Home News ಉಡುಪಿ Udupi: ನೀರಿನ ಡ್ರಮ್ ಒಳಗಡೆ ಪತ್ತೆಯಾಯಿತು ಬಸ್ ಡ್ರೈವರ್ ಶವ – ನಡೆದದ್ದು ಕೊಳೆಯೋ?...

Udupi: ನೀರಿನ ಡ್ರಮ್ ಒಳಗಡೆ ಪತ್ತೆಯಾಯಿತು ಬಸ್ ಡ್ರೈವರ್ ಶವ – ನಡೆದದ್ದು ಕೊಳೆಯೋ? ಆತ್ಮಹತ್ಯೆಯೋ?

Hindu neighbor gifts plot of land

Hindu neighbour gifts land to Muslim journalist

Udupi : ಉಡುಪಿಯಲ್ಲಿ ನೀರಿನ ಡ್ರಮ್ ಒಳಗಡೆ ಬಸ್ ಚಾಲಕನ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯೂ ಅಥವಾ ಆತ್ಮಹತ್ಯೆಯು ಎಂದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಹೌದು, ಉಡುಪಿ(Udupi) ಜಿಲ್ಲೆಯ ಕೊಡವೂರು ಗ್ರಾಮದ ಪಾಳೆಕಟ್ಟೆ ಒಂದನೇ ಕ್ರಾಸ್‌ನಲ್ಲಿ ನೀರು ತುಂಬಿಸಿಟ್ಟಿದ್ದ ಪ್ಲಾಸ್ಟಿಕ್ ಡ್ರಮ್‌ನೊಳಗೆ ಸಂಶಯಾಸ್ಪದ ರೀತಿಯಲ್ಲಿ ಬಸ್ ಚಾಲಕನ ಮೃತ ದೇಹ ಪತ್ತೆಯಾಗಿದೆ. ಪಾಳೆಕಟ್ಟೆ ನಿವಾಸಿ ಪ್ರಸಾದ್‌ (40) ಸಂಶಯಾಸಪದವಾಗಿ ಸಾವನ್ನಪ್ಪಿದ್ದ ಚಾಲಕನಾಗಿದ್ದಾನೆ.

ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಇವರು, ಸಿಟಿ ಬಸ್ ಚಾಲಕ ರಾಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪ್ರಸಾದ್ ಮನೆಯ ಬಳಿ ಇದ್ದ ನೀರು ತುಂಬಿಸಿಟ್ಟಿದ್ದ ಪ್ಲಾಸ್ಟಿಕ್ ಡ್ರಮ್‌ನ ಒಳಗೆ ಸೊಂಟದಿಂದ ಮೇಲ್ಭಾಗ ದಿಂದ ಹೊರಗೆ ಚಾಚಿಕೊಂಡು ಮೇಲ್ಮುಖವಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಮೃತರ ಕುತ್ತಿಗೆ, ಮುಖ ಭಾಗದಿಂದ ರಕ್ತ ಬರುತ್ತಿದ್ದು, ಮುಖ ಊದಿ ಕೊಂಡಿದೆ. ಇವರ ಮರಣದ ಕಾರಣ ತಿಳಿದು ಬಂದಿಲ್ಲ ಎಂದು ದೂರಲಾಗಿದೆ. ಮೃತದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು ಸಂಶಯಕ್ಕೆ ಎಡೆಮಾಡಿದೆ. ಆತ್ಮಹತ್ಯೆ ಎಂದು ಬಿಂಬಿಸಿರುವ ಈ ಘಟನೆ ಹಲವು ಸಂಶಯಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿರುವುದರಿಂದ ಊರಿನ ಸುತ್ತಮುತ್ತ ಭಯದ ವಾತಾವರಣ ನಿರ್ಮಾಣವಾಗಿದೆ.

ಸಧ್ಯ ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸಾದ್ ಸಾವು ಹಲವು ಸಂಶಯಕ್ಕೆ ಎಡೆಮಾಡಿದ್ದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.