Home Business ಉಳಿತಾಯಕ್ಕಾಗಿಯೇ ಇದೆ ಸರ್ಕಾರದ ಬೆಸ್ಟ್ ಯೋಜನೆಗಳು : ಉತ್ತಮ ಸೇವಿಂಗ್ ಸ್ಕೀಮ್ ಗಳ ಕಂಪ್ಲೀಟ್ ಡೀಟೇಲ್ಸ್...

ಉಳಿತಾಯಕ್ಕಾಗಿಯೇ ಇದೆ ಸರ್ಕಾರದ ಬೆಸ್ಟ್ ಯೋಜನೆಗಳು : ಉತ್ತಮ ಸೇವಿಂಗ್ ಸ್ಕೀಮ್ ಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

Saving scheme :ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ದುಡಿಯಲು ಶಕ್ತಿ ಇರುವಾಗ ದುಡಿದು ಸಂಪಾದಿಸಿದರಷ್ಟೇ ಮುಂದಿನ ದಿನಗಳಲ್ಲಿ ಸಂತೋಷವಾಗಿ ಜೀವನ ನಡೆಸಲು ಸಾಧ್ಯ. ಹೌದು. ಉತ್ತಮವಾದ ಸೇವಿಂಗ್ ಮೂಲಕ ನಿವೃತ್ತಿಯ ಸಮಯದಲ್ಲಿ ದೊಡ್ಡ ಪ್ರಮಾಣದ ಹಣವನ್ನು ಪಡೆಯಬಹುದು.

ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಹಾಗಾದ್ರೆ ಬನ್ನಿ ಹಣ ಹೂಡಿಕೆ (Saving scheme) ಮಾಡಲು ಸರ್ಕಾರದ ಯಾವ ಯೋಜನೆಗಳು ಉತ್ತಮ ಎಂಬುದನ್ನು ತಿಳಿಯೋಣ.

ಹಿರಿಯ ನಾಗರಿಕ ಉಳಿತಾಯ ಯೋಜನೆ:
ಹಿರಿಯ ನಾಗರಿಕರು ತೆರಿಗೆ ಉಳಿತಾಯಕ್ಕಾಗಿ ಹೂಡಿಕೆ ಮಾಡಲು ಬಯಸಿದರೆ, ಹಿರಿಯ ನಾಗರಿಕ ಉಳಿತಾಯ ಯೋಜನೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಹೂಡಿಕೆದಾರರು ಶೇ.8ರಷ್ಟು ಲಾಭ ಪಡೆಯುತ್ತಾರೆ. ಇತ್ತೀಚೆಗೆ ಸರ್ಕಾರವು ತನ್ನ ಹೂಡಿಕೆಯ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಿದೆ.

ಕಿಸಾನ್ ವಿಕಾಸ್ ಪತ್ರ:
ಕಿಸಾನ್ ವಿಕಾಸ್ ಪತ್ರವು ಅಪಾಯ ಮುಕ್ತ ಹೂಡಿಕೆಯ ಆಯ್ಕೆಯಾಗಿದೆ. ಇದರಲ್ಲಿ ನಿಮಗೆ ಪೋಸ್ಟ್ ಆಫೀಸ್‌ನಿಂದ 7.2% ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡಲಾಗುತ್ತದೆ.

ಸಾರ್ವಜನಿಕ ಭವಿಷ್ಯ ನಿಧಿ:
ಸಾರ್ವಜನಿಕ ಭವಿಷ್ಯ ನಿಧಿಯು ಅತ್ಯಂತ ಜನಪ್ರಿಯವಾದ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಹೂಡಿಕೆದಾರರು ಸಂಯುಕ್ತ ಆಧಾರದ ಮೇಲೆ 7.1% ಆದಾಯವನ್ನು ಪಡೆಯಬಹುದಾಗಿದೆ.

ರಾಷ್ಟ್ರೀಯ ಉಳಿತಾಯ ಯೋಜನೆ:
ರಾಷ್ಟ್ರೀಯ ಉಳಿತಾಯ ಯೋಜನೆ ಮತ್ತೊಂದು ಅಪಾಯ ಮುಕ್ತ ಹೂಡಿಕೆಯ ಆಯ್ಕೆಯಾಗಿದ್ದು, ಇದರಲ್ಲಿ ಹಣವನ್ನು ಹೂಡಿಕೆ ಮಾಡಿದ್ರೆ ಶೇ. 7% ದರದಲ್ಲಿ ಬಡ್ಡಿ ಸಿಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ:
ನಿಮ್ಮ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ನೀವು ಹೂಡಿಕೆ ಮಾಡಲು ಬಯಸಿದರೆ, ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದರಲ್ಲಿ ಹೂಡಿಕೆ ಮಾಡುವುದರಿಂದ, ನೀವು ಶೇ. 8 ರ ಬಡ್ಡಿದರವನ್ನು ಪಡೆಯುತ್ತೀರಿ.