Home National Kolkata ವೈದ್ಯೆ ಅತ್ಯಾಚಾರ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಮೃತ ದೇಹದಲ್ಲಿ 150 ಗ್ರಾಂ ವೀರ್ಯ...

Kolkata ವೈದ್ಯೆ ಅತ್ಯಾಚಾರ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಮೃತ ದೇಹದಲ್ಲಿ 150 ಗ್ರಾಂ ವೀರ್ಯ ಪತ್ತೆ; ಒಬ್ಬನಿಂದಲ್ಲ, ಹಲವರಿಂದ ಸಾಮೂಹಿಕ ಅತ್ಯಾಚಾರ ಶಂಕೆ !!

Hindu neighbor gifts plot of land

Hindu neighbour gifts land to Muslim journalist

Kolkata: ಪಶ್ಚಿಮ ಬಂಗಾಲದ ಕೋಲ್ಕತಾದ(Kolkata) ಸರಕಾರಿ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು ವೈದ್ಯೆಯ ಮೇಲೆ ಒಬ್ಬನಿಂದ ಮಾತ್ರವಲ್ಲ, ಹಲವು ಮಂದಿಯಿಂದ ಸಾಮೂಹಿಕವಾಗಿ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಯಾಕೆಂದರೆ ವೈದ್ಯೆಯ ಮೃತ ದೇಹದಲ್ಲಿ ಬರೋಬ್ಬರಿ 150ಗ್ರಾಂ ಪ್ರಮಾಣದ ವೀರ್ಯ ಪತ್ತೆಯಾಗಿದೆ.

ಹೌದು, ಆಸ್ಪತ್ರೆಯಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ(Rape and Murder) ಪ್ರಕರಣ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಗಿದೆ. ಈ ಘಟನೆಯ ತನಿಖೆಯನ್ನು ಸಿಬಿಐ(CBI) ಈಗಾಗಲೇ ವಹಿಸಿಕೊಂಡಿದೆ. ತನಿಖೆಯಲ್ಲಿ ಒಂದರ ಹಿಂದೆ ಒಂದರಂತೆ ರೋಚಕ ಮಾಹಿತಿ ಹೊರಬೀಳುತ್ತಿದೆ.ಅತ್ಯಾಚಾರದಲ್ಲಿ ಹಲವರು ಶಾಮೀಲಾಗಿದ್ದಾರೆಂಬ ಶಂಕೆಯಿರುವ ಬಗ್ಗೆ ಆಕೆಯ ಪೋಷಕರು ಕಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಅಖಿಲ ಭಾರತ ಸರ್ಕಾರಿ ವೈದ್ಯರ ಸಂಘದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸುವರ್ಣ ಗೋಸ್ವಾಮಿ ಅವರು ಮರಣೋತ್ತರ ಪರೀಕ್ಷೆಯ ವರದಿಯನ್ನು ರುವುದಾಗಿ ಹೇಳಿದ್ದಾರೆ. ಪಿಎಂ ವರದಿಯ ಪ್ರಕಾರ, ಮಹಿಳಾ ವೈದ್ಯೆಯ ಖಾಸಗಿ ಭಾಗಗಳಲ್ಲಿ 150 ಗ್ರಾಂ ವೀರ್ಯ ಪದಾರ್ಥ ಪತ್ತೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದ ವೀರ್ಯ ಒಬ್ಬ ವ್ಯಕ್ತಿಗೆ ಸೇರಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ. ಇದು ಈ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ನಾನಾ ಸಾಧ್ಯತೆಗಳನ್ನು ಹುಟ್ಟು ಹಾಕಿದೆ.

ಮಹಿಳಾ ವೈದ್ಯೆಯ ಮೈಮೇಲೆದ್ದ ಗಾಯದ ಗುರುತುಗಳು ಹಾಗೂ ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿರುವುದನ್ನು ನೋಡಿದರೆ ಇದು ಕೇವಲ ಒಬ್ಬ ವ್ಯಕ್ತಿಯ ಕೆಲಸವಾಗಲು ಸಾಧ್ಯವಿಲ್ಲ ಎಂದು ಸುವರ್ಣಾ ಗೋಸ್ವಾಮಿ ಹೇಳಿದ್ದಾರೆ. ಮಹಿಳಾ ವೈದ್ಯೆಯ ಕುಟುಂಬಕ್ಕೂ ಹಲವು ಅನುಮಾನಗಳಿವೆ. ಒಬ್ಬನೇ ಆರೋಪಿ ಎಂಬ ಕೋಲ್ಕತ್ತಾ ಪೊಲೀಸರ ಹೇಳಿಕೆಯನ್ನು ಗೋಸ್ವಾಮಿ ತಳ್ಳಿಹಾಕಿದ್ದಾರೆ.

ಅಲ್ಲದೆ ತಮ್ಮ ಮಗಳ ದೇಹದಲ್ಲಿ ಆದ ಗಾಯಗಳು ಅತ್ಯಾಚಾರ ಹಾಗೂ ಕೊಲೆ ಎಷ್ಟು ಕ್ರೂರವಾಗಿ ನಡೆದಿದೆ ಎಂಬುದನ್ನು ಸೂಚಿಸುತ್ತದೆ. ಶವಪರೀಕ್ಷೆಯಲ್ಲಿ ಆಕೆ ಯ ದೇಹದಲ್ಲಿ 150 ಮಿಲಿ ಗ್ರಾಂನಷ್ಟು ವೀರ್ಯ ಪತ್ತೆಯಾಗಿದ್ದು, ಸಾಮೂಹಿಕ ಅತ್ಯಾಚಾರ ನಡೆದಿರುವ ಶಂಕೆಯಿದೆ ಎಂದು ಪೋಷಕರು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.

ಬಯಲಾದ್ವು ಬೆಚ್ಚಿಬೀಳಿಸೋ ಸತ್ಯಗಳು:
ಮರಣೋತ್ತರ ಪರೀಕ್ಷೆಯಲ್ಲಿ ಕೆಲವು ಭಯಾನಕ ವಿಚಾರಗಳು ಬಯಲಾಗಿವೆ. ಅತ್ಯಾಚಾರ ಎಸಗಿದ ಕ್ರೂರಿಯು ಆಕೆಯ ಕತ್ತು ಹಿಸುಕಿದ್ದಾನೆ. ಅದರಿಂದ ಆಕೆಯ ಥೈರಾಯ್ಡ್ ಎಲುಬು ತುಂಡಾಗಿದೆ. ಆಕೆಯ ಗುಪ್ತಾಂಗಗಳಲ್ಲಿ ಆಳವಾದ ಗಾಯಗಳಾಗಿದ್ದು, ಪಾಪಿಯ ಪೈಶಾಚಿಕತೆಯನ್ನು ತೆರೆದಿಟ್ಟಿದೆ. ಮಹಿಳೆಯ ಹೊಟ್ಟೆ ಕೆಳಗೆ, ತುಟಿಗಳು, ಬೆರಳುಗಳು ಮತ್ತು ಎಡಗಾಲಿಗೆ ತೀವ್ರ ಗಾಯಗಳಾಗಿವೆ. ಆಕೆಯ ಮೂಗು ಹಾಗು ಬಾಯನ್ನು ಒತ್ತಿ ಹಿಡಿಯಲಾಗಿದೆ. ಆಕೆ ಕಿರುಚದಂತೆ ತಡೆಯಲು ತಲೆಯನ್ನು ಗೋಡೆ ಅಥವಾ ನೆಲಕ್ಕೆ ಬಲವಾಗಿ ಅಪ್ಪಳಿಸಲಾಗಿದೆ.