Home National Kerala BJP Mayor: ಫಸ್ಟ್‌ ಟೈಮ್‌ ಕೇರಳ ರಾಜಧಾನಿಗೆ ಬಿಜೆಪಿ ಮೇಯರ್‌

Kerala BJP Mayor: ಫಸ್ಟ್‌ ಟೈಮ್‌ ಕೇರಳ ರಾಜಧಾನಿಗೆ ಬಿಜೆಪಿ ಮೇಯರ್‌

Hindu neighbor gifts plot of land

Hindu neighbour gifts land to Muslim journalist

Kerala BJP Mayor: ಐತಿಹಾಸಿಕ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ (BJP) ರಾಜ್ಯ ಕಾರ್ಯದರ್ಶಿ ಹಾಗೂ ಕೊಡಂಗನೂರು ವಾರ್ಡ್‌ ಕೌನ್ಸಿಲರ್‌ ವಿ.ವಿ ರಾಜೇಶ್‌ ತಿರುವನಂತಪುರಂ ಪಾಲಿಕೆ ಮೇಯರ್‌ (Thiruvananthapuram Corporation Mayor) ಆಗಿ ಆಯ್ಕೆಯಾಗಿದ್ದಾರೆ.

51 ಮತಗಳನ್ನ ಗಳಿಸುವ ಮೂಲಕ ರಾಜೇಶ್‌ ಮೇಯರ್‌ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಇತ್ತೀಚೆಗೆ ನಡೆದ ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಎಲ್‌ಡಿಎಫ್‌ನ (LDF) 45 ವರ್ಷಗಳ ಆಡಳಿತಕ್ಕೆ ಅಂತ್ಯಹಾಡಿ ಎನ್‌ಡಿಎ ನೇತೃತ್ವದ ಬಿಜೆಪಿ ಗೆಲುವು ಸಾಧಿಸಿತು.

ತಿರುವನಂತಪುರಂನ 101 ವಾರ್ಡ್‌ಗಳ ಪೈಕಿ ಬಿಜೆಪಿ 50 ವಾರ್ಡ್‌ಗಳಲ್ಲಿ ಬಿಜೆಪಿ ಗೆದ್ದಿತ್ತು. ಇಂದು 101 ಸದಸ್ಯರ ನಿಗಮದಲ್ಲಿ ರಾಜೇಶ್ (VV Rajesh) 50 ಬಿಜೆಪಿ ಕೌನ್ಸಿಲರ್‌ ಹಾಗೂ ಓರ್ವ ಸ್ವತಂತ್ರ ಸದಸ್ಯರ ಬೆಂಬಲ ಪಡೆಯುವ ಮೂಲಕ ಮೇಯರ್‌ ಪಟ್ಟಕ್ಕೇರಿದರು.

ಯುಡಿಎಫ್ (UDF) ಮೇಯರ್ ಅಭ್ಯರ್ಥಿ ಆಗಿದ್ದ ಕೆ.ಎಸ್ ಶಬರಿನಾಥನ್ 17 ಮತಗಳನ್ನ ಪಡೆದರೆ, ಎಲ್‌ಡಿಎಫ್ ಅಭ್ಯರ್ಥಿ ಆರ್‌ಪಿ ಶಿವಾಜಿ 29 ಮತಗಳನ್ನ ಗಳಿಸಿದ್ರು. ಬಳಿಕ ಯುಡಿಎಫ್ ಪರ ಚಲಾವಣೆಗೊಂಡಿದ್ದ 2 ಮತಗಳನ್ನ ಅಮಾನ್ಯವೆಂದು ಘೋಷಿಸಲಾಯಿತು.ಫಲಿತಾಂಶ ಘೋಷಣೆಯ ಬಳಿಕ ರಾಜೇಶ್ ರಾಜ್ಯ ರಾಜಧಾನಿಯ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್, ಬಿಜೆಪಿಯ ಮಾಜಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಹಾಜರಿದ್ದರು.