Home National High Court Holiday: ಇನ್ನೊಂದು ತಿಂಗಳು ಕೋರ್ಟು ಕಚೇರಿ ಸಂಪೂರ್ಣ ಬಂದ್: ದಿನಾಂಕ ಗಮನಿಸಿ !

High Court Holiday: ಇನ್ನೊಂದು ತಿಂಗಳು ಕೋರ್ಟು ಕಚೇರಿ ಸಂಪೂರ್ಣ ಬಂದ್: ದಿನಾಂಕ ಗಮನಿಸಿ !

High Court Holiday

Hindu neighbor gifts plot of land

Hindu neighbour gifts land to Muslim journalist

High Court Holiday: ಹೈಕೋರ್ಟ್‌ಗೆ (High court) ಬೇಸಿಗೆ ರಜೆ ಘೋಷಣೆ ಮಾಡಲಾಗಿದ್ದು, ಇನ್ನೊಂದು ತಿಂಗಳು ಕೋರ್ಟು, ಕಚೇರಿ ಸಂಪೂರ್ಣ ಬಂದ್ ಆಗಲಿವೆ. ರಜೆ ಎಲ್ಲಿಂದ- ಎಲ್ಲಿಯವರೆಗೆ ಇರಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಏಪ್ರಿಲ್ 24ರಿಂದ ಮೇ 20ರವರೆಗೆ ಹೈಕೋರ್ಟ್‌ಗೆ ಬೇಸಿಗೆ ರಜೆ (High court holiday) ಇರಲಿದೆ ಎಂದು ಹೇಳಲಾಗಿದೆ. ಈ ಮಧ್ಯೆ ಏನಾದರೂ ಅಗತ್ಯ ಪ್ರಕರಣಗಳ ವಿಚಾರಣೆ ಇದ್ದಲ್ಲಿ, ತಡೆಯಾಜ್ಞೆ, ಮಧ್ಯಂತರ ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕ ಆದೇಶ ಒಳಗೊಂಡತಹ ವಿಚಾರಣೆಗಳಿದ್ದರೆ ಅದಕ್ಕಾಗಿ ಬೆಂಗಳೂರಿನ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿಯಲ್ಲಿ ವಿಭಾಗೀಯ ಮತ್ತು ಏಕಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ರಜಾಕಾಲೀನ ಪೀಠಗಳನ್ನು ರಚಿಸಲಾಗಿದ್ದು, ಇವುಗಳಿಗೆ ಮಾತ್ರ ರಜಾಕಾಲೀನ ಅವಧಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ.

ಮುಖ್ಯವಾಗಿ, ಈ ಮೇಲ್ಕಂಡ ವಿಷಯಗಳಿಗೆ ಮಾತ್ರ ರಜಾಕಾಲೀನ ಅವಧಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ಆದರೆ, “ಕ್ರಿಮಿನಲ್ ಅರ್ಜಿ, ಮೇಲ್ಮನವಿ, ಕ್ರಿಮಿನಲ್ ಮೇಲ್ಮನವಿ, ಸಿವಿಲ್ ರೂಪದ ಅರ್ಜಿಗಳ ವಿಚಾರಣೆ ಇರುವುದಿಲ್ಲ. ಇ-ಫೈಲಿಂಗ್ ಪೋರ್ಟಲ್ ಮೂಲಕ ಇ-ಫೈಲಿಂಗ್ ಮಾಡಬಹುದು” ಎಂದು ರಿಜಿಸ್ಟ್ರಾರ್ ಎಂ. ಚಂದ್ರಶೇಖರ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: Aaradhya Bachchan: 11 ವರ್ಷದ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಹೈಕೋರ್ಟ್ ಮೆಟ್ಟಲೇರಿದ್ದು ಯಾಕೆ ಗೊತ್ತೇ ?