Home National Delhi Blast: ದೆಹಲಿ ಸ್ಫೋಟದ ಸಂಚುಕೋರರಿಗೆ ಭೂತಾನ್‌ನಲ್ಲಿ ಮೋದಿ ಖಡಕ್ ವಾರ್ನಿಂಗ್

Delhi Blast: ದೆಹಲಿ ಸ್ಫೋಟದ ಸಂಚುಕೋರರಿಗೆ ಭೂತಾನ್‌ನಲ್ಲಿ ಮೋದಿ ಖಡಕ್ ವಾರ್ನಿಂಗ್

Hindu neighbor gifts plot of land

Hindu neighbour gifts land to Muslim journalist

Delhi Blast: ದೆಹಲಿಯ ಕೆಂಪುಕೋಟೆ (Red Fort) ಬಳಿ ನಡೆದ ಸ್ಫೋಟದ (Delhi Blast) ಹಿಂದಿರುವ ಸಂಚುಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾರ್ನಿಂಗ್ ಕೊಟ್ಟಿದ್ದಾರೆ.ದೆಹಲಿಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಭೂತಾನ್‌ನಲ್ಲಿ (Bhutan) ಮಾತನಾಡಿದ ಅವರು, ಇಂದು ನಾನು ತುಂಬಾ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ಸೋಮವಾರ ಸಂಜೆ ದೆಹಲಿಯಲ್ಲಿ ನಡೆದ ಭೀಕರ ಘಟನೆ ಎಲ್ಲರನ್ನೂ ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. ತನ್ನವರನ್ನು ಕಳೆದುಕೊಂಡ ಕುಟುಂಬದವರ ನೋವು ನನಗೆ ಅರ್ಥವಾಗುತ್ತದೆ. ಇಡೀ ರಾಷ್ಟ್ರ ಇಂದು ಅವರೊಂದಿಗೆ ನಿಂತಿದೆ ಎಂದರು. ಈ ಘಟನೆಯನ್ನು ತನಿಖೆ ಮಾಡುತ್ತಿರುವ ಎಲ್ಲಾ ಸಂಸ್ಥೆಗಳೊಂದಿಗೆ ನಾನು ರಾತ್ರಿಯಿಡೀ ಸಂಪರ್ಕದಲ್ಲಿದ್ದೆ. ನಮ್ಮ ಸಂಸ್ಥೆಗಳು ಈ ಪಿತೂರಿಯ ಆಳವನ್ನು ಕಂಡುಕೊಳ್ಳುತ್ತವೆ. ಈ ಪಿತೂರಿ ಹಿಂದೆ ಯಾರಿದ್ದರೋ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.