Home latest Babiya, Ananthapura Lake Temple: ಅನಂತಪುರ ಕ್ಷೇತ್ರದ ಕೆರೆಯಲ್ಲಿ ಪ್ರತ್ಯಕ್ಷವಾದ ಮೊಸಳೆ : ಮರುಹುಟ್ಟು ಪಡೆದಳಾ...

Babiya, Ananthapura Lake Temple: ಅನಂತಪುರ ಕ್ಷೇತ್ರದ ಕೆರೆಯಲ್ಲಿ ಪ್ರತ್ಯಕ್ಷವಾದ ಮೊಸಳೆ : ಮರುಹುಟ್ಟು ಪಡೆದಳಾ ಬಬಿಯಾ..

Babiya Ananthapura Lake Temple

Hindu neighbor gifts plot of land

Hindu neighbour gifts land to Muslim journalist

Babiya, Ananthapura Lake Temple:ಕಾಸರಗೋಡು(Kasargod) ಜಿಲ್ಲೆಯ ಶ್ರೀಅನಂತಪದ್ಮನಾಭ ಕ್ಷೇತ್ರಕ್ಕೆ , (Ananthapura Lake Temple)ಹಲವು ಶತಮಾನಗಳ ಇತಿಹಾಸವಿದ್ದು, ದೇವಳದ ಕೆರೆಯಲ್ಲಿದ್ದ ಬಬಿಯಾ(Babiya) ಎಂಬ ಮೊಸಳೆ ಅಗಲಿದ ಒಂದು ವರ್ಷದ ಬಳಿಕ ಏಕಾಏಕಿ ಮರಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಭಕ್ತರಿಗೆ ಅಚ್ಚರಿ ಮೂಡಿಸಿದೆ.

ಬಬಿಯಾ(Babiya, Ananthapura Lake Temple) ಎಂಬ ಸಸ್ಯಾಹಾರಿ ಮೊಸಳೆಯನ್ನು ನೋಡಲು ಅದೆಷ್ಟೋ ಭಕ್ತ ಸಮೂಹ ದೇವಾಲಯಕ್ಕೆ ಭೇಟಿ ನೀಡುತ್ತಿತ್ತು. ದೇವಾಲಯದ ಕೆರೆಯಲ್ಲಿ ಸಾಕಷ್ಟು ಮೀನುಗಳು ತುಂಬಿಕೊಂಡಿದ್ದರು ಕೂಡ ಬಬಿಯಾ ಮೊಸಳೆ ನೀರಿನಲ್ಲಿದ್ದರೂ ಮೀನನ್ನು ತಿನ್ನುತ್ತಿರಲಿಲ್ಲ ಎಂಬುದು ವಿಶೇಷ!!!!ಇತಿಹಾಸ ಪ್ರಸಿದ್ಧ ಕುಂಬಳೆ ಸಮೀಪದ ನಾಯ್ಕಾಪು ಗ್ರಾಮದ ಅನಂತಪದ್ಮನಾಭ ಕ್ಷೇತ್ರ ಸರೋವರ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದೆ. ಕೇರಳದ ಅನಂತಪುರ ದೇವಸ್ಥಾನದಲ್ಲಿ ದೇವರ ಪ್ರತಿಬಿಂಬ ಎಂದೇ ಕರೆಯಲ್ಪಟ್ಟಿದ್ದ ಮೊಸಳೆ ಬಬಿಯಾ ಹರಿಪಾದ ಸೇರಿದ ಬಳಿಕ ಭಕ್ತರಲ್ಲಿ ಬೇಸರದ ಛಾಯೆ ಆವರಿಸಿತ್ತು. ಆದರೆ, ಇದೀಗ,ಮರಿ ಮೊಸಳೆಯೊಂದು ದಿಡೀರ್ ಆಗಿ ಭಕ್ತ ಸಾಗರಕ್ಕೆ ಪುಳಕ ಉಂಟು ಮಾಡಿದೆ.

ದೇವಳದ ಸುತ್ತ ಹರಡಿರುವ ಸರೋವರದಲ್ಲಿ ವಾಸಿಸುವ ಸಾಧು ಪ್ರಾಣಿಯಾಗಿದ್ದ ಮೊಸಳೆ ಪ್ರತಿನಿತ್ಯ ಮಧ್ಯಾಹ್ನ ಪೂಜೆಯ ಬಳಿಕ ಅರ್ಚಕರು ನೀಡುವ ನೈವೇದ್ಯ ಸ್ವೀಕರಿಸಲು ಬರುತ್ತಿತ್ತು. ದಿನವೂ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಭಕ್ತರಿಗೂ ದರ್ಶನ ನೀಡುತ್ತಿದ್ದ ಬಬಿಯಾ ಮೊಸಳೆ ಕಳೆದ ವರ್ಷ ಅಕ್ಟೋಬರ್ 10 ರಂದು ಸಾವನ್ನಪ್ಪಿತ್ತು. ಸರಿ ಸುಮಾರು 75 ವರ್ಷಗಳ ಕಾಲ ಬಬಿಯಾ ಇಲ್ಲಿ ಬದುಕಿತ್ತು ಎನ್ನಲಾಗುತ್ತಿದೆ. ಕ್ಷೇತ್ರದ ಇತಿಹಾಸದಂತೆ ಒಂದು ಮೊಸಳೆ ಮರೆಯಾದರೆ ಮತ್ತೊಂದು ತನ್ನಿಂದ ತಾನೆ ಆಗಮಿಸುವುದೆಂಬ ಪ್ರತೀತಿ ಕೂಡ ಇದೆಯಂತೆ.

ಇದೀಗ ಅದೇ ರೀತಿಯ ಮೊಸಳೆ ಅನಂತಪದ್ಮನಾಭ ದೇವಸ್ಥಾನದ ಕೆರೆಯಲ್ಲಿ ಪ್ರತ್ಯಕ್ಷವಾಗಿದೆ. ಕೆಲವು ದಿನಗಳ ಹಿಂದೆ ಕಾಞಂಗಾಡಿನಿಂದ ಬಂದಿದ್ದ ಕುಟುಂಬ ದೇವಾಲಯಕ್ಕೆ ಭೇಟಿ ನೀಡಿದಾಗ ಮೊದಲ ಬಾರಿಗೆ ಈ ಮರಿ ಮೊಸಳೆ ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಆನಂತರ, ಕೆರೆಯ ಮೂಲೆಯಲ್ಲಿ ಅರ್ಚಕರಿಗೂ ಕಂಡುಬಂದಿದೆ ಎನ್ನಲಾಗಿದೆ. ಸದ್ಯ, ಇದರ ಫೋಟೋ, ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಕ್ತರಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ:Kitchen Tips: ದೀಪಾವಳಿಗೆ ಅಡುಗೆ ಮನೆಯೂ ಹೊಳೆಯಬೇಕಾ ?! ಅಡುಗೆ ಸೋಡಾವನ್ನು ಹೀಗೆ ಬಳಸಿದರೆ ಸಾಕು, ಎಲ್ಲಾ ಫಳ, ಫಳ !!