Home News 14 ತಿಂಗಳ ಮಗುವಿನ ವಿಶ್ವ ದಾಖಲೆ!! ಅಸಾಧಾರಣ ಗ್ರಹಣ ಪ್ರತಿಭೆ.

14 ತಿಂಗಳ ಮಗುವಿನ ವಿಶ್ವ ದಾಖಲೆ!! ಅಸಾಧಾರಣ ಗ್ರಹಣ ಪ್ರತಿಭೆ.

Hindu neighbor gifts plot of land

Hindu neighbour gifts land to Muslim journalist

World record:ಕಂಬಿಹಳ್ಳಿಯ ನಿವಾಸಿಯಾಗಿ ಸದ್ಯ ಬೆಂಗಳೂರಿನ ಆರ್.ಟಿ. ನಗರದಲ್ಲಿ ವಾಸವಾಗಿರುವ ಡಿ.ಎಂ. ಧನಲಕ್ಷ್ಮಿ ಕುಮಾರಿ ಮತ್ತು ಕೆ. ಹುಲಿಯಪ್ಪಗೌಡ ಅವರ 14 ತಿಂಗಳ ಮಗು ಮನಸ್ಮಿತಾ ಕಲಾಂ ವರ್ಲ್ಡ್ ರೆಕಾರ್ಡ್ಸ್ (World record)ಅವರು ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆಯ ಮಗು ಎಂದು ಗುರುತಿಸಿ ತಮ್ಮ ಪುಸ್ತಕದಲ್ಲಿ ನೋಂದಾಯಿಸಿದ್ದಾರೆ.

 

ಚಿಕ್ಕಮಗಳೂರು : ಮನಸ್ಮಿತಾ ಗೆ ಮಾರ್ಚ್ 3 ರಂದು ನಡೆಯುವ ಟೀಚ್ ಆಡಿಟೋರಿಯಂ ಚೆನ್ನೈನಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಯವರು ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಿದ್ದಾರೆ. ಕೇವಲ 14 ತಿಂಗಳ ಈ ಮಗುಮಾಡಿರುವ ದಾಖಲೆ ಎಲ್ಲರಿಗೂ ಮೆಚ್ಚುಗೆಯಾಗಿದೆ.

 

ಮನಸ್ಮಿತಾ ರವರ ತಂದೆ ಕೆ. ಹುಲಿಯಪ್ಪಗೌಡ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸದ್ಯಕ್ಕೆ

ನಿವೃತಿ ಹೊಂದಿದ್ದಾರೆ. ಮನಸ್ಮಿತಾ ಏನಲ್ಲ ಕಲಿತಿದ್ದಾರೆ ಎಂಬುದನ್ನು ನೋಡೋವುದಾರೆ, ಅವರು ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ,ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸಂಖ್ಯೆಗಳು, ಕರ್ನಾಟಕದಲ್ಲಿ 8 ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಷ್ಟ್ರೀಯ ಪ್ರಾಣಿ, ಹಣ್ಣು, ಪಕ್ಷಿ, ಧ್ವಜ, ಹೂವು, , 17 ಹಣ್ಣುಗಳು ಮತ್ತು 26 ತರಕಾರಿಗಳು, 25 ಪಕ್ಷಿಗಳು,12 ಕೀಟಗಳು ಮತ್ತು 5 ಸರೀಸೃಪಗಳು, 10 ಸ್ವಾತಂತ್ರ್ಯ ಹೋರಾಟಗಾರರು, 27 ಪ್ರಾಣಿಗಳು, 11 ಸಮುದ್ರ ಜೀವಿಗಳು, 7 ದೇಶದ ಧ್ವಜಗಳು, ಭಾರತದಲ್ಲಿನ 7 ಐತಿಹಾಸಿಕ ಸ್ಥಳ, 10 ಹೂವುಗಳು, 7 ಭಾರತೀಯ ಕರೆನ್ಸಿ, 10 ಬಣ್ಣಗಳು ಮತ್ತು 14 ಆಕಾರಗಳು, 7 ಆಟಿಕೆಗಳ ಹೆಸರುಗಳು, 11 ಸಸ್ಯ ಮತ್ತು 5 ಎಲೆಗಳು, 19 ದೇಹದ ಭಾಗಗಳು 7 ವಿಜ್ಞಾನಿಗಳು, 336 ವಿವಿಧ ವಸ್ತುಗಳು, ಒಟ್ಟು 500 ಪದಗಳನ್ನು ಗುರುತಿಸುತ್ತಾರೆ.

 

ಈ ಕಾರಣಕ್ಕಾಗಿ ಕಲಾಂ ವರ್ಲ್ಡ್ ರೆಕಾರ್ಡ್ಸ್‌ ಸಂಸ್ಥೆ ಮನಸ್ಮಿತಾ ಅವರನ್ನು ಅಸಾಧಾರಣ ಗ್ರಹಣ ಶಕ್ತಿ ಪ್ರತಿಭೆ ಎಂದು ಗುರುತಿಸಿ ಪ್ರಶಸ್ತಿಯನ್ನು ನೀಡಲಿದೆ.

ಇದನ್ನೂ ಓದಿ : Money: ಸ್ಟಾರ್ಟಪ್ ಗಳಿಗೆ ಕೇಂದ್ರದಿಂದ 50 ಲಕ್ಷ ನೆರವು!!ಅಪ್ಲೈ ಮಾಡುವುದು ಹೇಗೆ??