Home News ಉಡುಪಿ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಉತ್ತಮ ಸಾಧನೆಗಾಗಿ ತರಬೇತಿಗೆ ಕಾರ್ಕಳದ ಅಕ್ಷತಾ ಪೂಜಾರಿ ಆಯ್ಕೆ

ಪ್ಯಾರಿಸ್ ಒಲಿಂಪಿಕ್‌ನಲ್ಲಿ ಉತ್ತಮ ಸಾಧನೆಗಾಗಿ ತರಬೇತಿಗೆ ಕಾರ್ಕಳದ ಅಕ್ಷತಾ ಪೂಜಾರಿ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

ಕಾರ್ಕಳ : ಅಮೃತ ಕ್ರೀಡಾ ದತ್ತು ಯೋಜನೆ ಅಡಿಯಲ್ಲಿ ಪ್ಯಾರೀಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಲು ಪದಕ ವಿಜೇತ ಸಾಮರ್ಥ್ಯವುಳ್ಳ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿತ್ತು. ಮುಂದುವರೆದು, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಆಗಿರುವ ಕಾರ್ಕಳದ ಕುಮಾರಿ ಅಕ್ಷತಾ ಪೂಜಾರಿ, ಇವರು ಒಲಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆಯನ್ನು ಹೊಂದಿದ್ದು, ಇವರನ್ನು ಪ್ರೋತ್ಸಾಹಿಸಿದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದೆಂಬ ಕಾರಣದಿಂದ ಕುಮಾರಿ ಅಕ್ಷತಾ ಪೂಜಾರಿ, ಪವರ್ ಲಿಫ್ಟಿಂಗ್ ಕ್ರೀಡಾಪಟು ಇವರನ್ನು 76ನೇ ಕ್ರೀಡಾಪಟುವಾಗಿ ಆಯ್ಕೆ ಮಾಡಲಾಗಿದೆ.

ಕಾರ್ಕಳ ಶಾಸಕ ,ಸಚಿವ ವಿ‌.ಸುನೀಲ್ ಕುಮಾರ್ ಅವರು ಈ ಆಯ್ಕೆಗಾಗಿ ವಿಶೇಷ ಮುತುವರ್ಜಿ ವಹಿಸಿದ್ದಾರೆ.