Home Jobs Bengaluru job : ಬೆಂಗಳೂರಲ್ಲಿದೆ ಸರ್ಕಾರಿ ಉದ್ಯೋಗ, ತಿಂಗಳಿಗೆ ಬರೋಬ್ಬರಿ 80,000 ಸಂಬಳ ; ಅರ್ಜಿ...

Bengaluru job : ಬೆಂಗಳೂರಲ್ಲಿದೆ ಸರ್ಕಾರಿ ಉದ್ಯೋಗ, ತಿಂಗಳಿಗೆ ಬರೋಬ್ಬರಿ 80,000 ಸಂಬಳ ; ಅರ್ಜಿ ಹಾಕಲು ಇಂದೆ ಕೊನೆ ದಿನ

Sai recruitment 2023

Hindu neighbor gifts plot of land

Hindu neighbour gifts land to Muslim journalist

Sai recruitment 2023 : ರಾಜ್ಯ ರಾಜಧಾನಿ ಬೆಂಗಳೂರಿನಿಂದ ಯುವ ಜನತೆಗೊಂದು ಭರ್ಜರಿ ಸುದ್ದಿ ಬಂದಿದೆ. ಉದ್ಯೋಗ ಹುಡುಕುತ್ತಿರುವವರಿಗಂತೂ ಬೊಂಬಾಟ್ ನ್ಯೂಸ್. ಹೌದು, ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India ) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ(Sai recruitment 2023).ಒಟ್ಟು 15 ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಸಂಬಳವೂ 80,000ದಷ್ಟಿದೆ. ಇದೀಗ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಅಂದಹಾಗೆ ಅಕ್ಟೋಬರ್ 11, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​​​ಲೈನ್(Online) ಮೂಲಕ ಅರ್ಜಿ ಸಲ್ಲಿಸಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಉದ್ಯೋಗ, ವೇತನ, ವಿದ್ಯಾರ್ಹತೆ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಸಂಸ್ಥೆ- ಭಾರತೀಯ ಕ್ರೀಡಾ ಪ್ರಾಧಿಕಾರ
ಹುದ್ದೆ – ಜೂನಿಯರ್ ಕನ್ಸಲ್ಟೆಂಟ್
ಒಟ್ಟು ಹುದ್ದೆ – 15
ವಿದ್ಯಾರ್ಹತೆ- ಬಿಇ/ಬಿ.ಟೆಕ್, ಎಂಬಿಬಿಎಸ್. ಸ್ನಾತಕೋತ್ತರ ಪದವಿ
ವೇತನ – ಮಾಸಿಕ ₹ 80,250
ಉದ್ಯೋಗದ ಸ್ಥಳ- ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನ – ಅಕ್ಟೋಬರ್ 11, 2023 (

ಉದ್ಯೋಗ ಮತ್ತು ವಿದ್ಯಾರ್ಹತೆ:
• ಜೂನಿಯರ್ ಕನ್ಸಲ್ಟೆಂಟ್ (ಪರ್ಫಾರ್ಮೆನ್ಸ್​ ಮಾನಿಟರಿಂಗ್), ಜೂನಿಯರ್ ಕನ್ಸಲ್ಟೆಂಟ್ (ಜನರಲ್)- CA or ICWA, LLB, ಪದವಿ, ಬಿಇ/ಬಿ.ಟೆಕ್, ಎಂಬಿಬಿಎಸ್. ಸ್ನಾತಕೋತ್ತರ ಪದವಿ
• ಜೂನಿಯರ್ ಕನ್ಸಲ್ಟೆಂಟ್ (ಇನ್​ಫ್ರಾಸ್ಟ್ರಕ್ಚರ್)- ಸಿವಿಲ್ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್
• ಜೂನಿಯರ್ ಕನ್ಸಲ್ಟೆಂಟ್ (ಅಕೌಂಟೆಂಟ್ & ಫೈನಾನ್ಸ್​)- CA, ICMA, ಅಕೌಂಟ್ಸ್​/ ಫೈನಾನ್ಸ್​/ ಕಾಮರ್ಸ್​ನಲ್ಲಿ ಸ್ನಾತಕೋತ್ತರ ಪದವಿ, ಫೈನಾನ್ಶಿಯಲ್ ಮ್ಯಾನೇಜ್​ಮೆಂಟ್​/ ಅಕೌಂಟಿಂಗ್​​ನಲ್ಲಿ ಸ್ನಾತಕೋತ್ತರ ಪದವಿ ಡಿಪ್ಲೊಮಾ
• ಜೂನಿಯರ್ ಕನ್ಸಲ್ಟೆಂಟ್ (ಲೀಗಲ್)- ಕಾನೂನು ವಿಭಾಗದಲ್ಲಿ ಪದವಿ, LLB

ವಯೋಮಿತಿ:
ಭಾರತೀಯ ಕ್ರೀಡಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ: ಮಾಸಿಕ ₹ 80,250
ಉದ್ಯೋಗದ ಸ್ಥಳ: ಗಾಂಧಿನಗರ, ಬೆಂಗಳೂರು, ಕೊಲ್ಕತ್ತಾ

ಆಯ್ಕೆ ಪ್ರಕ್ರಿಯೆ:
ಕ್ವಾಲಿಫಿಕೇಶನ್
ಅನುಭವ
ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 11, 2023 (ನಾಳೆ) . ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಇದನ್ನೂ ಓದಿ: Congress Government: ದಿಢೀರ್ ಎಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಪ್ರಬಲ ನಾಯಕಿ – ಕೈ ಪಾಳಯದಲ್ಲಿ ಭಾರೀ ಸಂಚಲನ !!