Home National Mount Everest: ಹಿಮಾಲಯದಲ್ಲಿ ಕಸವೋ ಕಸ, ಎವರೆಸ್ಟ್ ನಲ್ಲಿ ಕಸ ಕೆಡವಿ ಬಂದವರು ಯಾರು ?...

Mount Everest: ಹಿಮಾಲಯದಲ್ಲಿ ಕಸವೋ ಕಸ, ಎವರೆಸ್ಟ್ ನಲ್ಲಿ ಕಸ ಕೆಡವಿ ಬಂದವರು ಯಾರು ? – ವೈರಲ್ ವಿಡಿಯೋ !

Mount Everest
Image source: Twitter

Hindu neighbor gifts plot of land

Hindu neighbour gifts land to Muslim journalist

Garbage on Mount Everest: ಜಗತ್ತಿನ ಅತಿ ಎತ್ತರದ ಮುತ್ತು ಹರಳು ಹಾಸಿದಂತಿರುವ ಮೌಂಟ್‌ ಎವರೆಸ್ಟ್‌ ಹಿಮರಾಶಿಯ ಮೇಲೆ ಎಲ್ಲಿ ನೋಡಿದರೂ ಕಸವೇ ತುಂಬಿರುವುದನ್ನು (Garbage on Mount Everest) ಕಂಡಾಗ ನೀವು ಆಶ್ಚರ್ಯ ಪಡದೇ ಇರಲು ಸಾಧ್ಯವಿಲ್ಲ.

ಪ್ರವಾಸಿಗರ ಆಕರ್ಷಣೀಯ ಕೇಂದ್ರವಾದ, ಎವರೆಸ್ಟ್‌ ಪರ್ವತವನ್ನು ಹತ್ತುವುದು ಹಲವಾರು ಜನರ ಕನಸು ಆಗಿರುತ್ತದೆ. ಈ ಪರ್ವತದಲ್ಲಿ ಬೇಸ್‌ ಕ್ಯಾಂಪ್‌ ಮಾಡುವ ಉದ್ದೇಶದಿಂದ ಪ್ರತಿವರ್ಷ ಸಾವಿರಾರು ಮಂದಿ ಭೇಟಿ ನೀಡುತ್ತಾರೆ ಇದು ನಮಗೆ ತಿಳಿದಿರುವ ವಿಚಾರ.

ಆದರೆ ಇತ್ತೀಚಿನ ವಿಡಿಯೊವೊಂದು ಪರ್ವತದ ಮೇಲೆ ತಿರಸ್ಕರಿಸಿದ ಪ್ಲಾಸ್ಟಿಕ್ ಆಕ್ಸಿಜನ್ ಕ್ಯಾನ್‌ಗಳು, ಚಾಕೊಲೇಟ್‌ಗಳು ಮತ್ತು ಎನರ್ಜಿ ಬಾರ್‌ಗಳ ಹೊದಿಕೆಗಳು, ಬಿಸಾಡಬಹುದಾದ ವೈದ್ಯಕೀಯ ತ್ಯಾಜ್ಯ, ಖಾಲಿ ಆಹಾರದ ಡಬ್ಬಗಳು, ಆಲ್ಕೋಹಾಲ್ ಬಾಟಲಿಗಳು, ಅಲ್ಯೂಮಿನಿಯಂ ಲ್ಯಾಡರ್‌ಗಳು ಮತ್ತು ಕ್ಲೈಂಬಿಂಗ್ ಉಪಕರಣಗನ್ನು ಪ್ರವಾಸಿಗರು ಎಸೆದಿರುವುದು ಕಾಣಬಹುದಾಗಿದೆ.

ಸುಪ್ರಿಯಾ ಸಾಹು ಎಂಬ ಐಎಎಸ್‌ ಅಧಿಕಾರಿಯೊಬ್ಬರು ತನ್ನ ಟ್ವಿಟರ್‌ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಎವರೆಸ್ಟ್‌ ಮೇಲೆ ಸುತ್ತಲೂ ಟೆಂಟ್‌ಗಳು ಹಾಕಿರುವುದನ್ನು ಕಾಣಬಹುದಾಗಿದೆ. ಈ ಟೆಂಟ್‌ಗಳೊಂದಿಗೆ ಸುತ್ತಲೂ ಕಸದ ರಾಶಿ ತುಂಬಿರುವುದನ್ನು ಈ ವಿಡಿಯೊ ತೋರಿಸುತ್ತದೆ.

ಈ ವಿಡಿಯೊ ಪೋಸ್ಟ್‌ ಮಾಡಿರುವ ಸುಪ್ರಿಯಾ ಅವರು ʼಮಾನವರು ಎವರೆಸ್ಟ್‌ ಅನ್ನೂ ಕೂಡ ಬಿಟ್ಟಿಲ್ಲ, ಇಲ್ಲಿನ ಪರಿಸರವನ್ನೂ ಕಸ ಹಾಗೂ ಪ್ಲಾಸ್ಟಿಕ್‌ ಮಾಲಿನ್ಯದಿಂದ ಗಬ್ಬೆಬ್ಬಿಸಿದ್ದಾರೆ, ಇದು ನಿಜಕ್ಕೂ ಹೃದಯವಿದ್ರಾವಕʼ ಎಂದು ಬರೆದುಕೊಂಡಿದ್ದಾರೆ.

ಕಾಮೆಂಟ್‌ಗಳನ್ನು ಗಮನಸಿದಾಗ,
ʼಅಲ್ಲಿಯೂ ಕಸ ಹಾಕಿ ಸುಂದರ ಪರಿಸರದ ಅಂದ ಗೆಡಿಸಿರುವುದು ನಿಜಕ್ಕೂ ವಿಷಾದನೀಯ, ಇದು ಹೃದಯ ವಿದ್ರಾವಕ ಎಂದು ವಿಡಿಯೊ ನೋಡಿದ ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಪ್ರಕೃತಿಯನ್ನು ಸಂರಕ್ಷಿಸಬೇಕಾದರೆ ಕೆಲವು ಪ್ರದೇಶಗಳನ್ನು ಮನುಷ್ಯರಿಂದ ದೂರವಿಡಬೇಕುʼ ಎಂದು ಇನ್ನೊಬ್ಬ ವ್ಯಕ್ತಿ ಕಾಮೆಂಟ್‌ ಮಾಡಿದ್ದಾರೆ. ʼಅಯ್ಯೋ ಇಲ್ಲ, ಇದು ನಿಜಕ್ಕೂ ದುಃಖದ ವಿಷಯ. ಇದನ್ನು ತಡೆಯಲು ಕಾನೂನು ತರಬೇಕುʼ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೊ ಕೆಲವು ಗಂಟೆಗಳ ಹಿಂದೆಯಷ್ಟೇ ಶೇರ್‌ ಆಗಿದೆ. ಈ ವಿಡಿಯೊ ಶೇರ್‌ ಆದ ಕ್ಷಣದಿಂದ 30000 ಜನ ನೋಡಿದ್ದಾರೆ. ಇದಕ್ಕೆ 500 ಮಂದಿಗಿಂತ ಹೆಚ್ಚು ಜನ ಲೈಕ್ಸ್‌ ಮಾಡಿದ್ದಾರೆ. ಒಟ್ಟಿನಲ್ಲಿ ಬದಲಾವಣೆ ನಮ್ಮಿಂದಲೇ ಆರಂಭವಾಗಲಿ ಎಂಬುದು ಆಶಯ.

ಇದನ್ನೂ ಓದಿ: Egg Price: ಮರಹತ್ತಿ ಕುಳಿತ ಕೋಳಿ – ಮೊಟ್ಟೆ ದರಗಳು, ಇಂದು ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ?