Home News ಬೆಂಗಳೂರು Bengaluru: ಚಾಲಕನ ನಿರ್ಲಕ್ಷ್ಯದಿಂದ ಏರ್‌ಪೋರ್ಟ್‌ನಲ್ಲಿ ಬಸ್​​ ಕಂಬಕ್ಕೆ ಡಿಕ್ಕಿ; 10ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

Bengaluru: ಚಾಲಕನ ನಿರ್ಲಕ್ಷ್ಯದಿಂದ ಏರ್‌ಪೋರ್ಟ್‌ನಲ್ಲಿ ಬಸ್​​ ಕಂಬಕ್ಕೆ ಡಿಕ್ಕಿ; 10ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

Bengaluru

Hindu neighbor gifts plot of land

Hindu neighbour gifts land to Muslim journalist

Bengaluru : ಚಾಲಕನ ನಿರ್ಲಕ್ಷ್ಯದಿಂದ ಗ್ರಾಮಾಂತರ ಜಿಲ್ಲೆ (Bengaluru) ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೀಕರ ಅಪಘಾತಗೊಂಡು, 17 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಬೆಳಕಿಗೆ ಬಂದಿದೆ.

ಜೂನ್‌ 18 (ಇಂದು ) ಬೆಳಗ್ಗೆ 5.15ರ ವೇಳೆಗೆ ಟರ್ಮಿನಲ್ 2 ರಿಂದ ಪ್ರಯಾಣಿಕರನ್ನ ಕರೆದೋಗುತ್ತಿದ್ದಾಗ ಟರ್ಮಿನಲ್ 1 ಕ್ಕೆ ತೆರಳುವ ಶೆಟಲ್ ಬಸ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಗೊಂಡಿದೆ.

ಅಪಘಾತದಿಂದ ಪ್ರಯಾಣಿಕರು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇವೈದ್ಯಕೀಯ ಚಿಕಿತ್ಸೆಗಾಗಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಪಘಾತಗೊಂಡ ಬಸ್‌ ಬೆಂಗಳೂರು ವಿಮಾನ ನಿಲ್ದಾಣದ T1 ಮತ್ತು T2 ನಡುವೆ ಕಾರ್ಯನಿರ್ವಹಿಸುತ್ತಿದ್ದ ಶಟಲ್ ಬಸ್ ಆಗಿತ್ತು. T2 ಆಗಮನ ನಿರ್ಗಮನ ರಸ್ತೆಯ ಬಳಿ ಕಂಬಕ್ಕೆ ಡಿಕ್ಕಿ ಹೊಡೆದು 10 ಜನರಿಗೆ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆ ಕರೆದೊಯ್ಯಲಾಗಿದೆ ಎಂದು ಬಿಐಎಎಲ್ ವಕ್ತಾರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಾದಕ ವ್ಯಸನಿಗಳೇ ಎಚ್ಚರ..! ಆಲ್ಕೋಹಾಲ್ ಸೇವನೆಯಿಂದ ʻಯಕೃತ್ತಿನ ಕ್ಯಾನ್ಸರ್ʼ ಪ್ರಕರಣ ಶೇ. 40 ರಷ್ಟು ಹೆಚ್ಚಳ.!