Home National Mahila samman saving certificate : ಮಹಿಳೆಯರೇ ನಿಮಗಿದೋ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್!

Mahila samman saving certificate : ಮಹಿಳೆಯರೇ ನಿಮಗಿದೋ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್!

Mahila samman saving certificate

Hindu neighbor gifts plot of land

Hindu neighbour gifts land to Muslim journalist

Mahila samman saving certificate  :ಸರ್ಕಾರ ಜನತೆಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಬಂದಿದ್ದು, ಅನೇಕ ಪ್ರಯೋಜನಗಳನ್ನು ಒದಗಿಸುತ್ತಾ ಬಂದಿದೆ. ರೈತರಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಒಂದಲ್ಲ ಒಂದು ರೀತಿಯಲ್ಲಿ ಸಹಾಯವಾಗುತ್ತಾ ಬಂದಿದೆ. ಅದರಲ್ಲೂ ಮಹಿಳೆಯರು ಆರ್ಥಿಕವಾಗಿ ಹಿಂದುಳಿಯಬಾರದೆಂದು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ.

ಅಂತಹ ಹಲವು ಯೋಜನೆಗಳಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ( Mahila samman saving certificate) ಯೋಜನೆ ಕೂಡ ಒಂದು. ಈ ಯೋಜನೆಯ ಖಾತೆದಾರರಿಗೆ ಇದೀಗ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಇದ್ದು, ಠೇವಣಿಗಾಗಿ 7.5% ಬಡ್ಡಿ ದರ ನೀಡುವುದಾಗಿ ತಿಳಿಸಿದೆ.

ಈ ಯೋಜನೆಯು ಎರಡು ವರ್ಷಗಳ ಅವಧಿಯನ್ನು ಹೊಂದಿದ್ದು, ಮಹಿಳೆಯರ ಹಣವನ್ನು ಉಳಿಸಲು ಪ್ರೋತ್ಸಾಹಿಸಲೆಂದೆ ಜಾರಿಗೊಳಿಸಿದೆ. ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ ಎರಡು ಲಕ್ಷ ರೂಪಾಯಿಗಳವರೆಗೆ ಠೇವಣಿ ಸೌಲಭ್ಯವನ್ನು ಎರಡು ವರ್ಷಗಳ ಅವಧಿಗೆ ಶೇಕಡ 7.5 ರ ಸ್ಥಿರ ಬಡ್ಡಿ ದರದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದೆ.

ಮಹಿಳೆಯರ ಉಳಿತಾಯದ ಕುರಿತು ಗಮನದಲ್ಲಿಟ್ಟುಕೊಂಡು, ಮೊತ್ತದ ಮಿತಿಯನ್ನು 10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಈ ಯೋಜನೆಯು 2023-24 ರ ಹಣಕಾಸು ವರ್ಷದಲ್ಲಿ ಪ್ರಾರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಘೋಷಿಸಲಾಗಿದೆ.