Home News ಉಡುಪಿ Udupi Crime News: ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಸಿಕ್ಕಿದೆ ತಿರುವು !

Udupi Crime News: ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಸಿಕ್ಕಿದೆ ತಿರುವು !

Udupi murder case

Hindu neighbor gifts plot of land

Hindu neighbour gifts land to Muslim journalist

Udupi Murder Case: ನೇಜಾರುವಿನ ತೃಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಕುರಿತಂತೆ ಮಾತೊಂದು ಕೇಳಿ ಬರುತ್ತಿದೆ. ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ, ಹಣ ಹಿಂದಿರುಗಿಸುವ ವಿಚಾರದಲ್ಲಿ ಈ ಕೊಲೆ ನಡೆದಿದೆಯೇ ಎಂದು ಸಂಶಯಿಸಲಾಗಿದೆ. ಹಸೀನಾ ಅವರನ್ನು ಇಲ್ಲಿ ಟಾರ್ಗೆಟ್‌ ಮಾಡಲಾಗಿದೆಯೇ? ಎಂಬ ಸಂಶಯವೊಂದು ಮೂಡಿ ಬಂದಿದೆ. ತಾಯಿಯ ರಕ್ಷಣೆಗೆ ಬಂದ ಮೂವರು ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.

ಮೊದಲಿಗೆ ಈ ಕೊಲೆ ಘಟನೆ ನಡೆದಾಗ, ಆರಂಭದಲ್ಲಿ ಜಮೀನಿನ ತಗಾದೆ ಇರಬಹುದೇ ಎಂಬ ಆರೋಪವೊಂದು ಕೇಳಿ ಬಂದಿತ್ತು. ಆದರೆ ಈಗ ಲಕ್ಷಾಂತರ ರೂಪಾಯಿ ವ್ಯವಹಾರವೇ ಈ ಕೊಲೆಗೆ ಕಾರಣವಾ? ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಹಸೀನಾ ಅವರನ್ನು ಆರರಿಂದ ಏಳು ಬಾರಿ ಚಾಕು ಹಾಕಿ ಕೊಂದಿರುವುದು. ತಾಯಿಯ ರಕ್ಷಣೆಗೆ ಬಂದ ಇಬ್ಬರು ಹೆಣ್ಣು ಮಕ್ಕಳನ್ನು ಕೂಡಾ ಕೊಲೆ ಮಾಡಲಾಗಿದೆ. ಗಲಾಟೆ ಕೇಳಿ ಮನೆಗೆ ಬರುತ್ತಿದ್ದ ಹದಿನಾಲ್ಕು ವರ್ಷದ ಮಗನನ್ನು ಕೂಡಾ ಕೊಲೆ ಮಾಡಲಾಗಿದೆ.

ಮೂಲತಃ ಕೋಡಿಬೆಂಗ್ರೆಯ ಪ್ರಸ್ತುತ ನೇಜಾರು ನಿವಾಸಿಯಾದ ಹಸೀನಾ (48), ಇವರ ಮಕ್ಕಳಾದ ಮಂಗಳೂರಿನಲ್ಲಿ ಲಾಜಿಸ್ಟಿಕ್ಸ್ ಒಂದರಲ್ಲಿ ಕೆಲಸದಲ್ಲಿರುವ ಅಫ್ನಾನ್ (23), ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಅಯ್ನಾಝ್ (21) ಹಾಗೂ 8 ನೇ ತರಗತಿಯ ಅಸೀಮ್(12) ಇವರು ಬರ್ಬರವಾಗಿ ಕೊಲೆಯಾದವರು. ಕೊಲೆಯಾದ ಹಸೀನಾ ಅವರ ಅತ್ತೆ ಹಾಜಿರಾ (70) ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದು, ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಡ್ಡಿ ವ್ಯವಹಾರಕ್ಕೆ ಹಣವನ್ನು ನೀಡಿದ್ರಾ ಎಂಬ ಪ್ರಶ್ನೆ ಮೂಡಿ ಬರುತ್ತಿದೆ. ಈ ಭೀಕರ ಹತ್ಯೆ ಕುರಿತು ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪ್ರಮುಖ ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದು, ಕೇವಲ 15 ನಿಮಿಷದಲ್ಲಿ ಹತ್ಯೆ ಮಾಡಿದ ವ್ಯಕ್ತಿಯ ತಲಾಷೆಯಲ್ಲಿ ಪೊಲೀಸರಿದ್ದಾರೆ.