Home National RSS ಕಾರ್ಯಕರ್ತ ರುದ್ರೇಶ್‌ ಹತ್ಯೆ ಆರೋಪಿಗೆ ಮದುವೆಯಲ್ಲಿ ಭಾಗಿಯಾಗಲು ಅನುಮತಿ ನೀಡಿದ ನ್ಯಾಯಾಲಯ!

RSS ಕಾರ್ಯಕರ್ತ ರುದ್ರೇಶ್‌ ಹತ್ಯೆ ಆರೋಪಿಗೆ ಮದುವೆಯಲ್ಲಿ ಭಾಗಿಯಾಗಲು ಅನುಮತಿ ನೀಡಿದ ನ್ಯಾಯಾಲಯ!

RSS activist rudresh murder

Hindu neighbor gifts plot of land

Hindu neighbour gifts land to Muslim journalist

RSS activist rudresh murder: RSS ಮುಖಂಡ ರುದ್ರೇಶ್‌ ಹತ್ಯೆ(RSS activist rudresh murder) ಪ್ರಕರಣದ ಆರೋಪಿಯಾದ ಇರ್ಫಾನ್‌ ಪಾಶಾ ತನ್ನ ಅಣ್ಣನ ಮಗಳ ಮದುವೆಯಲ್ಲಿ ಭಾಗಿಯಾಗಲು ಒಂದು ದಿನದ ಅವಕಾಶವನ್ನು ಎನ್‌ಐಎ ವಿಶೇಷ ನ್ಯಾಯಾಲಯದ ಬುಧವಾರ ಅನುಮತಿ ನೀಡಿದೆ.

ಅ.5 ರಿಂದ 7 ರ ತನಕ ಅಣ್ಣನ ಮಗಳ ಮದುವೆ ನಿಶ್ಚಯಗೊಂಡಿದೆ. ಮನೆಯ ಹಿರಿಯರು ಮದುವೆಯಲ್ಲಿ ಭಾಗಿಯಾಗಬೇಕಾಗಿರುವುದು ಸಂಪ್ರದಾಯ. ಹಾಗಾಗಿ ಅನುಮತಿಗಾಗಿ ಇರ್ಫಾನ್‌ ಪಾಶಾ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಈ ಅನುಮತಿ ನೀಡಲಾಗಿದೆ.

ಅ.5 ರಂದು ಬೆಳಗ್ಗೆ 10 ರಿಂದ 4 ಗಂಟೆಯವರೆಗೆ ಮಾತ್ರ ಇರ್ಫಾನ್‌ ಪಾಶಾ ಮದುವೆಯಲ್ಲಿ ಭಾಗಿಯಾಗಲು ಅವಕಾಶವನ್ನು ನ್ಯಾಯಾಲಯ ನೀಡಿದೆ. ಕೈಕೋಳವನ್ನು ಮದುವೆ ಸಮಾರಂಭದಲ್ಲಿ ತೊಡಿಸಬಾರದು. ಎಸ್ಕಾರ್ಟ್‌ ಸೇವೆಯಲ್ಲಿ ಆರೋಪಿಯನ್ನು ಕೊಂಡೊಯ್ಯಬೇಕು, ಎಸ್ಕಾರ್ಟ್‌ ಸಿಬ್ಬಂದಿ ಸಮವಸ್ತ್ರ ಧರಿಸಬಾರದು, ಎಸ್ಕಾರ್ಟ್‌ ಶುಲ್ಕವನ್ನು ಆರೋಪಿ ಭರಿಸಬೇಕು ಎಂದು ಅಗ್ರಹಾರ ಜೈಲು ಅಧಿಕ್ಷಕರಿಗೆ ನ್ಯಾಯಾಲಯ ಸೂಚನೆ ನೀಡಿದೆ.

ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಹತ್ಯೆ 2016ರ ಅಕ್ಟೋಬರ್‌ನಲ್ಲಿ ನಡೆದಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್‌ ಪಾಶಾ ಆಗಿದ್ದು, ವಿಚಾರಣಾಧೀಕರ ಕೈದಿಯಾಗಿ ಜೈಲಲ್ಲಿದ್ದಾನೆ.

ಇದನ್ನೂ ಓದಿ: ಈ ಎರಡು ಔಷಧ ಕಂಪನಿಗಳ ಸಿರಪ್‌ಗಳಲ್ಲಿ ವಿಷಕಾರಿ ರಾಸಾಯನಿಕ ಪತ್ತೆ!