Home National ಅಂಗನವಾಡಿಗೆ ಹೋದ ಹೆಂಡತಿ ಸಂಜೆಯಾದರೂ ಮನೆಗೆ ವಾಪಾಸು ಬರದಿದ್ದನ್ನು ಗಮನಿಸಿದ ಗಂಡನಿಗೆ ಕಾದಿತ್ತು ಶಾಕಿಂಗ್‌ ನ್ಯೂಸ್‌!!

ಅಂಗನವಾಡಿಗೆ ಹೋದ ಹೆಂಡತಿ ಸಂಜೆಯಾದರೂ ಮನೆಗೆ ವಾಪಾಸು ಬರದಿದ್ದನ್ನು ಗಮನಿಸಿದ ಗಂಡನಿಗೆ ಕಾದಿತ್ತು ಶಾಕಿಂಗ್‌ ನ್ಯೂಸ್‌!!

image credit source: vijayavani

Hindu neighbor gifts plot of land

Hindu neighbour gifts land to Muslim journalist

ಮಹಿಳಾ ಸಿಬ್ಬಂದಿಯೊಬ್ಬರು ಅಂಗನವಾಡಿ ಕೇಂದ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ಬಾಲಸೋರ್‌ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಶುಕ್ರವಾರ ನಡೆದಿದೆ.

ಪ್ರಜ್ಯನಾ ಪರಿಮಿತ ದಾಸ್‌ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪೊಲೀಸ್‌ ಮೂಲಗಳ ಪ್ರಕಾರ, ಎಂದಿನಂತೆ ಪರಿಮಿತ ದಾಸ್‌ ಶುಕ್ರವಾರ ಬೆಳಗ್ಗೆ ಅಂಗನವಾಡಿ ಕೇಂದ್ರಕ್ಕೆ ಹೋಗಿದ್ದಾಳೆ. ಸಂಜೆ ಎಲ್ಲರೂ ತಮ್ಮ ತಮ್ಮ ಮನೆಗೆ ಹೋಗಿದ್ದರೂ, ಆಕೆ ಮಾತ್ರ ವಾಪಾಸ್‌ ಬರದೇ ಇರುವುದನ್ನು ಕಂಡು ಹೆದರಿದ ಪತಿ ಬಿಸ್ಮಿತ್‌ ರಂಜನ್‌ ದಾಸ್‌. ಹಾಗಾಗಿ ಹುಡುಕಿಕೊಂಡು ಅಂಗನವಾಡಿಗೆ ಹೋದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದನ್ನು ಕಂಡ ಪತಿ ಶಾಕ್‌ಗೆ ಒಳಗಾಗಿದ್ದಾನೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರೂ, ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾಳೆ ಎಂದು ಡಾಕ್ಟರ್‌ ಹೇಳಿದ್ದಾಳೆ. ಆಕೆ ಕೌಟುಂಬಿಕ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ಆರೋಪ ಮಾಡಿದ್ದಾರೆ. ಮೃತಳ ಪತಿ ಮದ್ಯವ್ಯಸನಿಯಾಗಿದ್ದು, ಆತನ ಹೆತ್ತವರು ಆಕೆಗೆ ಹಿಂಸೆ ಮಾಡುತ್ತಿದ್ದು ಹಾಗೂ ಜಗಳವಾಡುತ್ತಿದ್ದರು ಎಂದು ಆರೋಪ ಮಾಡಿದ್ದಾರೆ.