ ಕಡಿತವನ್ನು ಪರಿಹರಿಸಲು “ಕಾರ್ಡಿನಲ್” ಕ್ರಮಗಳ ಅಗತ್ಯವಿದೆ ಎಂದು ಪುಟಿನ್ ಈ ಬಹುಮಾನವನ್ನು ಉಲ್ಲೇಖಿಸಿದ್ದಾರೆ.

ರಷ್ಯಾದಲ್ಲಿ ತಾಯಂದಿರು, ಅವರ 10ನೇ ಮಗುವಿಗೆ ಒಂದು ವರ್ಷವಾದಾಗ 1 ಮಿಲಿಯನ್ ರೂಬಲ್ಸ್, ಅಂದರೆ ಭಾರತದ ಸುಮಾರು 13 ಲಕ್ಷ ರೂಪಾಯಿಗಳು ವಿತ್ತೀಯ ಬಹುಮಾನವನ್ನು ಸ್ವೀಕರಿಸಲು ಅರ್ಹರು. ಆ ಎಲ್ಲಾ ಮಕ್ಕಳು ಭಯೋತ್ಪಾದನೆಯಲ್ಲಿ ತೊಡಗಿರಬಾರದು, ಮತ್ತು ಪೊಲೀಸರು ಅಥವಾ ಮಿಲಿಟರಿಯಿಂದ ಕೊಲ್ಲಲ್ಪಟ್ಟಿರಬಾರದು ಎಂಬ ಸಣ್ಣ ಕಂಡಿಷನ್ ಹಾಕಿದ್ದಾರೆ. “ಮದರ್ ಹೀರೋಯಿನ್” ವಿಜೇತರಿಗೆ ನೀಡಲಾಗುವ ಚಿನ್ನದ ಪದಕಗಳ ಮೇಲೆ ರಷ್ಯಾದ ಧ್ವಜವನ್ನು ಚಿತ್ರಿಸಲಾಗುತ್ತದೆ. ದಿ ಮಾಸ್ಕೋ ಟೈಮ್ಸ್ ಪ್ರಕಾರ, ಗೌರವವು ಇತರ ರಾಜ್ಯ ಆದೇಶಗಳಾದ ಹೀರೋ ಆಫ್ ಲೇಬರ್ ಮತ್ತು ಹೀರೋ ಆಫ್ ರಶಿಯಾಕ್ಕೆ ಸಮಾನವಾಗಿದೆ. ಇದೀಗ ಸರ್ಕಾರವೇ ಮಕ್ಕಳ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ಮದರ್ ಹೀರೋಯಿನ್ ಮತ್ತು ಫಾದರ್ ಹೀರೋಗಳು ಆಡಲು ರೆಡಿಯಾಗಬೇಕಷ್ಟೆ. ಆ ಸೂಚನೆ ಲಭ್ಯ ಆಗಿದೆ.