Home Latest Health Updates Kannada ತುಳಸಿ ಬೇರಿನಿಂದ ಹೆಚ್ಚಾಗುತ್ತೆ ನಿಮ್ಮ ಸಂಪತ್ತು!!

ತುಳಸಿ ಬೇರಿನಿಂದ ಹೆಚ್ಚಾಗುತ್ತೆ ನಿಮ್ಮ ಸಂಪತ್ತು!!

Hindu neighbor gifts plot of land

Hindu neighbour gifts land to Muslim journalist

ಪುರಾತನ ಕಾಲದಿಂದಲೂ ಹಿಂದೂಗಳು ತುಳಸಿ ಸಸ್ಯವನ್ನು ಪವಿತ್ರವಾದ ಅಷ್ಟ ದೇವತೆ ಇರುವ ದೇವರೆಂದು ಮತ್ತು ನಮ್ಮ ಮನೆಗೆ ಶ್ರೇಯಸ್ಸು ಕೊಡುವ ಸಸ್ಯವೆಂದು ನಂಬಿದ್ದಾರೆ. ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಇಷ್ಟೇ ಅಲ್ಲ, ತುಳಸಿ ಗಿಡವು ಮುಂಬರುವ ಅಹಿತಕರ ಘಟನೆಯನ್ನು ಪತ್ತೆ ಮಾಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇಂತಹ ತುಳಸಿ ಗಿಡ ಕೇವಲ ತುಳಸಿ ಕಟ್ಟೆಯಲ್ಲಿರುವ ಗಿಡವಲ್ಲದೆ, ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ.

ಹೌದು. ತುಳಸಿ ನಮ್ಮ ದೇಹಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ದೇಹದ ಅನೇಕ ಗಂಭೀರ ರೋಗಗಳನ್ನು ತೆಗೆದುಹಾಕಲಾಗುತ್ತದೆ. ತುಳಸಿ ಎಲೆ ಮಾತ್ರವಲ್ಲದೇ ತುಳಸಿ ಬೇರಿನಲ್ಲೂ ಔಷಧೀಯ ಗುಣ ಮಹತ್ವವಿದೆ. ಇದನ್ನು ಅತ್ಯಂತ ಪವಿತ್ರವೆನ್ನಲಾಗುತ್ತದೆ. ಅಷ್ಟೇ ಅಲ್ಲದೆ, ತುಳಸಿಯ ಬೇರಿನಲ್ಲಿ ಸಾಲಿಗ್ರಾಮ ನೆಲೆಸಿದೆ ಎಂಬ ನಂಬಿಕೆಯಿದ್ದು, ನಿಮ್ಮ ಸಂಪತ್ತು ಕೂಡ ಹೆಚ್ಚಾಗುತ್ತದೆಯಂತೆ.

ತುಳಸಿ ಬೇರಿನ ಸಹಾಯ ಪಡೆದು ಹೇಗೆ ಅದೃಷ್ಟ ನಿಮ್ಮ ಕೈ ಹಿಡಿಯುವಂತೆ ಮಾಡಬಹುದು ಎಂಬುದನ್ನು ಇಲ್ಲಿ ನೋಡಿ. ಆರ್ಥಿಕ ಸಂಕಷ್ಟ ದೂರವಾಗಲು, ತುಳಸಿ ಬೇರನ್ನು ತೆಗೆದು ಚೆನ್ನಾಗಿ ತೊಳೆಯಬೇಕು. ಬಳಿಕ ಅದನ್ನು ಗಂಗಾಜಲದಲ್ಲಿ ತೊಳೆಯಬೇಕು. ನಂತರ ಬೇರಿಗೆ ಪೂಜೆ ಮಾಡಬೇಕು. ಆ ಬಳಿಕ ಬೇರನ್ನು ನಿಮ್ಮ ಬಳಿ ಅಥವಾ ಹಣವಿಡುವ ಸ್ಥಳದಲ್ಲಿ ಇಡಬೇಕು.

ತುಳಸಿ ಬೇರನ್ನು ತೆಗೆದುಕೊಂಡು ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಂತರ ಅದಕ್ಕೆ ದಾರ ಕಟ್ಟಿ, ಅದನ್ನು ನಿಮ್ಮ ತೋಳಿಗೆ ಕಟ್ಟಿಕೊಂಡ್ರೆ ಸಾಕಷ್ಟು ಲಾಭವಿದೆ. ನಿಮ್ಮ ಜಾತಕದಲ್ಲಿ ಗ್ರಹದೋಷವಿದ್ದರೆ ಇದ್ರಿಂದ ನಿವಾರಣೆಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಒಟ್ಟಾರೆ ಹೀಗೆ ಮಾಡೋದ್ರಿಂದ ಶೀಘ್ರ ಲಾಭವನ್ನು ನೀವು ಪಡೆಯೋದಂತೂ ನಿಜ.