Home Latest Health Updates Kannada Hair Growth Tips: ತಲೆಗೆ ಇದೊಂದು ಎಣ್ಣೆ ಹಚ್ಚಿದ್ರೆ ಸಾಕು – ಒಂದು ರೂಪಾಯಿ ಖರ್ಚಿಲ್ಲದೆ...

Hair Growth Tips: ತಲೆಗೆ ಇದೊಂದು ಎಣ್ಣೆ ಹಚ್ಚಿದ್ರೆ ಸಾಕು – ಒಂದು ರೂಪಾಯಿ ಖರ್ಚಿಲ್ಲದೆ ದಟ್ಟವಾದ, ದಪ್ಪದಾದ ಕೂದಲು ನಿಮ್ಮದಾಗುತ್ತೆ

Hair Growth Tips

Hindu neighbor gifts plot of land

Hindu neighbour gifts land to Muslim journalist

Hair Growth Tips: ಕೂದಲು ಉದುರುವುದು ಇತ್ತೀಚೆಗೆ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ ಅನೇಕರು ತಮ್ಮ ಕೂದಲನ್ನು ದಪ್ಪವಾಗಿಸಲು ಮಾರುಕಟ್ಟೆಯಲ್ಲಿ ದೊರೆಯುವ ಹಲವು ಬಗೆಯ ದುಬಾರಿ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಇದರ ಹೊರತು ಆಯುರ್ವೇದ ಚಿಕಿತ್ಸೆಯು ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಅವುಗಳು ನೈಸರ್ಗಿಕ ಪದಾರ್ಥಗಳನ್ನು ಒಳಗೊಂಡಿರುತ್ತವೆ.ಹೌದು, ಆಯುರ್ವೇದ ವೈದ್ಯರು ಸೂಚಿಸಿದಂತೆ ಮನೆಯಲ್ಲಿ ತಯಾರಿಸಿದ ಹರ್ಬಲ್ ಹೇರ್ ಆಯಿಲ್ ಬಳಸಿ (Hair Growth Tips) ಉದ್ದ ದಪ್ಪ ಕೂದಲು ಪಡೆಯಬಹುದು.

ಈರುಳ್ಳಿ ಎಣ್ಣೆ:
ಈರುಳ್ಳಿ ಎಣ್ಣೆ ಕೂದಲಿಗೆ ಔಷಧಿಯಂತೆ ಇದ್ದಂತೆ ಆಯುರ್ವೇದ ತಜ್ಞರು. ಇದು ಕೂದಲನ್ನು ಬಲಪಡಿಸಲು ಸಹ ಸಹಾಯ ಮಾಡುತ್ತದೆ.

ಈರುಳ್ಳಿ ಎಣ್ಣೆ ಮಾಡುವ ವಿಧಾನ:
ಮೊದಲು ನೀವು ಕರಿಬೇವಿನ ಎಲೆಗಳು ಮತ್ತು ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ನಂತರ ಅವುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಒಂದು ಕಪ್ ಎಣ್ಣೆಯನ್ನು ಒಂದು ಪಾತ್ರಗೆ ಹಾಕಿ, ಗ್ಯಾಸ್ ಸ್ಟೌವ್ ಮೇಲೆ ಇರಿಸಿ. ಅದರಲ್ಲಿ ರುಬ್ಬಿದ ಮಿಶ್ರಣವನ್ನು ಹಾಕಿ. 5 ರಿಂದ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಚೆನ್ನಾಗಿ ಕುದಿಸಿ. ನಂತರ, ಎಣ್ಣೆಯನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಬಾಟಲಿಯಲ್ಲಿ ಸಂಗ್ರಹಿಸಿ.

ಕರಿಬೇವಿನ ಎಲೆ – ಮೆಂತ್ಯ ಎಣ್ಣೆ: ಆಯುರ್ವೇದ ತಜ್ಞರು ಕರಿಬೇವಿನ ಎಲೆ ಮತ್ತು ಮೆಂತ್ಯ ಎಣ್ಣೆ ಕೂಡ ಕೂದಲನ್ನು ಬಲಪಡಿಸುವಲ್ಲಿ ಪರಿಣಾಮಕಾರಿ ಎಂದು ಹೇಳುತ್ತಾರೆ. ಇದರಲ್ಲಿರುವ ಆಯುರ್ವೇದ ಗುಣಗಳು ಕೂದಲನ್ನು ದಪ್ಪ ಮತ್ತು ಉದ್ದವಾಗಿಸಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆಯನ್ನು ಸಹ ಸುಲಭವಾಗಿ ಕಡಿಮೆ ಮಾಡುತ್ತದೆ.

ಕರಿಬೇವಿನ ಎಲೆ – ಮೆಂತ್ಯ ಎಣ್ಣೆಯನ್ನು ತಯಾರಿಸುವ ವಿಧಾನ:
ಈ ಎಣ್ಣೆಯನ್ನು ತಯಾರಿಸಲು, ಮೊದಲು ಮೆಂತ್ಯ ಬೀಜಗಳು ಮತ್ತು ಕರಿಬೇವಿನ ಎಲೆಗಳ ಮಿಶ್ರಣವನ್ನು ಮಾಡಿ. ನಂತರ, ಆಲಿವ್ ಎಣ್ಣೆಯನ್ನು ಬಾಣಲೆಯಲ್ಲಿ ಹಾಕಿ ಮತ್ತು ಒಲೆಯ ಮೇಲೆ ಇರಿಸಿ. ಎಣ್ಣೆ ಬಿಸಿಯಾದ ನಂತರ ಮೇಲಿನ ಮಿಶ್ರಣವನ್ನು ಆಲಿವ್ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ತಣ್ಣಗಾಗಿಸಿ ಜಾರ್‌ನಲ್ಲಿ ಫಿಲ್ಟರ್ ಮಾಡಿ ಶೇಖರಿಸಿಡಬೇಕು. ಈ ರೀತಿ ಎಣ್ಣೆಯನ್ನು ತಯಾರಿಸಿ ವಾರಕ್ಕೆ 2-3 ಬಾರಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.

ಇದನ್ನೂ ಓದಿ: ದೀಪಗಳಿಗೆ ಎರಡು ಬತ್ತಿ ಹಾಕಿ ಬೆಳಗಿಸೋದು ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಷ್ಯ!!