

Bengaluru : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹಿಂದಿ ಭಾಷಿಕ ಬ್ಲಾಗಾರ್ ಯುವತಿಯೊಬ್ಬಳು ರಸ್ತೆಯಲ್ಲಿ ವಿಡಿಯೋ ಮಾಡುತ್ತಾ ಹೋಗುವಾಗ ಸೈಕಲ್ ಸವಾರ ಹುಡುಗನೊಬ್ಬ ಈ ಯುವತಿಯ ಎದೆಭಾಗವನ್ನು ಮುಟ್ಟಿ ಪರಾರಿ ಆಗಿದ್ದು, ಯುವತಿ ಕಣ್ಣೀರು ಹಾಕಿದ್ದಾಳೆ. ಈ ಕುರಿತಾಗಿ ಯುವತಿ ಕಣ್ಣೀರು ಹಾಕಿ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ಕಳೆದ ಸೋಮವಾರ ಕೆಲಸವನ್ನು ಮುಗಿಸಿಕೊಂಡು ತನ್ನ ರೂಮಿನತ್ತ ನಡೆದುಕೊಂಡು ಹೋಗುವಾಗ ಬಿಟಿಎಂ ಲೇಔಟ್‌ನಲ್ಲಿ ಸೆಲ್ಫಿ ವಿಡಿಯೋ ಚಿತ್ರೀಕರಿಸುತ್ತಾ ವ್ಲಾಗ್ ಮಾಡುತ್ತಿದ್ದಳು. ಎದುರಿಗೆ ಸೈಕಲ್‌ನಲ್ಲಿ ಬಂದ ಯುವಕನೊಬ್ಬ ಮೊದಲು ಈ ಯುವತಿಗೆ ಹಾಯ್ ಮಾಡುತ್ತಾನೆ. ನಂತರ, ಆಕೆಯ ಎದೆಗೆ ಕೈ ಹಾಕಿ ಕಿರುಕುಳ ಕೊಟ್ಟು ಪರಾರಿ ಆಗಿದ್ದಾನೆ. ಇನ್ನು ವಿಡಿಯೋದಲ್ಲಿ ಆತನ ಮುಖ ಕಾಣದಂತೆ ತಪ್ಪಿಸಿಕೊಂಡಿದ್ದಾನೆ. ಆದರೆ, ವಿಡಿಯೋದಲ್ಲಿ ಯುವಕ ಎದೆಭಾಗಕ್ಕೆ ಕೈ ಹಾಕಿ ಕಿರುಕುಳ ನೀಡಿರುವುದು ಸಹ ಸೆರೆಯಾಗಿದೆ.
https://twitter.com/karnatakaportf/status/1854009605246054478
ಬೆಂಗಳೂರು ನಗರದಲ್ಲಿ ಯುವತಿಯರಿಗೆ ಸುರಕ್ಷತೆ ಇಲ್ಲವೇ ಎಂಬ ಆತಂಕ ಜನರಲ್ಲಿ ಎದುರಾಗಿದೆ. ಕೆಲಸ ಮುಗಿಸಿ ವ್ಲಾಗಿಂಗ್ ಮಾಡುತ್ತಿದ್ದ ನೇಹಾಗೆ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ಹೇಳುವ ಪ್ರಕಾರ, ಸೈಕಲ್‌ನಲ್ಲಿ ಬಂದ ಹುಡುಗನೊಬ್ಬ ನನಗೆ “ಹಾಯ್” ಎಂದು ಹೇಳಿ, ಇದ್ದಕ್ಕಿದ್ದಂತೆ ಎದೆ ಭಾಗಕ್ಕೆ ಮುಟ್ಟಿ ಕಿರುಕುಳ ನೀಡಿ ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಹೇಳಿಕೊಂಡಿದ್ದಾಳೆ.
ನೇಹಾ ತಮ್ಮ ವಿಡಿಯೋದಲ್ಲಿ ವಿವರಿಸಿದ ಘಟನೆ ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಸಾಕಷ್ಟು ಬೆಂಬಲ ಸಿಕ್ಕಿದ್ದರೂ, ಪೊಲೀಸರಿಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.













