Home Business ನಿಮ್ಮಲ್ಲಿ ನವಿಲಿನ ಚಿತ್ರ ಇರೋ 10ರೂಪಾಯಿ ನೋಟಿದೆಯೇ ? ಹಾಗಾದರೆ ನೀವು ಶ್ರೀಮಂತರು !

ನಿಮ್ಮಲ್ಲಿ ನವಿಲಿನ ಚಿತ್ರ ಇರೋ 10ರೂಪಾಯಿ ನೋಟಿದೆಯೇ ? ಹಾಗಾದರೆ ನೀವು ಶ್ರೀಮಂತರು !

Hindu neighbor gifts plot of land

Hindu neighbour gifts land to Muslim journalist

ಇದೀಗ ಅಪರೂಪದ ಹಳೇ ನಾಣ್ಯ, ನೋಟುಗಳನ್ನು ಸಂಗ್ರಹಿಸುವವರಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ವಾಸ್ತವವಾಗಿ ವಸ್ತುಗಳು ಹಳೆಯದಾದಾಗ, ಅವುಗಳನ್ನು ಆಂಟಿಕ್ ಪೀಸ್‌ ಸಾಲಿಗೆ ಸೇರುತ್ತವೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂತಹ ಪುರಾತನ ವಸ್ತುಗಳಿಗೆ ಸಾಕಷ್ಟು ಬೇಡಿಕೆಯಿದೆ. ಈ ಪುರಾತನ ವಸ್ತುಗಳಿಗೆ ಉತ್ತಮ ಹಣ ಕೂಡಾ ಸಿಗಲಿದೆ. ನಿಮಗೂ ಹಳೆಯ ನಾಣ್ಯಗಳು ಅಥವಾ ನೋಟುಗಳನ್ನು ಸಂಗ್ರಹಿಸುವ ಅಭ್ಯಾಸವಿದ್ದರೆ, ಹಳೆಯ ನಾಣ್ಯ, ನೋಟುಗಳ ಮೂಲಕ ಸುಲಭವಾಗಿ ಹಣ ಸಂಪಾದಿಸಬಹುದು. ಭಾರತದಲ್ಲಿ ಕೆಲವೊಂದು ಅಪರೂಪದ ನೋಟುಗಳು ಮತ್ತು ನಾಣ್ಯಗಳಿವೆ, ಅವುಗಳ ಮೌಲ್ಯವು ಮುಖಬೆಲೆಗಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ. ಅಂತಹ ಒಂದು 10 ರೂಪಾಯಿ ನೋಟಿನ ಬಗ್ಗೆ ಇಲ್ಲಿದೆ ಮಾಹಿತಿ.

ಹೌದು ಅತ್ಯಂತ ಹಳೆಯ 10 ರೂಪಾಯಿ ಮುಖಬೆಲೆಯ ನೋಟಿನ ವಿಶೇಷವೆಂದರೆ ಈ ನೋಟಿನ ಹಿಂಭಾಗದಲ್ಲಿ ನವಿಲಿನ ಆಕೃತಿಯಿದೆ. ನವಿಲಿನ ಚಿತ್ರವಿರುವ ಈ ನೋಟಿನ ಮುಖಬೆಲೆ ಕೇವಲ 10 ರೂಪಾಯಿಯಾಗಿದ್ದರೂ, ಮೌಲ್ಯ ಮಾತ್ರ ಸಾವಿರಾರು ರೂಪಾಯಿಗಳಷ್ಟಿದೆ. ಈ ನೋಟು ಮಾರುಕಟ್ಟೆಯಲ್ಲಿ ಬಹಳ ವಿರಳವಾಗಿ ಕಂಡು ಬರುತ್ತದೆ. ಈ ನೋಟು ನಿಮಗೆ ಸಿಕ್ಕಿದ್ರೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ನವಿಲಿನ ಚಿತ್ರವಿರೋ 10 ರೂಪಾಯಿಯ ನೋಟು ಇದ್ದರೆ, ಉತ್ತಮ ಆದಾಯವನ್ನು ಗಳಿಸಬಹುದು.

ಸದ್ಯ ನೋಟಿನ ಕ್ರಮಸಂಖ್ಯೆ ಉತ್ತಮವಾಗಿದ್ದರೆ ಅದರ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಉದಾಹರಣೆಗೆ ನೋಟಿನ ಕ್ರಮಸಂಖ್ಯೆಯಲ್ಲಿ 786 ಸಂಖ್ಯೆ ಇದ್ದರೆ, ಅದರ ಮೌಲ್ಯವು ಹೆಚ್ಚಾಗುತ್ತದೆ. ಇಂತಹ ನೋಟಿನ ಬೆಲೆ 30-40 ಸಾವಿರದವರೆಗೆ ಇರುತ್ತದೆ. ನಿಮ್ಮ ಬಳಿಯೇನಾದರೂ ಈ ನೋಟು ಇದ್ದರೆ ಅದನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು, Ebay, Quikr, Coinbazaar ನಂತಹ ಆನ್‌ಲೈನ್ ಪ್ಲಾಟ್ಫಾರ್ಮ್ ನೋಟುಗಳನ್ನು ಖರೀದಿಸುತ್ತವೆ.

ನೋಟನ್ನು ಮಾರಾಟ ಮಾಡುವ ವಿಧಾನ :

  • ನಿಮ್ಮ ಬಳಿ ಹಳೆಯ ನೋಟು ಅಥವಾ ನಾಣ್ಯಗಳಿದ್ದರೆ, ಅದನ್ನು ಆನ್‌ಲೈನ್‌ನಲ್ಲಿ Ebay, Quikr, Coinbazaar, OLX ನಲ್ಲಿ ಮಾರಾಟ ಮಾಡಬಹುದು.
  • ಈ ವೆಬ್‌ಸೈಟ್‌ನಲ್ಲಿ ಈ ಅಪರೂಪದ ನೋಟಿಗೆ ಖರೀದಿದಾರರು ಭಾರಿ ಮೊತ್ತವನ್ನು ಪಾವತಿಸುತ್ತಿದ್ದಾರೆ.
  • ನೋಟನ್ನು ಮಾರಾಟ ಮಾಡಲು ನೀವು ಮೊದಲು Ebay, Quikr, Coinbazaar,OLX ನಲ್ಲಿ ಮಾರಾಟಗಾರರಾಗಿ ನಿಮ್ಮನ್ನು ನೋಂದಾಯಿಸಿಕೊಳ್ಳಿ.
  • ಇದರ ನಂತರ, ಅದನ್ನು ಕ್ಲಿಕ್ ಮಾಡುವ ಮೂಲಕ ನೋಟಿನ ಎರಡೂ ಬದಿಗಳ ಫೋಟೋವನ್ನು ಅಪ್ಲೋಡ್ ಮಾಡಿ.
  • ಅದರ ನಂತರ ನಿಮ್ಮ ಮೊಬೈಲ್ ಸಂಖ್ಯೆ (Mobile number) ಮತ್ತು ಇ-ಮೇಲ್ ಐಡಿಯನ್ನು ನಮೂದಿಸಿ.
  • ವೆಬ್‌ಸೈಟ್‌ನಲ್ಲಿ (Website) ನೀವು ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿ.
  • ಯಾರಾದರೂ ಈ ನೋಟನ್ನು ಖರೀದಿಸಲು ಬಯಸಿದರೆ, ಅವರು ನಿಮ್ಮನ್ನು ಸಂಪರ್ಕಿಸುತ್ತಾರೆ.

ಈ ರೀತಿಯಾಗಿ ಹಳೆಯ ನಾಣ್ಯ, ನೋಟುಗಳ ಮೂಲಕ ಸುಲಭವಾಗಿ ಹಣ ಸಂಪಾದಿಸಬಹುದು.