Home latest Marriage: ವರ್ಷಕ್ಕೆ ನಾಲ್ಕು ಲಕ್ಷ ಸಂಬಳ ಪಡೆಯುವ ಮಹಿಳೆಗೆ ಕೋಟಿ ಸಂಬಳ ಪಡೆಯುವ ವರ ಬೇಕಂತೆ-...

Marriage: ವರ್ಷಕ್ಕೆ ನಾಲ್ಕು ಲಕ್ಷ ಸಂಬಳ ಪಡೆಯುವ ಮಹಿಳೆಗೆ ಕೋಟಿ ಸಂಬಳ ಪಡೆಯುವ ವರ ಬೇಕಂತೆ- ಹೀಗೊಂದು ಮದುವೆ ಡಿಮ್ಯಾಂಡ್

Marriage

Hindu neighbor gifts plot of land

Hindu neighbour gifts land to Muslim journalist

Marriage: ಹಿಂದೆಲ್ಲ ಮದುವೆ ಮಾಡಲು ವಧುವಿನ ಕಡೆಯವರು ವರನ ಕಡೆಯ ಕುಟುಂಬ ಹಿನ್ನೆಲೆಯ ಬಗ್ಗೆ ಆತನ ಗುಣ ಅವಗುಣಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದರು, ಒಂದು ವೇಳೆ ಆತ ಸ್ವಲ್ಪ ಬಡವನಾಗಿದ್ದರು ಒಳ್ಳೆಯ ಗುಣ ಉಳ್ಳವನಾಗಿದ್ದರೆ ಆತನಿಗೆ ತಮ್ಮ ಮಗಳನ್ನು ನೀಡಿ ಮದುವೆ ಮಾಡುತ್ತಿದ್ದರು. ಆದರೆ ಈಗ ಕಾಲ ತುಂಬಾ ಬದಲಾಗಿದೆ. ಎಷ್ಟರ ಮಟ್ಟಿಗೆಂದರೆ ವಧುವಿನ ಕಡೆಯವರ ಬೇಡಿಕೆಗಳು ಮಿತಿಮೀರಿದ್ದು ಹುಡುಗರಿಗೆ ಹೆಣ್ಣುಗಳೇ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Actress Rashmika Mandanna:  ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಪ್ರಯುಕ್ತ ಶ್ರೀವಲ್ಲಿ ಪೋಸ್ಟರ್‌ ರಿಲೀಸ್ ಮಾಡಿದ ಚಿತ್ರತಂಡ

ಈ ಹಿಂದೆ ಹುಡುಗನಿಗೆ ಉತ್ತಮ ನೌಕರಿ, ಕೈತುಂಬಾ ಸಂಬಳ ಇದ್ದರೆ ಸಾಕಾಗುತ್ತಿತ್ತು. ಆದರೆ ಇಂದಿನ ಜಮಾನದ ಹುಡುಗಿಯರ ಡಿಮ್ಯಾಂಡ್ ಬಲು ದುಬಾರಿ ಎನಿಸುತ್ತದೆ. ಈಗಿನ ಕಾಲದಲ್ಲಿ ಹುಡುಗ ಒಳ್ಳೆಯವ ಅನ್ನುವುದಕ್ಕಿಂತ ಲಕ್ಷಗಟ್ಟಲೇ, ಇನ್ನು ಮಿತಿಮೀರಿ ಕೋಟಿಗಟ್ಟಲೆ ಸಂಬಳ ಬಯಸುವ ಹುಡುಗಿಯರಿದ್ದಾರೆ. ಇದರ ಜೊತೆಗೆ ಊರಲ್ಲಿ ತೋಟ, ಒಂದಷ್ಟು ಜಮೀನು, ಸ್ವಂತ ಮನೆ, ಇಬ್ಬರೇ ಇರುವುದಕ್ಕೆ ಇನ್ನೊಂದು ಮನೆ, ಅತ್ತೆ ಮಾವನ ಇರಬಾರದು, ಹೀಗೆ ಅವರ ಲೀಸ್ಟ್ ಬೆಳೆಯುತ್ತಲೇ ಹೋಗುತ್ತದೆ.

ಇದಕ್ಕೆ ಸಾಕ್ಷಿ ಎಂಬಂತೆ ಮುಂಬೈನ ಯುವತಿಯೊಬ್ಬಳು ನನಗೆ ವರ್ಷಕ್ಕೆ 4 ಲಕ್ಷ ರು. ಸಂಬಳ ಬರುತ್ತಿದ್ದು, ಮದುವೆಯಾಗುವ ಗಂಡಿಗೆ ಮಾತ್ರ 1 ಕೋಟಿ ರೂ. ಸಂಬಳ ಇರಲೇಬೇಕು ಎಂಬ ಡಿಮ್ಯಾಂಡ್ ಇಟ್ಟಿದ್ದಾಳೆ.

ಹೀಗೆ ಈಕೆಯ ಕಂಡಿಷನ್ ಪಟ್ಟಿ ಮುಂದುವರೆದು, ತಾನು ಮದುವೆಯಾಗುವ ಹುಡುಗ ಚಾರ್ಟೆಡ್ ಅಕೌಂಟೆಂಟ್ / ಡಾಕ್ಟರ್ ಆಗಿರಬೇಕು ನಿಂದು ಡಿಮ್ಯಾಂಡ್ ಇಟ್ಟಿದ್ದಾಳೆ. ಯುವತಿ ಎಲ್ಲ ನಿಬಂಧನೆಗಳಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅನೇಕ ಮಂದಿ ಕಾಮೆಂಟ್ ಬಾಕ್ಸ್ ನಲ್ಲಿ ನಮಗೆ ಈಗಿರುವ ಸಂಬಳಕ್ಕು, ಈಕೆಯ‌ ಡಿಮ್ಯಾಂಡಿಗೂ ತಾಳೆ ಹೊಂದುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ