Home News ಉಡುಪಿ ರಾಮ್ ಸೇನಾ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ | ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ದಕ್ಷಿಣ ಕನ್ನಡ...

ರಾಮ್ ಸೇನಾ ಕಾರ್ಯಕರ್ತನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ | ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ರಾಮ್ ಸೇನಾ ಆಗ್ರಹ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ವಾಹನದ ಇನ್ಸೂರೆನ್ಸ್ ನೆಪದಲ್ಲಿ ವ್ಯಕ್ತಿಯೊಬ್ಬನನ್ನು ಉಡುಪಿಯ ರಾಜಾಂಗಣಕ್ಕೆ ಕರೆಸಿಕೊಂಡ ದುಷ್ಕರ್ಮಿಗಳು ಏಕಾಏಕಿ ರಾಡ್ ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವ್ಯಕ್ತಿ ಉಡುಪಿ ರಾಮ್ ಸೇನಾ ಕಾರ್ಯಕರ್ತ ಬಸವರಾಜ್ ಎಂದು ಗುರುತಿಸಲಾಗಿದೆ.

ವ್ಯಕ್ತಿಯ ಬೆನ್ನು, ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮ್ ಸೇನಾ ಸಂಘಟನೆಯು ಈ ಘಟನೆಯನ್ನು ಖಂಡಿಸುತ್ತದೆ. ಈ ಹಲ್ಲೆಯ ಘಟನೆ ಬಗ್ಗೆ ರಾಮ್ ಸೇನಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಕಿರಣ್ ಅಮೀನ್ ಉರ್ವ ಸ್ಟೋರ್ ಮಾತನಾಡಿ ” ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ನಮ್ಮ ಕಾರ್ಯಕರ್ತನ ಮೇಲೆ ಯಾರೇ ಹಲ್ಲೆ ನಡೆಸಿದರೂ ಯಾವುದೇ ಜಾತಿ-ಮತ ಪಕ್ಷ ನೋಡದೇ ಖಂಡಿಸುತ್ತೇವೆ. ರಾಜಕೀಯ ಕಾರಣಕ್ಕಾಗಿ ನಮ್ಮ ಸಂಘಟನೆಯ ಕಾರ್ಯಕರ್ತರ ಮೇಲೆ ನಡೆಸುವ ದಾಳಿಯನ್ನು ಯಾವುದೇ ಕಾರಣಕ್ಕೂ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮವರ ಮೇಲೆ ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ರಾಮ್ ಸೇನಾ ಕಾರ್ಯಕರ್ತರು ಬೀದಿಗಿಳಿದು ತೀವ್ರವಾದ ಹೋರಾಟವನ್ನು ನಡೆಸಲಾಗುವುದು ಹಾಗೂ ಮುಂದೆ ನಡೆಯುವ ಎಲ್ಲಾ ಘಟನೆಗಳಿಗೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನೇರ ಕಾರಣವಾಗಿರುತ್ತಾರೆ ” ಎಂದು ಎಚ್ಚರಿಕೆ ನೀಡಿದ್ದಾರೆ.