Home National Madhya Pradesh: ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿದ ಆರೋಪ! ಶಿಕ್ಷಣಾಧಿಕಾರಿಗೆ ಇಂಕ್‌ ಹಾಕಿ ಆಕ್ರೋಶ

Madhya Pradesh: ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿದ ಆರೋಪ! ಶಿಕ್ಷಣಾಧಿಕಾರಿಗೆ ಇಂಕ್‌ ಹಾಕಿ ಆಕ್ರೋಶ

Madhya Pradesh hijab controversy
Image source: Newsfirstlive

Hindu neighbor gifts plot of land

Hindu neighbour gifts land to Muslim journalist

Madhya Pradesh hijab controversy: ಮಧ್ಯಪ್ರದೇಶದ ದಾಮೋಹ್‌ ಜಿಲ್ಲೆ ಗಂಗಾ ಜಮನಾ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿದ ಘಟನೆಯೊಂದು(Madhya Pradesh hijab controversy) ಇತ್ತೀಚೆಗೆ ನಡೆದಿತ್ತು. ಈ ಘಟನೆಯು ಹಿಂದೂ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಹಿಂದೂ ಧರ್ಮದ ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿ ಫೋಟೋ ತೆಗೆದ ಘಟನೆಯೊಂದು ಗಂಗಾ ಜಮುನಾ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ನಡೆದಿತ್ತು ಎಂಬ ಆರೋಪ ಮಾಡಲಾಗಿತ್ತು. ಇದನ್ನು ಖಂಡಿಸಿದ ಬಿಜೆಪಿ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ, ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಮಾಡಿ ಜಿಲ್ಲಾ ಶಿಕ್ಷಣಾಧಿಕಾರಿ ಮೇಲೆ ಇಂಕ್‌ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Madhya Pradesh hijab controversy
Image source: Newsfirstlive

ಈ ಶಾಲೆಯಲ್ಲಿ ಹಿಂದೂ ಮತ್ತು ಜೈನ ಸಮುದಾಯದ ವಿದ್ಯಾರ್ಥಿನಿಯರು ಓದುತ್ತಿದ್ದು, ಹಿಂದೂ ಹುಡುಗಿಯರಿಗೆ ಹಿಜಾಬ್‌ ಧರಿಸಿದ ಬ್ಯಾರ್‌ ಹಾಕಿದ್ದರಿಂದ ಈ ರಾದ್ಧಾಂತ ಸಂಭವಿಸಿದೆ. ಹಾಗೆನೇ ಹಿಂದೂ ಹೋರಾಟಗಾರರು ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಖಾಸಗಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.