Home Health ಸಂಗಾತಿ ಜೊತೆ ಸುಂದರವಾದ ರಾತ್ರಿಯನ್ನು ಕಳೆಯಬೇಕೆಂದರೆ, ಬಳಸಿ ಈ ಸುಮಧುರ ಸುಗಂದ ದ್ರವ್ಯ

ಸಂಗಾತಿ ಜೊತೆ ಸುಂದರವಾದ ರಾತ್ರಿಯನ್ನು ಕಳೆಯಬೇಕೆಂದರೆ, ಬಳಸಿ ಈ ಸುಮಧುರ ಸುಗಂದ ದ್ರವ್ಯ

Hindu neighbor gifts plot of land

Hindu neighbour gifts land to Muslim journalist

ಸೆಕ್ಸ್ ಎಂಬ ಅದ್ಭುತ ಅನುಭವವನ್ನು ವಿವರಿಸುವುದು ಕಷ್ಟ. ಅಂತಹ ಸೆಕ್ಸ್ ಲೈಫ್ ನಲ್ಲಿ ಮತ್ತಷ್ಟು ಸ್ಫೋಟಕ ಬದಲಾವಣೆ ತರಬೇಕೆಂದು ನಿಮಗೆ ಅನಿಸಿದರೆ, ಅಥವಾ ಸೆಕ್ಸ್ ನಲ್ಲಿ ಹೊಚ್ಚ ಹೊಸ ಪ್ರಯೋಗ ನಡೆಸಬೇಕೆಂದು ಬಯಸುವ ವಿಜ್ಞಾನಿಗಳು ಬೇವಾಗಬೇಕೆಂದರೆ, ಓ ಸಂಗಾತಿಗಳೇ ಇಲ್ಲಿದೆ ನೋಡಿ ನಮ್ಮ ಹಾಟ್ ಸಜೇಶನ್. ನಿಮ್ಮ ಬೆಚ್ಚನೆಯ ರಾತ್ರಿಗಳ ಸುಖಕರ ಸೆಕ್ಸ್ ಹಾಗೂ ರೋಮ್ಯಾನ್ಸ್ ಗಾಗಿ ಇಲ್ಲಿದೆ ಕೆಲವೊಂದು ಟಿಪ್ಸ್!

ಶ್ರೀಗಂಧದ ತೈಲ : ಶ್ರೀಗಂಧದ ತೈಲ ಮನಸ್ಸನ್ನು ರಿಲ್ಯಾಕ್ಸ್ ಮಾಡುವ ಶಕ್ತಿ ಹೊಂದಿದೆ. ಅದು ಮನಸ್ಸಿನ ಒತ್ತಡ ಕಡಿಮೆ ಮಾಡತ್ತದೆ. ಒತ್ತಡ ರಹಿತ ಜೀವನವೆ ಸೆಕ್ಸ್ ಲೈಫ್ ಗೆ ಬೇಕಾದ ಮೊದಲ ಅಗತ್ಯ ಎನ್ನುವುದು ಮಾಡರ್ನ್ ವಿಜ್ಞಾನ ಕೂಡ ಒಪ್ಪಿಕೊಂಡ ಸತ್ಯ. ಹಾಗೆ ಸೆಕ್ಸ್ ನ ಉತ್ತೇಜನಕ್ಕೆ ಶ್ರೀಗಂಧದ ತೈಲ ದಾರಿ ಮಾಡಿಕೊಡುತ್ತದೆ. ನಿಮ್ಮ ಕಿವಿಯ ಹಿಂಭಾಗಕ್ಕೆ ಒಂದೆರಡು ಹಾಕಿಕೊಂಡು ನೋಡಿ. ಅಥವಾ ನಿಮ್ಮವಳ ಉನ್ಮತ್ತ ಜಾಗಗಳನ್ನು ಸ್ಕಾನ್ ಮಾಡಿ, ಅಲ್ಲಿಗೆ ಒಂದರೆ ಹನಿ ಚಿಮುಕಿಸಿ. ನಿಮ್ಮಾಕೆ ನಿಮ್ಮನ್ನು ಚಿಗುರು ಬಳ್ಳಿಯ ಥರ ಆವರಿಸಿಕೊಳ್ಳದೆ ಇದ್ದರೆ, ಮತ್ತೆ ಹೇಳಿ !

ರೋಸ್ ಆಯಿಲ್ : ಸೆಂಟ್ ವಿಚಾರ ಬಂದಾಗ ಮೊದಲ
ಸ್ಥಾನ ಗುಲಾಬಿಗೆ ಹೋಗುತ್ತದೆ. ರೋಮ್ಯಾನ್ಸ್ ವಿಚಾರದಲ್ಲೂ ರೋಸ್ ಜನರ ಮೊದಲ ಆಯ್ಕೆ. ಬಹುಶಃ ಒಂದು ಗುಲಾಬಿ ಗಿಫ್ಟ್ ಅವಳಿಗೆ ಕೊಡದ ಅರಸಿಕ ಇರಲಿಕ್ಕೆ ಸಾಧ್ಯ ಇಲ್ಲ. ಅಷ್ಟರಮಟ್ಟಿಗೆ ಗುಲಾಬಿ ಪ್ರೀತಿಯ ಸಾಮ್ರಾಜ್ಯದಲ್ಲಿ ಆಸ್ಥಾನದ ಸ್ಥಾನವನ್ನು ಪಡೆದಿದೆ. ರೋಸ್ ಸ್ಮೆಲ್ ಕೆಲ ಸೆಕ್ಸ್ ಹಾರ್ಮೋನ್ ಗಳ ಮೇಲೆ ಪ್ರಭಾವ ಬೀರುತ್ತದೆ ಮತ್ತು ಅಕ್ಕಾಂಕ್ಷೆಗಳನ್ನು ಬಡಿದೆಬ್ಬಿಸಿ ಬಿಡುತ್ತದೆ.

ಮಲ್ಲಿಗೆ : ರೊಮ್ಯಾನ್ಸ್ ಗೆ ಇನ್ನೊಂದು ಹೆಸರು ಮಲ್ಲಿಗೆ. ಸೆಕ್ಸ್ ಗೂ ಮುನ್ನ ಮಲ್ಲಿಗೆ ವಾಸನೆ ಸಂಗಾತಿಯನ್ನು ಆಕರ್ಷಿಸಲಿದೆ. ಮಲ್ಲಿಗೆ ಇಲ್ಲದೆ ಮೊದಲ ರಾತ್ರಿ ನಡೆಯುತ್ತದೆ ಎನ್ನುವುದೊಂದು ದೊಡ್ಡ ಕನಸು. ಅವಳು ಮುಡಿದ ಮಲ್ಲಿಗೆಯ ಗಾಢ ಪರಿಮಳ ಆತನನ್ನು ಆಕ್ರಮಿಸಿ ಕೊಳ್ಳುತ್ತದೆ. ನಂತರದ್ದು ಎಲ್ಲವೂ ಎಲ್ಲವೂ ಸೆನ್ಸಾರ್. ಮರುದಿನ ಆಕೆಯ ಮುಡಿಯ ಬಾಡಿದ ಮಲ್ಲಿಗೆಯ ಅಳಿದುಳಿದ ಪಳೆಯುಳಿಕೆಗಳನ್ನು ನೋಡಿ, ಆಗಿ ಹೋದುದನ್ನು ಊಹಿಸಿಕೊಳ್ಳಬಹುದು. ಅಷ್ಟರ ಮಟ್ಟಿಗೆ ಪ್ರೀತಿಗೂ, ಅದು ಮೂಡಿಸುವ ಸೆಕ್ಸ್ ಗೂ ಇದೆ ಮಲ್ಲಿಗೆಯ ಸಾರಥ್ಯ.

ವೆನಿಲ್ಲಾ : ಈ ಮಧ್ಯೆ ವೆನಿಲ್ಲಾ ಕೂಡ ಸಂಗಾತಿಯನ್ನು ತೀವ್ರವಾಗಿ ಆಕರ್ಷಿಸಬಲ್ಲದು. ಇದರ ವಾಸನೆ ಮನಸ್ಸನ್ನು ಶಾಂತವಾಗಿರಿಸುತ್ತದೆ. ರಾತ್ರಿಯ ಹೊತ್ತು ಹೀಗೆ ಶಾಂತ ಮನಸ್ಸಿನ ಸಂಗಾತಿ, ವೆನಿಲ್ಲಾ ಫ್ಲೇವರ್ ನ ಜತೆ ಮನಸೋ ಇಚ್ಚೆ ನಿದ್ರಾಹೀನ ರಾತ್ರಿಗಳನ್ನು ಕಳೆಯಬಲ್ಲರು. ಅದಕ್ಕೇ ಇರಬೇಕು, ಈಗೀಗ ಕಾಂಡೊಮ್ ಗಳಲ್ಲಿ ವೆನಿಲ್ಲಾ ಫ್ಲೇವರ್ ಹೆಚ್ಚು ಹೆಚ್ಚಾಗಿ ಕಂಡುಬರ್ತಿವೆ. ನಿಮ್ಮ ಗೆಳತಿಯ ಜತೆ ಸುಂದರ ಕ್ಷಣ ಕಳೆಯಬೇಕೆಂದ್ರೆ ವೆನಿಲ್ಲಾ ಸುಗಂಧ ಬೆಸ್ಟ್ ಆಪ್ಷನ್. ಕೊನೆಯದಾಗಿ, ರೋಸ್ ಇರಲಿ, ಮಲ್ಲಿಗೆಯೇ ಮೆತ್ತಗೆ ನಡೆದು ಬರಲಿ; ಶ್ರೀಗಂಧ ಯಾ ವೆನಿಲ್ಲಾ – ಫ್ಲೇವರ್ ಗಳು ಹಲವು, ಬಳಸಿ ಸುಖಿಸುವ ಮನಸ್ಸುಗಳು ನಿಮ್ಮದಾಗಲಿ. ಹ್ಯಾಪಿ ಸೆಕ್ಸ್ ಲೈಫ್ ಅಹೆಡ್..!