Home National Elon Musk: ನಾನು ಪಿಎಂ ಮೋದಿಯವರ ಅಭಿಮಾನಿ, ‘ಟೆಸ್ಲಾ’ ಅತಿ ಶೀಘ್ರದಲ್ಲೇ ಭಾರತಕ್ಕೆ ಬರಲಿವೆ :...

Elon Musk: ನಾನು ಪಿಎಂ ಮೋದಿಯವರ ಅಭಿಮಾನಿ, ‘ಟೆಸ್ಲಾ’ ಅತಿ ಶೀಘ್ರದಲ್ಲೇ ಭಾರತಕ್ಕೆ ಬರಲಿವೆ : ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್

Elon Musk- PM Modi
Image source- News 18

Hindu neighbor gifts plot of land

Hindu neighbour gifts land to Muslim journalist

Elon Musk- PM Modi: ನಾನು ಭಾರತದ (India) ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಅಭಿಮಾನಿ ಎಂದು ಟೆಸ್ಲಾ (Tesla) ಸಿಇಒ ಮತ್ತು ಟ್ವಿಟ್ಟರ್ ಮಾಲೀಕ ಎಲಾನ್ ಮಸ್ಕ್ (Elon Musk) ಹೇಳಿದ್ದಾರೆ.

ಹೌದು, ಮೂರು ದಿನಗಳ ಅಮೆರಿಕ(American) ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ಜಗತ್ತಿನ ನಂ.1 ಶ್ರೀಮಂತ, ಟೆಸ್ಲಾ ಸಿಇಒ ಮತ್ತು ಟ್ವಿಟರ್​ ಮಾಲೀಕ ಎಲಾನ್​ ಮಸ್ಕ್​ ನ್ಯೂಯಾರ್ಕ್​ನಲ್ಲಿ(Newarkl) ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದ್ದು ನಾನು ಮೋದಿಯವರ ಅಭಿಮಾನಿಗಳಲ್ಲಿ ಒಬ್ಬ (Elon Musk- PM Modi) ಎಂದು ಹೇಳಿಕೊಂಡಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಮೋದಿಯವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭೇಟಿ ನನಗೆ ರೋಮಾಂಚನಕಾರಿ ಅನುಭವ ನೀಡಿದೆ. ಅವರು ಕೆಲವು ವರ್ಷಗಳ ಹಿಂದೆ ನಮ್ಮ ಕಾರ್ಖಾನೆಗೆ ಭೇಟಿ ನೀಡಿದ್ದರು. ಇದರಿಂದಾಗಿ ಅವರ ಬಗ್ಗೆ ನನಗೆ ತಿಳಿದಿದೆ. ಅವರು ನನಗೆ ಭಾರತಕ್ಕೆ ಆಮಂತ್ರಣ ನೀಡಿದ್ದಾರೆ. ಶೀಘ್ರದಲ್ಲೇ ನಾನು ಭಾರತಕ್ಕೆ ಭೇಟಿ ನೀಡಲಿದ್ದೇನೆ ಎಂದಿದ್ದಾರೆ.

ಅಲ್ಲದೆ ವಿಶ್ವದ ಅತ್ಯಂತ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಕಾರುಗಳಾದ ಟೆಸ್ಲಾ(Tesla electric car) ಅತಿ ಶೀಘ್ರದಲ್ಲೇ ಭಾರತಕ್ಕೆ ಬರಲಿವೆ ಎಂದು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಭೇಟಿ, ಮಾರುಕತೆ ಬಳಿಕ ಮಾತನಾಡಿದ ಮಸ್ಕ್ ಭಾರತಕ್ಕೆ ಟೆಸ್ಲಾ ಕಾರುಗಳನ್ನು ಪರಿಚಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಎಲಾನ್ ಮಸ್ಕ್ ಅವರಿಗೆ ಆಹ್ವಾನ ನೀಡಿದ್ದಾರೆ, ಇದಕ್ಕೆ ಎಲಾನ್ ಮಸ್ಕ್ ಕೂಡ ಸಕಾರತ್ಮಕವಾಗಿ ಸ್ಪಂದಿಸಿರುವುದಾಗಿ ವರದಿಯಾಗಿದೆ.

ಇಷ್ಟೇ ಅಲ್ಲದೆ ನಿಜವಾಗಿಯೂ ಪ್ರಧಾನಿ ಮೋದಿ ಅವರು ಭಾರತಕ್ಕಾಗಿ ಉತ್ತಮವಾದುದ್ದನ್ನು ಮಾಡಲು ಬಯಸುತ್ತಾರೆ. ಅವರು ತುಂಬಾ ಮುಕ್ತವಾಗಿದ್ದು, ಕಂಪನಿಗಳಿಗೆ ಬೆಂಬಲವಾಗಿರಲು ಬಯಸುತ್ತಾರೆ. ಈ ನಿಲುವು ಭಾರತದ ಅನುಕೂಲಕ್ಕೆ ಸೇರುತ್ತದೆ. ಸೌರಶಕ್ತಿ ಹೂಡಿಕೆಗೆ ಭಾರತ ಉತ್ತಮವಾಗಿದೆ. ನಾವು ಸ್ಟಾರ್‌ಲಿಂಕ್ ಇಂಟರ್ನೆಟ್ ಅನ್ನು ಭಾರತಕ್ಕೆ ತರಲು ಸಹ ಆಶಿಸುತ್ತಿದ್ದೇವೆ. ಮುಂದಿನ ವರ್ಷದಲ್ಲಿ ಭಾರತ ಪ್ರವಾಸಕ್ಕೆ ಯೋಜನೆ ಹಾಕಿಕೊಂಡಿದ್ದೇವೆ. ಆದಷ್ಟು ಬೇಗ ಟೆಸ್ಲಾ ಭಾರತಕ್ಕೆ ಬರಲಿದೆ ಎಂದು ಮಸ್ಕ್​ ತಿಳಿಸಿದರು.

ಇದನ್ನೂ ಓದಿ: Adipurush: ಮತ್ತೊಂದು ವಿವಾದಕ್ಕೆ ಕಾರಣವಾಯ್ತು ‘ಆದಿಪುರುಷ್’ !! ಪೊಲೀಸ್ ಭದ್ರತೆಯೊಂದಿಗೆ ‘ಹನುಮಂತ ದೇವರೇ ಅಲ್ಲ’ ಎಂದ ಸಂಭಾಷಣೆಕಾರ !!