Home News Birthday Cake: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಸಾವು

Birthday Cake: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಸಾವು

Birthday Cake
Image Credit: AajTak

Hindu neighbor gifts plot of land

Hindu neighbour gifts land to Muslim journalist

Birthday Cake: ತನ್ನ ಹುಟ್ಟುಹಬ್ಬದಂದು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಕೇಕ್ ಅನ್ನು ತಿಂದು 10 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಅಲ್ಲದೇ ಕುಟುಂಬದ ನಾಲ್ವರ ಆರೋಗ್ಯವೂ ಹದಗೆಟ್ಟಿದೆ. ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಕೇಕ್ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯ ಕುಟುಂಬದವರು ನ್ಯಾಯಕ್ಕಾಗಿ ಸಿಎಂಗೆ ಮನವಿ ಮಾಡಿದ್ದಾರೆ. ಈ ಘಟನೆ ಪಂಜಾಬ್‌ನಲ್ಲಿ ನಡೆದಿದೆ.

ಪಟಿಯಾಲಾದ ಅಮನ್ ನಗರದ ನಿವಾಸಿ ಕಾಜಲ್ ಅವರು 10 ವರ್ಷದ ಮಾನ್ವಿಯ ಹುಟ್ಟುಹಬ್ಬ ಮಾರ್ಚ್ 24 ರಂದು ನಡೆದಿದ್ದು, ಹುಟ್ಟುಹಬ್ಬದಂದು ಸಂಜೆ 6 ಗಂಟೆಗೆ ಕಂಪನಿಯೊಂದರಲ್ಲಿ ಕೇಕ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದರು. ಈ ಕೇಕ್‌ ಸಂಜೆ 6:30 ಕ್ಕೆ ಮನೆಗೆ ಬಂದಿದೆ. ರಾತ್ರಿ 7.15ರ ಸುಮಾರಿಗೆ ಕೇಕ್ ಕತ್ತರಿಸಲಾಯಿತು. ಕೇಕ್ ತಿಂದ ಮಾನ್ವಿ ಹಾಗೂ ಕುಟುಂಬಸ್ಥರ ಆರೋಗ್ಯ ಹದಗೆಟ್ಟಿದೆ. ವಾಂತಿಯೂ ಆಯಿತು. ಹುಡುಗಿ ರಾತ್ರಿ ಮಲಗಿದ್ದಳು. ಬೆಳಗ್ಗೆ ಎದ್ದು ನೋಡಿದಾಗ ಬಾಲಕಿಯ ದೇಹ ತಣ್ಣಗೆ ಬಿದ್ದಿರುವುದು ಕಂಡು ಬಂದಿದ್ದು, ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಕೇಕ್ ತಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂಬ ದೂರು ಬಂದಿರುವುದಾಗಿ ಪಂಜಾಬ್ ಅಧಿಕಾರಿ ಗುರ್ಮೀತ್ ಸಿಂಗ್ ಹೇಳಿದ್ದಾರೆ. ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಕೇಕ್ ತುಂಡನ್ನು ವಶಪಡಿಸಿಕೊಂಡು ತನಿಖೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಬೇಕರಿ ಅಂಗಡಿ ಮಾಲೀಕರ ವಿರುದ್ಧ ಐಪಿಸಿ ಸೆಕ್ಷನ್ 273 ಮತ್ತು 304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ ವಿರುದ್ಧ ಸಿಡಿದೆದ್ದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ !!ಕಾರಣ?