Home latest LPG ಸಿಲಿಂಡರ್ ದರದಲ್ಲಿ ಮತ್ತೆ ಇಳಿಕೆ – ಇನ್ಮುಂದೆ ಈ ಕಡಿಮೆ ಬೆಲೆಗೆ ಸಿಗುತ್ತೆ ಗ್ಯಾಸ್...

LPG ಸಿಲಿಂಡರ್ ದರದಲ್ಲಿ ಮತ್ತೆ ಇಳಿಕೆ – ಇನ್ಮುಂದೆ ಈ ಕಡಿಮೆ ಬೆಲೆಗೆ ಸಿಗುತ್ತೆ ಗ್ಯಾಸ್ !!

Hindu neighbor gifts plot of land

Hindu neighbour gifts land to Muslim journalist

Gas Cylinder Price Down: ದೀಪಾವಳಿ ಬಳಿಕ ರಾಜ್ಯದ ಜನತೆಗೆ ಗುಡ್ ನ್ಯೂಸ್(Good News)ಹೊರ ಬಿದ್ದಿದೆ. ಇಂದಿನಿಂದ ಗ್ಯಾಸ್ ಸಿಲಿಂಡರ್ ದರ ಇಳಿಕೆಯಾಗಿದೆ(Gas Cylinder Price Down). ಸರ್ಕಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ( LPG Gas Cylinder)ಬೆಲೆಯನ್ನು ಕಡಿತಗೊಳಿಸಿದ್ದು, ಹೊಸ ಬೆಲೆಗಳು ಇಂದಿನಿಂದಲೇ ಜಾರಿಗೆ ಬಂದಿದೆ.

ಸರ್ಕಾರಿ ತೈಲ ಕಂಪನಿ IOCL ಮಾಹಿತಿಯ ಅನುಸಾರ, ಗ್ಯಾಸ್ ಸಿಲಿಂಡರ್‌ಗಳು ನವೆಂಬರ್ 16 ರಿಂದ ಕಡಿತವಾಗಿದೆ. 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (LPG Gas Cylinder)ಬೆಲೆ 57.50 ರೂ.ಗಳಷ್ಟು ಇಳಿಕೆ ಕಂಡಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡಿಲ್ಲ. 14 ಕೆಜಿ ಸಿಲಿಂಡರ್ ದರಗಳು ಹಿಂದಿನ ರೀತಿಯೇ ಇರಲಿದೆ.

14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರ ಹೀಗಿದೆ:
ದೆಹಲಿ- 903 ರೂ. ,ಕೋಲ್ಕತ್ತಾ – 929 ರೂ.,ಮುಂಬೈ – 902.50 ರೂ ಮತ್ತು ಚೆನ್ನೈ – 918.50 ರೂ. ಯಿದೆ. ಇಂದಿನ ಕಡಿತದ ನಂತರ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1755.50 ರೂ ಆಗಿದ್ದು, ಕೋಲ್ಕತ್ತಾದಲ್ಲಿ 1885.50 ರೂ. ಆಗಿರಲಿದೆ. ಮುಂಬೈನಲ್ಲಿ 1728 ರೂ., ಚೆನ್ನೈನಲ್ಲಿ ಸಿಲಿಂಡರ್‌ಗೆ 1942 ರೂ.ಆಗಿದೆ. ದೀಪಾವಳಿಗೂ ಮೊದಲೇ ನವೆಂಬರ್ 1 ರಂದು ವಾಣಿಜ್ಯ ಸಿಲಿಂಡರ್‌ಗಳ ದರವನ್ನು 101.50 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಆದರೆ ಆ ಸಮಯದಲ್ಲಿ ಕೂಡಾ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸ ಆಗಿಲ್ಲ.

ಇದನ್ನೂ ಓದಿ: Shivamurthy Murugha Sharanaru: 14 ತಿಂಗಳು ಜೈಲಿನಲ್ಲಿದ್ದ ಮುರುಘಾ ಶ್ರೀ ಬಿಡುಗಡೆ !!