Home News ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ 10 ವರ್ಷ ಶಿಕ್ಷೆ: ಮಸೂದೆಗೆ ವಿಧಾನಸಭೆ ಅಸ್ತು

ಅಸ್ಸಾಂನಲ್ಲಿ ಬಹುಪತ್ನಿತ್ವಕ್ಕೆ 10 ವರ್ಷ ಶಿಕ್ಷೆ: ಮಸೂದೆಗೆ ವಿಧಾನಸಭೆ ಅಸ್ತು

Hindu neighbor gifts plot of land

Hindu neighbour gifts land to Muslim journalist

ಗುವಾಹಟ: ಸಂಪೂರ್ಣವಾಗಿ ಬಹುಪತ್ನಿತ್ವವನ್ನು ನಿಷೇಧಿಸುವ ಮಸೂದೆಗೆ ಗುರುವಾರ ಅಸ್ಸಾಂ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ. ಭಾರತದಲ್ಲಿ ಈ ಮಸೂದೆಯನ್ನು ಜಾರಿ ಮಾಡಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಅಸ್ಲಾಂ ಪಾತ್ರವಾಗಿದೆ. ಒಂದಕ್ಕಿಂತ ಹೆಚ್ಚು ಜನರನ್ನು ವಿವಾಹ ಆಗುವ ಅಪರಾಧವೆಸಗುವವರಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ಜತೆಗೆ ದಂಡ ವಿಧಿಸಬಹುದು.

ಆದರೆ, ಈ ಕಾಯ್ದೆಯಿಂದ ಪರಿಶಿಷ್ಟ ಪಂಗಡ (ಎಸ್‌) ಮತ್ತು ಸಂವಿಧಾನದ 6ನೇ ಅಡಿಯಲ್ಲಿ ಸೂಚಿತವಾಗಿರುವ ಪ್ರದೇಶಗಳ ಜನರನ್ನು ಹೊರಗಿಡಲಾಗಿದೆ. ಅಲ್ಲದೆ ಸುಳ್ಳು ಸಂಗತಿಗಳನ್ನು ಮರೆಮಾಚುವ ಅಥವಾ ಬಹುಪತ್ನಿತ್ವ ವಿವಾಹದಲ್ಲಿ ಉದ್ದೇಶಪೂರ್ವಕವಾಗಿ ಭಾಗವಹಿಸುವ ಗ್ರಾಮದ ಮುಖ್ಯಸ್ಥ ಖಾಜಿ, ಪೋಷಕರು ಅಥವಾ ಕಾನೂನು ಪಾಲಕರು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ವರೆಗೆ ದಂಡ ವಿಧಿಸಬಹುದು ಎಂದು ಈ ಮಸೂದೆ ಹೇಳಿದೆ.

ಮಸೂದೆಯ ಬಗ್ಗೆ ಹೇಳಿಕೆ ನೀಡಿದ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ, ಈ ಮಸೂದೆ ಯಾವುದೇ ಧರ್ಮವನ್ನು ಲೆಕ್ಕಿಸಿಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಎಲ್ಲಾ ಸಮಾಜಗಳ ಜನರನ್ನು ಒಳಗೊಳಗೊಂಡಿದೆ ಎಂದರು. ಅಲ್ಲದೆ ಮುಂದಿನ ವರ್ಷವೂ ಸಿಎಂ ಆದರೆ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.