Home latest LPG Cylinder Offers: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಗುಡ್ ನ್ಯೂಸ್ !

LPG Cylinder Offers: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಗುಡ್ ನ್ಯೂಸ್ !

LPG Cylinder

Hindu neighbor gifts plot of land

Hindu neighbour gifts land to Muslim journalist

LPG Gas Cylinder Offer: ಇಂದಿನ ದಿನದಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಬಳಸದವರೇ ಇಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದ್ದೇ ಇದೆ. ಆದರೆ ಸಿಲಿಂಡರ್ ಖಾಲಿಯಾದರೆ ಅದೇ ದೊಡ್ಡ ಚಿಂತೆಯಾಗಿಬಿಡುತ್ತೆ. ಆಹಾರ-ಪದಾರ್ಥಗಳನ್ನು ತಯಾರಿಸಲು ಹೆಚ್ಚಾಗಿ ಎಲ್ಲಾ ಜನರನ್ನು ಗ್ಯಾಸ್ ಸಿಲಿಂಡರ್ ಅನ್ನೇ ಅವಲಂಬಿಸಿರುತ್ತಾರೆ. ಅದು ಖಾಲಿ ಆಯಿತು ಅಂದ್ರೆ ತಲೆ ಬಿಸಿಯಾಗುತ್ತದೆ. ಯಾಕಂದ್ರೆ ಮತ್ತೆ ಅದು ಮನೆಸೇರೋದು ಸ್ವಲ್ಪ ದಿನ ಕಾದ ಮೇಲೆಯೇ. ಆದರೆ ನಿಮಗೆ ಇಲ್ಲೊಂದು ಬಂಪರ್ ಆಫರ್(offer) ಇದೆ. ಏನಪ್ಪಾ ಅಂದ್ರೆ, ಈ ಬಾರಿ ಗ್ಯಾಸ್ ಸಿಲಿಂಡರ್ ಖಾಲಿ ಆದ್ರೆ ಚಿಂತೆ ಮಾಡಬೇಕಿಲ್ಲ. ಯಾಕಂದ್ರೆ ನೀವು ಗ್ಯಾಸ್ ಬುಕ್ ಮಾಡಿ, ಗ್ಯಾಸ್ ಸಿಲಿಂಡರ್ ಆಫರ್ (LPG Gas Cylinder Offer) ಪಡೆಯಬಹುದು. ಹೌದು, ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದರ ಜೊತೆಗೆ ನಿಮಗೆ ಅತ್ಯಾಕರ್ಷಕ ಕೊಡುಗೆಗಳು ಲಭ್ಯವಾಗಲಿದೆ. ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ನೀವು ಬಜಾಜ್ ಫೈನಾನ್ಸ್ ಆಪ್ (Bajaj finance app) ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ ನಿಮಗೆ ರೂ. 100 ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ. ಆದರೆ ಈ ಆಫರ್ ಫೆಬ್ರವರಿ 28 ರವರೆಗೆ ಮಾತ್ರ ಲಭ್ಯವಿರುತ್ತದೆ. ಹಾಗೆಯೇ ಮೊದಲ ಬಾರಿಗೆ ಬಜಾಜ್ ಫೈನಾನ್ಸ್ ಅಪ್ಲಿಕೇಶನ್ ಮೂಲಕ ಸಿಲಿಂಡರ್ ಅನ್ನು ಬುಕ್ ಮಾಡುವವರು ಮಾತ್ರ ಈ ಪ್ರಯೋಜನವನ್ನು ಪಡೆಯಬಹುದು.

ಇದಿಷ್ಟೇ ಅಲ್ಲದೆ, ಏರ್‌ಟೆಲ್ (Airtel) ಗ್ರಾಹಕರು ಏರ್‌ಟೆಲ್ ಥ್ಯಾಂಕ್ಸ್ ಆಪ್ (Airtel thanks app) ಮೂಲಕ ಸಿಲಿಂಡರ್ ಬುಕ್ ಮಾಡಿದರೆ ರೂ. 20 ರಿಯಾಯಿತಿಯನ್ನು ಪಡೆಯಬಹುದು. ಇದು ಕೂಡ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಾಗಿದೆ.

ನೀವು ಅಮೆಜಾನ್ ಪೇ (Amazon Pay) ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೂ ಆಫರ್ ಸಿಗುತ್ತದೆ. ICICI Amazon Pay ಕ್ರೆಡಿಟ್ ಕಾರ್ಡ್ ಮೂಲಕ ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ 2 ಪ್ರತಿಶತ ಕ್ಯಾಶ್‌ಬ್ಯಾಕ್ (cashback)ಲಭ್ಯವಿದೆ. ಇದರಲ್ಲಿ ನೀವು ಸ್ಕ್ರ್ಯಾಚ್ ಕಾರ್ಡ್‌ಗಳನ್ನು(scratch card) ಕೂಡ ಪಡೆಯಬಹುದಾಗಿದೆ.

ಪೇಟಿಎಂ (Paytm) ನಲ್ಲಿ ಬುಕ್ ಮಾಡಿದರೆ, ರೂ. 5 ರಿಂದ ರೂ. 1000 ವರೆಗೆ ಭರ್ಜರಿ ರಿಯಾಯಿತಿ ಲಭ್ಯವಾಗಲಿದೆ. ನೀವು ಉಚಿತ ಗ್ಯಾಸ್ ಪ್ರೋಮೋ ಕೋಡ್ ಅನ್ನು ಬಳಸಿದರೆ, ಆಗ ನಿಮಗೆ ಶೇಕಡಾ 100 ರಷ್ಟು ಕ್ಯಾಶ್‌ಬ್ಯಾಕ್ ಲಭ್ಯವಾಗುತ್ತದೆ. ಇದೊಂದೇ ಅಲ್ಲದೆ, ಪೇಟಿಎಂನಲ್ಲಿ ಮತ್ತೊಂದು ಆಫರ್ ಇದ್ದು, ಇದರಲ್ಲಿ ಗ್ಯಾಸ್ 1000 ಪ್ರೋಮೋ ಕೋಡ್ ಬಳಸಿದರೆ, ರೂ. 1000 ಕ್ಯಾಶ್ ಬ್ಯಾಕ್ ಪಡೆಯಬಹುದು.

ಫ್ಲಿಪ್ ಕಾರ್ಟ್(Flipkart) ಮೂಲಕ ಬಟ್ಟೆ, ವಸ್ತುಗಳು ಸೇರಿದಂತೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಬುಕ್ ಮಾಡುತ್ತಾರೆ. ಹಾಗೆಯೇ ನೀವು ಜನಪ್ರಿಯ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಸಿಲಿಂಡರ್ ಅನ್ನು ಬುಕ್ ಮಾಡಬಹುದು. ಇದಕ್ಕೆ ಸೂಪರ್ ನಾಣ್ಯಗಳು ಇರಬೇಕು. ಇವುಗಳ ಮೂಲಕ ಸಿಲಿಂಡರ್ ಬುಕ್ ಮಾಡಬಹುದು. ಆಗ ನೀವು ನೇರ ರಿಯಾಯಿತಿ ಪಡೆಯಬಹುದು. ಇಂತಹ ಸೂಪರ್ ಅವಕಾಶ ಮಿಸ್ ಮಾಡ್ಕೋಬೇಡಿ. ಈ ರೀತಿ ಗ್ಯಾಸ್ ಬುಕ್ ಮಾಡಿ, ರಿಯಾಯಿತಿ ಪಡೆಯಿರಿ.