Home National 14 ದಿನದ ನವಜಾತ ಶಿಶುವನ್ನು ಬಾವಿಗೆಸೆದ ನಿಷ್ಕರುಣಿ ತಾಯಿ | ತಂದೆ ಯಾರು ಎಂದು ತಗಾದೆ...

14 ದಿನದ ನವಜಾತ ಶಿಶುವನ್ನು ಬಾವಿಗೆಸೆದ ನಿಷ್ಕರುಣಿ ತಾಯಿ | ತಂದೆ ಯಾರು ಎಂದು ತಗಾದೆ ತೆಗೆದ ಪತಿ!!!

Hindu neighbor gifts plot of land

Hindu neighbour gifts land to Muslim journalist

ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೇ, ಇಲ್ಲೊಂದು ಘಟನೆಯಲ್ಲಿ ಆಗ ತಾನೇ ಹುಟ್ಟಿದ ಮಗುವನ್ನು ನಿಷ್ಕರುಣಿ ತಾಯಿಯೊಬ್ಬಳು 14 ದಿನದ ಮಗುವನ್ನು ಬಾವಿಗೆಸೆದ ಘಟನೆ ನಡೆದಿದೆ.

ಹುಟ್ಟಿದ ಮಗುವಿನ ತಂದೆ ಯಾರು ಎಂದು ಕೇಳಿ ಜಗಳ ಮಾಡಿಕೊಂಡ ಪತಿಯ ನಡೆಗೆ ಬೇಸತ್ತ ತಾಯಿ ತನ್ನ ಕರುಳಬಳ್ಳಿಯನ್ನೇ ಬಾವಿಗೆಸೆದ ಹೃದಯ ವಿದ್ರಾವಕ ಘಟನೆಯೊಂದು ಬಂಕುರಾದ ಮಂಕನಾಲಿ ಪಂಚಾಯತ್ ನ ಕರಂಜೋರಾದಲ್ಲಿ ನಡೆದಿದೆ‌

ತಂದೆ ಯಾರು ಎನ್ನುವ ವಿಚಾರವಾಗಿ ದಂಪತಿ ಮಧ್ಯೆ ವಾಗ್ವಾದ ನಡೆದು ಜಗಳ ತಾರಕಕ್ಕೇರಿತ್ತು. ಕರಂಜೋರಾ ಗ್ರಾಮದ ಆಶಿಸ್ ಬಾವುರಿ ಮತ್ತು ಅರ್ಚನಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ಕೆಲವು ವಾರದ ಹಿಂದೆ ಆತನ ಪತ್ನಿ ಬಂಕುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಮಗು ಹುಟ್ಟಿದ ಕೂಡಲೇ ದಂಪತಿ ಮಧ್ಯೆ ಜಗಳ ಶುರುವಾಗಿದೆ.

ಪತ್ನಿ ಅರ್ಚನಾ ಮನೆಗೆ ಬಂದ ನಂತರವೂ ಈ ಜಗಳ ಕೊನೆಯಾಗಲಿಲ್ಲ. ಆಗಸ್ಟ್ 20 ರಂದು ಬೆಳಗ್ಗೆ ಮಗು ಕಾಣೆಯಾಗಿತ್ತು. ಆದರೆ ತನಿಖೆ ನಂತರ ಅರ್ಚನ ಮಗುವನ್ನು ಬಾವಿಗೆಸೆದು ಕೊಂದಿರುವುದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸ್ಥಳೀಯರಯ ಆಗ್ರಹಿಸಿದ್ದಾರೆ.