Home National Sardar Patel: ಇಂದಿರಾ ಗಾಂಧಿ ಮಾತ್ರವಲ್ಲ, ಸರ್ದಾರ್ ವಲ್ಲಭಾಯ್ ಪಟೇಲ್ ಕೂಡ RSS ನಿಷೇಧ ಮಾಡಿದ್ರು...

Sardar Patel: ಇಂದಿರಾ ಗಾಂಧಿ ಮಾತ್ರವಲ್ಲ, ಸರ್ದಾರ್ ವಲ್ಲಭಾಯ್ ಪಟೇಲ್ ಕೂಡ RSS ನಿಷೇಧ ಮಾಡಿದ್ರು ಗೊತ್ತಾ ?! ಯಾಕಾಗಿ?

Sardar Patel

Hindu neighbor gifts plot of land

Hindu neighbour gifts land to Muslim journalist

Sardar Patel: ಸರ್ಕಾರಿ ನೌಕರರು(Government Employees) ಆರೆಸ್ಸೆಸ್(RSS) ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಮತ್ತು ಅದರ ಜೊತೆ ಸಂಪರ್ಕ ಇಟ್ಟುಕೊಳ್ಳಬಾರದು ಎಂಬುದು 1966ರಲ್ಲಿ ಇಂದಿರಾ ಗಾಂಧಿ ಆಡಳಿತಾವಧಿಯಲ್ಲಿ ಮಾಡಲಾಗಿದ್ದ ಆದೇಶವನ್ನು ಮೋದಿ ಸರ್ಕಾರ ರದ್ದು ಮಾಡಿದೆ. ಈ ಮೂಲಕ ಬರೋಬ್ಬರಿ 58 ವರ್ಷಗಳ ಹಿಂದಿನ ಕಾನೂನೊಂದು ಕೊನೆಯಾಗಿದೆ.

ಇಂದಿರಾಗಾಂಧಿ 1966ರಲ್ಲಿ ಸರ್ಕಾರಿ ನೌಕರರು RSS ಸೇರುವುದನ್ನು ಮಾತ್ರ ನಿಷೇಧ ಮಾಡಿದ್ದರು. ಆದರೆ ಸರ್ದಾರ್ ವಲ್ಲಭಭಾಯ್ ಪಟೇಲ್(Sardar Patel) ಅವರೇ ಕುದ್ದಾಗಿ RSS ಸಂಘಟನೆಯನ್ನೇ ಬ್ಯಾನ್ ಮಾಡಿದ್ದರು. ಹೌದು, 1948ರಲ್ಲಿ ಬ್ಯಾನ್ ಮಾಡಿದ್ದರು. ಆದರೆ ಮತ್ತೆ ನಂತರದ ಒಂದು ವರ್ಷದಲ್ಲಿ ಆ ನಿಷೇಧವನ್ನು ವಾಪಸ್ ಪಡೆದರು. ಹಾಗಿದ್ರೆ ಪಟೇಲ್ ಅವರು ಯಾಕೆ ಸಂಘಟನೆಯನ್ನು ನಿಷೇಧಿಸಿದ್ರು? 1948ರಲ್ಲಿ ಏನಾಗಿತ್ತು?

1948ರಲ್ಲಿ ನಿಷೇಧ ಏಕೆ?
1948ರಲ್ಲಿ ಮಹಾತ್ಮ ಗಾಂಧೀಜಿ ಅವರ ಹತ್ಯೆ ಬಳಿಕ ಆರ್‌ಎಸ್‌ಎಸ್ ನಿಷೇಧಿಸಲಾಗಿತ್ತು. ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರು ನಿಷೇಧ ಹೇರಿದ್ದರು. ಫೆಬ್ರವರಿ 1948 ರಲ್ಲಿ, ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರು “ನಮ್ಮ ದೇಶದಲ್ಲಿ ಕೆಲಸ ಮಾಡುತ್ತಿರುವ ದ್ವೇಷ ಮತ್ತು ಹಿಂಸಾಚಾರದ ಶಕ್ತಿಗಳನ್ನು ಬೇರುಸಹಿತ ಕಿತ್ತೊಗೆಯಲು ಮತ್ತು ರಾಷ್ಟ್ರದ ಸ್ವಾತಂತ್ರ್ಯವನ್ನು ಹಾಳುಮಾಡಲು ಮತ್ತು ಅವರ ನ್ಯಾಯಯುತ ಹೆಸರನ್ನು ಮಂಕಾಗಿಸಲು ಹಿಂದೂ ದೇಹವನ್ನು ನಿರ್ಬಂಧಿಸಲಾಗಿದೆ” ಎಂದು ಸರ್ಕಾರದ ಅಧಿಸೂಚನೆಯನ್ನು ಹೊರಡಿಸಿದ್ದರು.

“ಸಂಘದ ಸದಸ್ಯರು ಅನಪೇಕ್ಷಿತ ಮತ್ತು ಅಪಾಯಕಾರಿ ಚಟುವಟಿಕೆಗಳನ್ನು ನಡೆಸುತ್ತಿದ್ದರು, ದೇಶದ ಹಲವಾರು ಭಾಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವೈಯಕ್ತಿಕ ಸದಸ್ಯರು ಬೆಂಕಿ ಹಚ್ಚುವಿಕೆ, ದರೋಡೆ, ಡಕಾಯಿತಿ ಮತ್ತು ಕೊಲೆಗಳನ್ನು ಒಳಗೊಂಡ ಹಿಂಸಾಚಾರದಲ್ಲಿ ತೊಡಗಿದ್ದಾರೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿದ್ದಾರೆ ಎಂದು ಕಂಡುಬಂದಿದೆ’ ಎಂದು ಪಟೇಲ್ ತಮ್ಮ ಪ್ರಕಟಣೆಯಲ್ಲಿ ಹೇಳಿದ್ದರು. ಅಲ್ಲದೆ ಪಟೇಲ್ ಅವರ ಒಂದು ವರ್ಷದ ನಂತರ ನಿಷೇಧವನ್ನು ತೆಗೆದುಹಾಕಿದರು.

Teachers Transfer: 50 ವರ್ಷ ದಾಟಿದ ಶಿಕ್ಷಕರನ್ನು ವರ್ಗಾವಣೆ ಮಾಡುವಂತಿಲ್ಲ; ಕರ್ನಾಟಕ ಹೈಕೋರ್ಟ್‌ ಆದೇಶ