Home latest Somalia Bomb Blast | ನತದೃಷ್ಟ ಸೊಮಾಲಿಯಾದಲ್ಲಿ ಭೀಕರ ಕಾರು ಬಾಂಬ್ ಸ್ಫೋಟ – 100...

Somalia Bomb Blast | ನತದೃಷ್ಟ ಸೊಮಾಲಿಯಾದಲ್ಲಿ ಭೀಕರ ಕಾರು ಬಾಂಬ್ ಸ್ಫೋಟ – 100 ಕ್ಕೂ ಹೆಚ್ಚು ಸಾವು, 300 ಜನರಿಗೆ ಗಾಯ !

Hindu neighbor gifts plot of land

Hindu neighbour gifts land to Muslim journalist

ನತದೃಷ್ಟ ರಾಷ್ಟ್ರ ಸೊಮಾಲಿಯಾದ (Somalia) ರಾಜಧಾನಿ ಮೊಗಾದಿಶುವಿನಲ್ಲಿ ಶನಿವಾರ ಭೀಕರವಾಗಿ 2 ಕಾರು ಬಾಂಬ್‌ಗಳು ಸ್ಫೋಟಗೊಂಡಿದ್ದು (Car Bomb Blast), ಘಟನೆಯಲ್ಲಿ ಅಪಾರ ಪ್ರಮಾಣದ ಸಾವು ನೋವುಗಳಾಗಿವೆ. ಘಟನೆಯಲ್ಲಿ ಕನಿಷ್ಠ 100 ಜನರು ಸಾವನ್ನಪ್ಪಿ, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಅಧ್ಯಕ್ಷ ಹಸನ್ ಶೇಖ್ ಮೊಹಮ್ಮದ್ ಭಾನುವಾರ ಬೆಳಗ್ಗೆ ತಿಳಿಸಿದ್ದಾರೆ.

ಅತ್ಯಂತ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ಸಂಭವಿಸಿರುವುದರಿಂದ 100ಕ್ಕೂ ಹೆಚ್ಚು ಜನರು ಪ್ರಾಣ ಬಿಟ್ಟಿದ್ದಾರೆ. 2 ಸ್ಫೋಟಗಳು ಕೇವಲ 1 ನಿಮಿಷದ ಅಂತರದಲ್ಲಿ ನಡೆದಿದೆ.

ಅಲ್ಲಿನ ಶಾಲೆಯೊಂದನ್ನು ಗುರಿಯಾಗಿಸಿಕೊಂಡು ಇಸ್ಲಾಮಿಕ್ ಮೂಲಭೂತವಾದಿ ಗುಂಪು ಅಲ್-ಶಬಾಬ್ ದಾಳಿ ನಡೆಸಿದೆ. ಅಲ್-ಶಬಾಬ್ ಭಯೋತ್ಪಾದಕರು ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡು 2 ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 ವರ್ಷಗಳ ಹಿಂದೆ, 2017ರಲ್ಲಿಯೂ ಇದೇ ನಗರದಲ್ಲಿ ಭೀಕರವಾದ ಸ್ಫೋಟ ಸಂಭವಿಸಿತ್ತು. ಹೊಟೇಲ್ ಒಂದರ ಹೊರಗಡೆ ಟ್ರಕ್‌ಗೆ ಬಾಂಬ್ ಅಳವಡಿಸಲಾಗಿದ್ದು, ಆಗ ನಡೆದ ಹತ್ಯಾಕಾಂಡದ ಘಟನೆಯಲ್ಲಿ 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.