Home Latest Health Updates Kannada Graphology: ಹುಡುಗಿಯರ ಮನಸ್ಸನ್ನು ಡೀಟೇಲಾಗಿ ಓದಬೇಕಾ ?ಆಕೆಯ ಸಹಿ ಹೇಳುತ್ತೆ ವ್ಯಕ್ತಿತ್ವ !

Graphology: ಹುಡುಗಿಯರ ಮನಸ್ಸನ್ನು ಡೀಟೇಲಾಗಿ ಓದಬೇಕಾ ?ಆಕೆಯ ಸಹಿ ಹೇಳುತ್ತೆ ವ್ಯಕ್ತಿತ್ವ !

Graphology

Hindu neighbor gifts plot of land

Hindu neighbour gifts land to Muslim journalist

Graphology: ಪ್ರತಿಯೊಬ್ಬರ ಹೆಸರು ಅವರ ಗುರುತು. ಪ್ರತಿಯೊಬ್ಬ ವ್ಯಕ್ತಿಯ ಗುರುತಿನ ಜೊತೆಗೆ ಅವರ ಜೀವನದಲ್ಲಿ ಸಹಿ ಕೂಡ ಮಹತ್ವವಾದದ್ದು. ನೀವು ಸಹಿ ಮಾಡುವ ಶೈಲಿಯಿಂದ ಕೂಡ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸಬಹುದಂತೆ. ಹೌದು, ಒಬ್ಬರ ಮುಖವನ್ನು ನೋಡಿ ಅವರ ಮನಸ್ಸು ಎಂತಹುದೆಂದು ಸುಲಭವಾಗಿ ಅರಿತುಕೊಳ್ಳಬಹುದು. ಅದೇ ರೀತಿ ನೀವು ಮಾಡುವ ಸಹಿಯ ಶೈಲಿಯನ್ನು ( Graphology) ನೋಡಿ ನಿಮ್ಮ ವ್ಯಕ್ತಿತ್ವ ಎಂತಹುದೆಂದು ನಿರ್ಧರಿಸಬಹುದು.

ಸಹಿಯ ಮೂಲಕ, ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಸಹ ನೀವು ತಿಳಿದುಕೊಳ್ಳಬಹುದು. ಅವನ ಆರೋಗ್ಯದ ಬಗ್ಗೆ , ಮನೋವೃತ್ತಿ ಹೇಗಿರುತ್ತದೆಂದು, ಆತನ ಕೆಲಸಗಳು ಮತ್ತು ಸಂಪತ್ತಿನ ಬಗ್ಗೆ ನೀವು ತಿಳಿಯಬಹುದು. ಸಹಿಯ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಸಹಿಯ ಮೊದಲ ಅಕ್ಷರ ದೊಡ್ಡದಿದ್ದರೆ: ಒಬ್ಬ ವ್ಯಕ್ತಿಯ ಸಹಿಯ ಮೊದಲ ಅಕ್ಷರವು ತುಂಬಾ ದೊಡ್ಡದಾಗಿದ್ದರೆ, ಅಂತಹ ವ್ಯಕ್ತಿಯು ತುಂಬಾ ಸದ್ಗುಣಶಾಲಿ ಮತ್ತು ಶ್ರೀಮಂತ ಆರೋಗ್ಯವನ್ನು ಹೊಂದಿರುತ್ತಾನೆ. ಇವರು ನಾಯಕತ್ವದ ಲಕ್ಷಣಗಳನ್ನು ಹೊಂದಿರುತ್ತಾರೆ. ಇವರು ಜೀವನದಲ್ಲಿ ಹಠಾತ್ ಹಣದ ಲಾಭವನ್ನು, ಜನಪ್ರಿಯತೆಯನ್ನು ಪಡೆಯುತ್ತಾರೆ.

ಸಹಿ ಕೆಳಮುಖವಾಗಿದ್ದರೆ : ಯಾರ ಸಹಿ ಮೇಲಿನಿಂದ ಕೆಳಕ್ಕೆ ಬರುತ್ತದೆಯೋ, ಅಂತಹ ಜನರು ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುತ್ತಾರೆ. ಅಲ್ಲದೆ ಈ ವ್ಯಕ್ತಿಗಳಲ್ಲಿ ಸ್ವಾರ್ಥ ಹೆಚ್ಚಾಗಿರುತ್ತದೆ. ಅಂಥವರ ಆರೋಗ್ಯವೂ ಚೆನ್ನಾಗಿರುವುದಿಲ್ಲ. ಹಣದ ಸ್ಥಾನವೂ ಏರುಪೇರಾಗುತ್ತಿದೆ.

ಸಹಿ ಮೇಲ್ಮುಖವಾಗಿದ್ದರೆ: ಒಬ್ಬ ವ್ಯಕ್ತಿಯ ಸಹಿ ಕೆಳಗಿನಿಂದ ಮೇಲಕ್ಕೆ ಹೋದರೆ, ಅಂತಹ ಜನರು ಹೆಚ್ಚಾಗಿ ಧಾರ್ಮಿಕ ಸ್ವಭಾವವನ್ನು ಹೊಂದಿರುತ್ತಾರೆ. ಅಂತಹ ಜನರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ಈ ರೀತಿ ಸಹಿ ಮಾಡುವವರಿಗೆ ತೀಕ್ಷ್ಣ ಬುದ್ಧಿಯಿರುತ್ತದೆ. ಧನಾತ್ಮಕ ವ್ಯಕ್ತಿತ್ವ, ಯಾವುದೇ ವಿಷಯವನ್ನಾಗಲಿ ಬೇಗನೆ ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಹೊಂದಿರುತ್ತಾರೆ. ಅಭಿವೃದ್ಧಿ ಪಥದಕಡೆ ಅವರ ಹೆಜ್ಜೆ ಸಾಗುತ್ತದೆ.

ಸಹಿ ಮಾಡಿ ಕೆಳಗೆ ಗೆರೆ ಎಳೆಯುವವರು: ಒಬ್ಬ ವ್ಯಕ್ತಿಯು ಸಹಿಯ ಕೆಳಗೆ ಗೆರೆಗಳನ್ನು ಎಳೆಯುತ್ತಾರೆ ಎಂದಾದರೆ ಇಂತಹವರಿಗೆ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಆದರೂ ಸಹ ಇವರು ಕೆಲವು ವಿಷಯಗಳನ್ನು ಕುರುಡಾಗಿ ನಂಬುತ್ತಿರುತ್ತಾರೆ. ನನಗೆ ತಿಳಿದಿರುವುದೇ ಸರಿ ಎನ್ನುವ ವಿಧದವರು. ಮನುಷ್ಯರನ್ನು ಅಷ್ಟು ಬೇಗನೆ ನಂಬಲಾರರು. ನಂಬಿದರೆ ಮಾತ್ರ ಪ್ರಾಣ ಕೊಡಲೂ ತಯಾರಿರುತ್ತಾರೆ. ಇವರು ಉತ್ತಮ ಹಣವನ್ನು ಗಳಿಸುತ್ತಾರೆಯಾದರೂ ತುಂಬಾ ಜಿಪುಣರು.

ಸಹಿಯಲ್ಲಿ ಚುಕ್ಕೆಗಳಿದ್ದರೆ : ಒಬ್ಬ ವ್ಯಕ್ತಿಯು ತನ್ನ ಸಹಿಯನ್ನು ಬರೆದ ನಂತರ ಕೆಳಭಾಗದಲ್ಲಿ ಚುಕ್ಕೆ ಹಾಕಿದರೆ, ಅಂತಹ ಜನರು ಯಾವಾಗಲೂ ಉತ್ತಮ ಹಣ ಸ್ಥಾನಮಾನವನ್ನು ಗಳಿಸುತ್ತಾರೆ. ಅಲ್ಲದೆ ಇವರು ಕಾರ್ಯನಿರತನಾಗಿರುತ್ತೇನೆ ಎನ್ನುವ ಸ್ವಭಾವದವರಾಗಿರುತ್ತಾರೆ. ಇದರೊಂದಿಗೆ ವೈವಾಹಿಕ ಜೀವನವೂ ಇವರ ಪಾಲಿಗೆ ಸುಖಮಯವಾಗಿರುತ್ತದೆ. ಅಂತಹ ಜನರು ಉತ್ತಮ ಆರೋಗ್ಯವನ್ನು ಹೊಂದಿರುತ್ತಾರೆ.

ತಿರುಚಿದ ಪದಗಳ ಸಹಿ ಇದ್ದರೆ: ಚಿಕ್ಕದಾದ ಮತ್ತು ತಿರುಚಿದ ಪದಗಳಿಂದ ಸಹಿ ಮಾಡುವ ವ್ಯಕ್ತಿ ತುಂಬಾ ಬುದ್ಧಿವಂತ. ಅಂತಹವರಿಗೆ ಯಾವುದೇ ವಿಧಾನದಿಂದ ಹಣ ಗಳಿಸುವುದು ಗೊತ್ತು. ಹಣ ಸಂಪಾದನೆಯ ಅನ್ವೇಷಣೆಯಲ್ಲಿ, ಅಂತಹ ಜನರು ಅನೇಕ ಬಾರಿ ಅವಮಾನವನ್ನು ಎದುರಿಸಬೇಕಾಗಬಹುದು. ಅಂತಹವರಿಗೆ ಶಾಶ್ವತವಾಗಿ ಕಾಯಿಲೆ ಬರುವ ಸಾಧ್ಯತೆ ಹೆಚ್ಚು.

ಸಹಿಯು ಕೈ ಬರವಣಿಗೆಗಿಂತಾ ದೊಡ್ಡದಾಗಿದ್ದರೆ: ಕೆಲವರ ಸಹಿಯು ತಮ್ಮ ಕೈ ಬರವಣಿಗೆ ಗಿಂತಲೂ ದೊಡ್ಡದಾಗಿರುತ್ತದೆ. ಈ ರೀತಿಯ ಜನರಿಗೆ ಸಮಾಜದಲ್ಲಿ ಗೌರವ, ಮರ್ಯಾದೆಗಳು ಲಭಿಸುತ್ತದೆ. ಶೇಕಡಾವರು ವಿಶ್ವಾಸ ಅಧಿಕವಿರುತ್ತದೆ. ಪ್ರತಿಯೊಂದು ವಿಷಯಗಳಲ್ಲೂ ಮುಂದಿರುತ್ತಾರೆ. ಅಲ್ಲದೆ ಇವರು ಧೈರ್ಯಶಾಲಿಗಳಾಗಿರುತ್ತಾರೆ.

ಸಹಿಯಲ್ಲಿ ಅಂತರ ಹೆಚ್ಚಾಗಿದ್ದರೆ : ಇವರು ಯಾವುದೇ ಕಾರ್ಯವನ್ನು ಆರಂಭಿಸಿದಾಗ ಹಾಗೂ ಇವರ ಬಳಿ ಒಳ್ಳೆಯ ಐಡಿಯಾ ಗಳಿರುತ್ತವೆ. ಆದರೆ ಕಾರ್ಯರೂಪಕ್ಕೆ ತರುವಲ್ಲಿ ಮಾತ್ರ ವಿಫಲರಾಗುತ್ತಾರೆ.

ಸಹಿಯ ಮೊದಲ ಅಕ್ಷರಕ್ಕೆ ಸುತ್ತಿಹಾಕಿದ್ದರೆ ಈ ರೀತಿ ಸಹಿ ಹಾಕುವ ಜನರ ಪಾಲಿಗೆ ಎಂದಿಗೂ ಜಯ ಪ್ರಾಪ್ತಿಯಾಗುತ್ತದೆ. ಸಹಿಯ ಕೊನೆ ಅಕ್ಷರದಿಂದ ಗೆರೆಯನ್ನು ಹಿಂದೆ ಎಳೆದಿದ್ದರೆ ಇವರು ಗತಕಾಲವನ್ನು ಕುರಿತು ಹೆಚ್ಚಾಗಿ ಆಲೋಚಿಸುತ್ತಿರುತ್ತಾರೆ. ಆದರೆ ವರ್ತಮಾನದ ಬಗ್ಗೆ ಗಮನ ಹರಿಸುವುದಿಲ್ಲ. ಎಂಬುವುದನ್ನು ಸೂಚಿಸುತ್ತದೆ.

 

ಇದನ್ನು ಓದಿ: Rahul Gandhi: ‘ ಅನ್ನ ‘ ಹಳಸಿದೆ, ಈಗ 4,000 ಪಿಂಚಣಿ ಕೊಡ್ತೇವೆ ಎಂದು ಬೂಸಿ ಹೊಡೀತೀರಾ? ಹೀಗೆ ರಾಹುಲ್ ಗಾಂಧಿಗೆ ಪ್ರಶ್ನೆ ಮಾಡಿದ್ಯಾರು ?