Home News ಉಡುಪಿ ದ.ಕ.-ಉಡುಪಿ : ಕೋಟ ಶ್ರೀನಿವಾಸ ಪೂಜಾರಿ ,ಮಂಜುನಾಥ ಭಂಡಾರಿ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಗೆಲುವು

ದ.ಕ.-ಉಡುಪಿ : ಕೋಟ ಶ್ರೀನಿವಾಸ ಪೂಜಾರಿ ,ಮಂಜುನಾಥ ಭಂಡಾರಿ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತದಲ್ಲಿ ಗೆಲುವು

Hindu neighbor gifts plot of land

Hindu neighbour gifts land to Muslim journalist

ವಿಧಾನ ಪರಿಷತ್ ಚುನಾವಣೆಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ದ.ಕ ಕ್ಷೇತ್ರದ ಮತ ಎಣಿಕೆ ಕಾರ್ಯವು ಮುಕ್ತಾಯ ಗೊಂಡಿದ್ದು, ಬಿಜೆಪಿಯ ಕೋಟಾ ಶ್ರೀನಿವಾಸ ಪೂಜಾರಿ ಮತಗಳನ್ನು ಪಡೆದು ಭರ್ಜರಿ ಮತಗಳ ಅಂತರದಲ್ಲಿ ಪ್ರಥಮ ಪ್ರಾಶಸ್ತ್ಯ ದ ಗೆಲುವು ಸಾಧಿಸಿದ್ದಾರೆ.ಮಂಜುನಾಥ ಭಂಡಾರಿ ಅವರೂ ಪ್ರಥಮ‌ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸಿದ್ದಾರೆ.

ದ.ಕ.ಜಿಲ್ಲೆಯ 231 ಹಾಗೂ ಉಡುಪಿ ಜಿಲ್ಲೆಯ 158 ಸಹಿತ ಎರಡು ಜಿಲ್ಲೆಗಳ ಒಟ್ಟು 389 ಮತಗಟ್ಟೆಗಳಲ್ಲಿ ಒಟ್ಟ 6,040 ಮತದಾರರ ಪೈಕಿ 6,013 ಮಂದಿ ಮತದಾನವಾಗಿತ್ತು. ಇದರಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ 3697 ಮತಗಳನ್ನು ಪಡೆದುಕೊಂಡು ಪ್ರಥಮ ಪ್ರಾಶಸ್ತ್ಯ ದಲ್ಲಿ ಗೆಲುವು ಸಾಧಿಸಿ ಮೂರನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.

ಕಾಂಗ್ರೆಸ್ ನ ಮಂಜುನಾಥ ಭಂಡಾರಿ 2077 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಎಸ್.ಡಿ.ಪಿ.ಐಯ ಶಾಫಿ ಬೆಳ್ಳಾರೆ 204 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಒಟ್ಟು 56 ಮತಗಳು ಅಸಿಂಧುಗೊಂಡಿದೆ.