Home National Operation Sindhoor: ರಾತ್ರೋರಾತ್ರಿ ಯುದ್ಧ ಆರಂಭಿಸಿದ ಭಾರತ – ಪಾಕ್ ಮೇಲೆ ಶುರುವಾಯ್ತು ‘ಆಪರೇಷನ್...

Operation Sindhoor: ರಾತ್ರೋರಾತ್ರಿ ಯುದ್ಧ ಆರಂಭಿಸಿದ ಭಾರತ – ಪಾಕ್ ಮೇಲೆ ಶುರುವಾಯ್ತು ‘ಆಪರೇಷನ್ ಸಿಂಧೂರ್ ‘, 9 ಕಡೆ ಅಟ್ಯಾಕ್ !!

Hindu neighbor gifts plot of land

Hindu neighbour gifts land to Muslim journalist

Operation Sindhoor: ಪಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಭಾರತ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ವಿರುದ್ಧ ಯುದ್ಧ ಆರಂಭಿಸಿದೆ. ಮಂಗಳವಾರ ತಡರಾತ್ರಿ 2 ಗಂಟೆಯ ಸುಮಾರಿಗೆ ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ‘ಆಪರೇಷನ್ ಸಿಂಧೂರ್’ ಹೆಸರಲ್ಲಿ ಏಕಾಏಕಿ ಕ್ಷಿಪಣಿ ದಾಳಿ ನಡೆಸಿದೆ.

 

ಹೌದು, “ಆಪರೇಷನ್ ಸಿಂಧೂರ್” ಎಂಬ ಹೆಸರಿನಲ್ಲಿ ಭಾರತೀಯ ಸೇನೆಯು ಈ ಕಾರ್ಯಾಚರಣೆ ನಡೆಸಿದ್ದು, ಪ್ರತೀಕಾರದ ದಾಳಿ ಆರಂಭಿಸಿದೆ. ದೇಶಾದ್ಯಂತ ಬುಧವಾರ 300ರಷ್ಟು ಸ್ಥಳಗಳಲ್ಲಿ ಯುದ್ಧದ ಅಣಕು ಕವಾಯತು ಆರಂಭವಾಗುವುದಕ್ಕೂ ಮುನ್ನವೇ ಯುದ್ಧ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

 

“ನಮ್ಮ ಕ್ರಮಗಳು ಕೇಂದ್ರೀಕೃತವಾಗಿವೆ, ನಿಖರವಾಗಿವೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳನ್ನು ನಾವು ಗುರಿಯಾಗಿಸಿಕೊಂಡಿಲ್ಲ. ಗುರಿಗಳ ಆಯ್ಕೆ ಮತ್ತು ದಾಳಿಯ ವಿಧಾನದಲ್ಲಿ ಭಾರತ ಗಣನೀಯ ಸಂಯಮವನ್ನು ಪ್ರದರ್ಶಿಸಿದೆ” ಎಂದು ಭಾರತ ಹೇಳಿದೆ. “ಈ ದಾಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ” ಎಂದಿದೆ.

https://x.com/ANI/status/1919873353642606668?t=ALRiFMEhYHs-wSSMSD6xQA&s=19

ನಿರ್ದಿಷ್ಟ ದಾಳಿಯ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನವು ಭಾರತದತ್ತ ಗುಂಡು ಹಾರಿಸಲು ಆರಂಭಿಸಿದ್ದು, ಎರಡೂ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ. ಇನ್ನು ಭಾರತೀಯ ಸೇನೆ ನಡೆಸಿದ ಟಾರ್ಗೆಟೆಡ್ ದಾಳಿಯಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಮಸೂದ್ ಅಜರ್ ಗೆ ಸೇರಿರುವ ಮದರಸಾಗೂ ಹಾನಿಯಾಗಿದೆ ಎಂದು ವರದಿ ಹೇಳಿದೆ.