Home National Rajasthan: 51 ಟ್ರ್ಯಾಕ್ಟರ್ ಗಳಲ್ಲಿ 51 ಕಿ.ಮೀ ಮದುವೆ ದಿಬ್ಬಣ ಬಂದ ವರ!! ರೈತ ಅಳಿಯನಿಗೆ...

Rajasthan: 51 ಟ್ರ್ಯಾಕ್ಟರ್ ಗಳಲ್ಲಿ 51 ಕಿ.ಮೀ ಮದುವೆ ದಿಬ್ಬಣ ಬಂದ ವರ!! ರೈತ ಅಳಿಯನಿಗೆ ರಾಜಸ್ಥಾನದಲ್ಲಿ ಅದ್ಧೂರಿ ಸ್ವಾಗತ!

Rajasthan farmer wedding
Image source- Vijayavani

Hindu neighbor gifts plot of land

Hindu neighbour gifts land to Muslim journalist

Rajasthan farmer wedding:ಮದುವೆ(Marriage) ಎಂದರೆ ಸಂಭ್ರಮ. ಅದರಲ್ಲೂ ಮದುವೆ ದಿಬ್ಬಣ ಎಂದರೆ ಇನ್ನೂ ಸಂಭ್ರಮ. ಐಷಾರಾಮಿ ವಾಹನಗಳು, ಕುದುರೆ – ಬಂಡಿಗಳ ಮೇಲೆ ಜನರು ಮೆರವಣಿಗೆ ನಡೆಸುತ್ತಿರುವ ಇಂದಿನ ಕಾಲದಲ್ಲಿ ಇಲ್ಲೊಂದೆಡೆ ರೈತನ ಮಗನೊಬ್ಬ (Rajasthan farmer wedding) ಬರೋಬ್ಬರಿ 51 ಟ್ರ್ಯಾಕ್ಟರ್‌ಗಳಲ್ಲಿ(Tractor) ಮೆರವಣಿಗೆ ಮಾಡಿಕೊಂಡು ತನ್ನ ಅತ್ತೆ ಮನೆಗೆ ದಿಬ್ಬಣ ಬಂದಿದ್ದಾನೆ.

ಹೌದು, ಮದುವೆ ವಿಚಾರಕ್ಕೆ ಬಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಮದುವೆ ಆಗಬೇಕು ಅನ್ನೋ ಆಸೆ ಇರುತ್ತೆ. ಕೆಲವರು ಪ್ಯಾರಾಚೂಟ್(Parachute) ಕಟ್ಟಿಕೊಂಡು ಆಗಸದಲ್ಲಿ ಮದುವೆಯಾದ ಉದಾಹರಣೆಗಳಿವೆ, ಕೆಲವರು ಸಮುದ್ರದ(See) ತಳದಲ್ಲಿ ಉಂಗುರ ಬದಲಿಸಿಕೊಂಡ ಘಟನೆಗಳೂ ನಡೆದಿವೆ. ರಾಜಸ್ಥಾನದ(Rajasthan) ಗ್ರಾಮವೊಂದರಲ್ಲಿ ರೈತ ಕುಟುಂಬ ತಮ್ಮ ವೃತ್ತಿಯ ಮಿತ್ರನಾದ ಟ್ರ್ಯಾಕ್ಟರ್‌ಗಳನ್ನೇ ಮದುವೆಯ ದಿಬ್ಬಣಕ್ಕೆ ಬಳಸಿಕೊಂಡಿದ್ದಾರೆ. ಅದೂ ಕೂಡಾ ಒಂದೆರಡಲ್ಲ.. ಬರೋಬ್ಬರಿ 51 ಟ್ರ್ಯಾಕ್ಟರ್‌ಗಳು ಮದುವೆ ದಿಬ್ಬಣದಲ್ಲಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಸಾಗಿ ಬಂದು ಭಾರೀ ಸುದ್ದಿಯಾಗ್ತಿದೆ.

ಅಂದಹಾಗೆ ಬರ್ಮೆರ್​(Barmer) ಜಿಲ್ಲೆಯ ಗುಡಮಳನಿ(Gudamalani) ಗ್ರಾಮದ ಪ್ರಕಾಶ್ ಚೌಧರಿ​(Prakash chowdhury) ಎಂಬುವವರು ರೊಲಿ ಗ್ರಾಮದ ಮಮತಾ(Mamata) ಎಂಬುವವರನ್ನು ಸೋಮವಾರ ಮದುವೆಯಾಗಿದ್ದಾರೆ. ವರನ ಮನೆಯಿಂದ ವಧುವಿನ ಮನೆ ಸುಮಾರು 51 ಕಿ.ಮೀ ದೂರವಿದ್ದು, ಪ್ರಕಾಶ್​​ ಕಡೆಯವರು ಮದುವೆ ದಿಬ್ಬಣವನ್ನು ವಿಶಿಷ್ಟವಾಗಿ ಆಯೋಜಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ವರನ ತಂದೆ ಜೇತುರಾಮ್​ ನನ್ನ ಮದುವೆಯ ಮೆರವಣಿಗೆಗೆಂದು ಒಂದು ಟ್ರ್ಯಾಕ್ಟರ್​ ಬಳಸಲಾಗಿತ್ತು. ಮಗನ ಮದುವೆ ದಿಬ್ಬಣದ ಮೆರವಣಿಗೆ ಹೆಚ್ಚು ವಿಶಿಷ್ಟವಾಗಿರಲೆಂದು 51 ಟ್ರ್ಯಾಕ್ಟರ್​ಗಳನ್ನು ಬಳಸಲಾಗಿದೆ ಎಂದು ತಿಳಿಸಿದ್ದಾರೆ.

ವರನ ಮನೆಯಿಂದ 51 ಕಿ.ಮೀ ದೂರದ ವಧುವಿನ ರೊಲಿ ಗ್ರಾಮದವರೆಗೆ ಮದುವೆ ದಿಬ್ಬಣದ ಮೆರವಣಿಗೆ ನಡೆದಿದೆ. 51 ಟ್ರ್ಯಾಕ್ಟರ್‌ಗಳಲ್ಲಿ ನೆಂಟರಿಷ್ಟರು, ಕುಟುಂಬದ ಸದಸ್ಯರು ಸೇರಿ 200ಕ್ಕೂ ಅಧಿಕ ಮಂದಿ ಇದ್ದರು. ‘ನನ್ನ ಕುಟುಂಬದ ಪ್ರಮುಖ ವೃತ್ತಿ ಕೃಷಿ. ಪ್ರತಿಯೊಬ್ಬರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಟ್ರ್ಯಾಕ್ಟರ್ ರೈತನ ಗುರುತಾಗಿದೆ. ನನ್ನ ಅಪ್ಪನ ಮದುವೆಯ ಮೆರವಣಿಗೆಗೆ ಒಂದು ಟ್ರ್ಯಾಕ್ಟರ್ ಬಳಸಲಾಗಿತ್ತು. ನನ್ನ ಮದುವೆ ಮೆರವಣಿಗೇಕೆ 51 ಟ್ರ್ಯಾಕ್ಟರ್ ಬಳಸಬಾರದೆಂದು ಎಲ್ಲರೂ ಯೋಚಿಸಿದ್ದರು’ಎಂದು ವರ ಪ್ರಕಾಶ್ ಚೌಧರಿ ಎಎನ್‌ಐಗೆ ತಿಳಿಸಿದ್ದಾನೆ.

ಇನ್ನು ವಧುವಿನ ತಂದೆ ಪ್ರತಿಕ್ರಿಯಿಸಿ “ನನ್ನ ತಂದೆ ಮತ್ತು ತಾತನ ಮದುವೆಯಲ್ಲಿ ಒಂಟೆಗಳನ್ನು ಮೆರವಣಿಗೆಗೆ ಬಳಸಲಾಗಿತ್ತು. ನಮ್ಮ ಕುಟುಂಬದಲ್ಲಿ 20–30 ಟ್ರ್ಯಾಕ್ಟರ್‌ಗಳಿವೆ. ನನ್ನ ಸ್ನೇಹಿತರ ಟ್ರ್ಯಾಕ್ಟರ್‌ಗಳನ್ನು ಸೇರಿಸಿ ಒಟ್ಟು 51 ಟ್ರಾಕ್ಟರ್‌ಗಳನ್ನು ಮೆರವಣಿಗೆಗೆ ಬಳಸಿದೆವು. ನಾವು ಕೃಷಿಗೆ ಟ್ರ್ಯಾಕ್ಟರ್ ಬಳಸುತ್ತೇವೆ. ಮದುವೆ ಮೆರವಣಿಗೆಯನ್ನೂ ಇವುಗಳಲ್ಲಿ ಏಕೆ ಮಾಡಬಾರದು?ಎಂದು ಚಿಂತಿಸಿದೆವು’ಎಂದು ಹೇಳಿದ್ದಾರೆ.

ಇದನ್ನೂ ಓದಿ: Colombia Plane Crash: ಅಮೆಜಾನ್ ದಟ್ಟ​ಡವಿಯಲ್ಲಿ ವಿಮಾನ ಪತನ ದುರಂತ: ಪವಾಡವೆಂಬಂತೆ ಬದುಕಿದ 4 ಮಕ್ಕಳನ್ನು ನೋಡಿಕೊಳ್ಳೋ ವಿಚಾರದಲ್ಲಿ ಫ್ಯಾಮಿಲಿ ಫೈಟ್!!