Home Interesting High Court: ಹೆಣ್ಣುಮಕ್ಕಳು 2 ನಿಮಿಷದ ಲೈಂಗಿಕ ಸುಖಕ್ಕೆ ಹಾತೊರೆಯದೆ ನಿಯಂತ್ರಣ ಮಾಡಿ !!...

High Court: ಹೆಣ್ಣುಮಕ್ಕಳು 2 ನಿಮಿಷದ ಲೈಂಗಿಕ ಸುಖಕ್ಕೆ ಹಾತೊರೆಯದೆ ನಿಯಂತ್ರಣ ಮಾಡಿ !! ಹೈಕೋರ್ಟ್ ನಿಂದ ಅಚ್ಚರಿ ತೀರ್ಪು- ಸುಪ್ರೀಂ ತರಾಟೆ !!

High Court

Hindu neighbor gifts plot of land

Hindu neighbour gifts land to Muslim journalist

High Court: ಯವ್ವನದಲ್ಲಿ ಹೆಣ್ಣುಮಕ್ಕಳು ಎರಡು ನಿಮಿಷಗಳ ಸುಖಕ್ಕಾಗಿ ದೇಹವನ್ನು ಒಡ್ಡಿಕೊಳ್ಳುವ ಬದಲು, ತಮ್ಮ ಲೈಂಗಿಕ ಬಯಕೆಗಳನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಕಲ್ಕತ್ತಾ ಹೈಕೋರ್ಟ್‌ನ (High Court) ತೀರ್ಪು ನೀಡಿದ್ದು, ಇದೀಗ ಈ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕಲ್ಕತ್ತಾ ಹೈಕೋರ್ಟ್ ತೀರ್ಪಿನ ಕೆಲವು ಭಾಗಗಳು ‘ತೀವ್ರ ಆಕ್ಷೇಪಾರ್ಹ ಮತ್ತು ಸಂಪೂರ್ಣ ಅನಗತ್ಯವಾಗಿದ್ದವು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ತೀರ್ಪು ಮೇಲ್ನೋಟಕ್ಕೆ, ನ್ಯಾಯಾಧೀಶರ ವೈಯಕ್ತಿಕ ಅಭಿಪ್ರಾಯದಂತೆ ಕಾಣಿಸುತ್ತಿದೆ ಎಂದಿರುವ ನ್ಯಾಯಪೀಠ, “ನ್ಯಾಯಾಧೀಶರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಅಥವಾ ಉಪದೇಶಗಳನ್ನು ನೀಡುವುದನ್ನು ನಿರೀಕ್ಷಿಸಲಾಗದು” ಎಂದಿದೆ.

ಕಲ್ಕತ್ತಾ ಹೈಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪು ಮತ್ತು ರಾಜ್ಯ ಸರ್ಕಾರ ಹಾಗೂ ಇತರರಿಗೆ ನೋಟಿಸ್ ನೀಡಿದ್ದ ಸಂಗತಿಯನ್ನು ಸುಪ್ರೀಂಕೋರ್ಟ್ ಸುಮೊಟೊ (ಸ್ವಯಂ ಪ್ರೇರಿತ) ಪ್ರಕರಣವನ್ನಾಗಿ ತೆಗೆದುಕೊಂಡಿತ್ತು. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದೇ ಎಂಬುದನ್ನು ತಿಳಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಕಲ್ಕತ್ತಾ ಹೈಕೋರ್ಟ್ ಪ್ರಕಾರ,
ತಾನು ‘ರೊಮ್ಯಾಂಟಿಕ್ ಅಫೇರ್’ ಹೊಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸಿದ್ದ ಕಲ್ಕತ್ತಾ ಹೈಕೋರ್ಟ್, ತಾರುಣ್ಯದಲ್ಲಿರುವ ಹೆಣ್ಣುಮಕ್ಕಳು ತಮ್ಮ ಲೈಂಗಿಕ ಬಯಕೆಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಬೇಕು ಮತ್ತು ಹೆಚ್ಚೆಂದರೆ ಎರಡು ನಿಮಿಷಗಳ ಕಾಲ ಸಿಗುವ ಲೈಂಗಿಕ ಆನಂದವನ್ನು ಅನುಭವಿಸುವುದರಿಂದ ನಿಯಂತ್ರಿಸಿಕೊಳ್ಳಬೇಕು ಎಂದು ಹೇಳಿತ್ತು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು.

16 ವರ್ಷದ ಬಾಲಕಿ ಜತೆ ಲೈಂಗಿಕ ಸಂಬಂಧ ಹೊಂದಿದ್ದ 20 ವರ್ಷದ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಬಾಲಕಿ, ತಾನು ಸ್ವ ಇಚ್ಛೆಯಿಂದ ಯುವಜನ ಜತೆ ದೈಹಿಕ ಸಂಬಂಧ ಹೊಂದಿದ್ದಾಗಿ ಮತ್ತು ಇದು ಅತ್ಯಾಚಾರವಲ್ಲ ಎಂದು ಹೇಳಿದ್ದಳು. ಅಲ್ಲದೆ, ಆತನನ್ನು ಮದುವೆಯಾಗಿರುವುದಾಗಿ ಕೂಡ ತಿಳಿಸಿದ್ದಳು. ಪೋಕ್ಸೋ ಕಾಯ್ದೆ ಪ್ರಕಾರ ಇದು ಅಪರಾಧವಾಗಿದ್ದರೂ, ಆತನನ್ನು ಕೋರ್ಟ್ ಅಲ್ಲಗಳೆದಿತ್ತು.