Home Business Atal pension yojana : ಅಟಲ್ ಪಿಂಚಣಿ ಯೋಜನೆಯ ಪಿಂಚಣಿ ಹೆಚ್ಚಳಕ್ಕೆ ಬೇಡಿಕೆ ; ಸರ್ಕಾರದ...

Atal pension yojana : ಅಟಲ್ ಪಿಂಚಣಿ ಯೋಜನೆಯ ಪಿಂಚಣಿ ಹೆಚ್ಚಳಕ್ಕೆ ಬೇಡಿಕೆ ; ಸರ್ಕಾರದ ಉತ್ತರ ಏನು?

Atal Pension yojana

Hindu neighbor gifts plot of land

Hindu neighbour gifts land to Muslim journalist

Atal Pension yojana : ಸರ್ಕಾರವು ಜನರಿಗೆ ನೆರವಾಗುವ ನಿಟ್ಟಿನಿಂದ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಲೇ ಬಂದಿದ್ದು, ಅವುಗಳಲ್ಲಿ ಅಟಲ್ ಪಿಂಚಣಿ ಯೋಜನೆ (Atal Pension yojana) ಕೂಡ ಸೇರಿದೆ. ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಮೋದಿ ಸರ್ಕಾರ (bjp) ಜಾರಿಗೆಗೊಳಿಸಿದೆ.

ಅಟಲ್ ಪಿಂಚಣಿ ಯೋಜನೆಯು (Atal Pension yojana) ನಿವೃತ್ತಿಯ ನಂತರದ ಜೀವನಕ್ಕಾಗಿ ಸ್ವಯಂಪ್ರೇರಿತ ಉಳಿತಾಯವನ್ನು ಉತ್ತೇಜಿಸುತ್ತದೆ. 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಡಿಯಲ್ಲಿ ತಮ್ಮ ಹೆಸರನ್ನ ನೋಂದಾಯಿಸಲು ಅರ್ಹರಾಗಿರುತ್ತಾರೆ.
ಈ ಯೋಜನೆಯಡಿ 60 ವರ್ಷ ಮೇಲ್ಪಟ್ಟವರಿಗೆ ಆಯಾ ಕಾರ್ಮಿಕರ ಪಾಲಿನ ಕೊಡುಗೆ ಆಧರಿಸಿ ಕನಿಷ್ಠ 1 ರಿಂದ 5 ಸಾವಿರ ರೂ.ಗಳವರೆಗೆ ಪಿಂಚಣಿ ನೀಡಲಾಗುತ್ತದೆ.

ಕಳೆದ ಅಕ್ಟೋಬರ್ 1 ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯ ನಿಯಮದಲ್ಲಿ (Atal pension Rules) ಬದಲಾವಣೆಗಳನ್ನು ಮಾಡಿದೆ. ಆದಾಯ ತೆರಿಗೆ ಪಾವತಿಸುವ ನಾಗರಿಕರು ನೋಂದಣಿ ಮಾಡಿಕೊಳ್ಳುವಂತಿಲ್ಲ, ಈ ಯೋಜನೆಗೆ ಕೊಡುಗೆ ನೀಡುವಂತಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆಯು ಅಧಿಸೂಚನೆ ಪ್ರಕಟಿಸಿತ್ತು. ಅಂದಿನಿಂದ ಈ ಯೋಜನೆಯಡಿ ಪಿಂಚಣಿ ಮೊತ್ತ ಹೆಚ್ಚಾಗಲಿದೆ ಎಂದು ಚರ್ಚಿಸಲಾಗಿದೆ. ಈ ಕುರಿತು ಹಣಕಾಸು ಸಚಿವಾಲಯಕ್ಕೆ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ಶಿಫಾರಸು ಮಾಡಿದೆ. ಇದೀಗ ಕೇಂದ್ರ ಸರ್ಕಾರದಿಂದ ಇದಕ್ಕೆ ಉತ್ತರ ಬಂದಿದೆ. ಏನು ಉತ್ತರ? ನೋಡೋಣ.

ಇದೀಗ ಈ ಯೋಜನೆಯಲ್ಲಿ ಹೂಡಿಕೆ ಮಾಡಲು 1,000 ರೂ.ನಿಂದ 5,000 ರೂ. ವರೆಗಿನ 5 ಪಿಂಚಣಿ ಸ್ಲ್ಯಾಬ್‌ಗಳಿವೆ. ಇದನ್ನು 10 ಸಾವಿರ ರೂ.ಗೆ ಹೆಚ್ಚಿಸಬೇಕು ಎಂಬ ಬೇಡಿಕೆ ಆಗುತ್ತಿದೆ. ಅಟಲ್ ಪಿಂಚಣಿ ಯೋಜನೆಯಡಿ ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಆದರೆ, ಪಿಂಚಣಿ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗಿಲ್ಲ, ಸರ್ಕಾರ ಅಂತಹ ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕರದ್ (union minister bhagwat karad) ಹೇಳಿದ್ದಾರೆ.

ಸರ್ಕಾರ ಪಿಂಚಣಿ ಮೊತ್ತವನ್ನು ಹೆಚ್ಚಿಸಿದರೆ ಅದು ನೇರವಾಗಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತದೆ. ಪಿಂಚಣಿ ಮೊತ್ತ ಹೆಚ್ಚಿಸುವುದರಿಂದ ಖಾತೆದಾರರು ಮಾಡುವ ಹೂಡಿಕೆಯ ಕಂತು ಕೂಡ ಹೆಚ್ಚಾಗಲಿದೆ ಎಂದು ಭಾಗವತ್ ಹೇಳಿದರು. ಹಾಗಾಗಿ ಅವರ ಮೇಲೆ ಹೆಚ್ಚುವರಿ ಹೊರೆ ಇರುತ್ತದೆ. ಅಟಲ್ ಪಿಂಚಣಿ ಯೋಜನೆಯಲ್ಲಿ ನಲ್ಲಿ ಚಂದಾದಾರರ ನೆಲೆಯನ್ನು ಹೆಚ್ಚಿಸುವ ದೃಷ್ಟಿಯಿಂದ, PFRDA ಯಿಂದ ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಪಿಂಚಣಿ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಳ್ಳಲು ನಿರಾಕರಿಸಿದೆ ಎಂದು ಹೇಳಿದರು.