Home Latest Health Updates Kannada Intimate Health: ಸಂಭೋಗದಲ್ಲಿ ಮಹಿಳೆಯರು ತೃಪ್ತಿ ಹೊಂದಲು ತಡವಾಗೋದ್ಯಾಕೆ ?!

Intimate Health: ಸಂಭೋಗದಲ್ಲಿ ಮಹಿಳೆಯರು ತೃಪ್ತಿ ಹೊಂದಲು ತಡವಾಗೋದ್ಯಾಕೆ ?!

Hindu neighbor gifts plot of land

Hindu neighbour gifts land to Muslim journalist

Intimate Health: ಲೈಂಗಿಕ ಕ್ರಿಯೆ ಎಂಬುದು ಸಕಲ ಜೀವಿಗಳ ನೈಸರ್ಗಿಕ ಕ್ರಿಯೆ. ಆದರೆ ಮನುಷ್ಯರಲ್ಲಿ ಇದಕ್ಕೆ ಕೆಲವು ನಿಯಮಗಳಿವೆ. ಅದೆ ದಂಪತಿಗಳಾದವರು ಮಾತ್ರ ಕೂಡಬೇಕು ಎಂಬುದು. ದಾಂಪತ್ಯ ಜೀವನಕ್ಕೆ ಮಿಲನ ಕ್ರಿಯೆ ಮುಖ್ಯ. ಲೈಂಗಿಕ ಕ್ರಿಯೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಇದರಲ್ಲಿ ನೆಮ್ಮದಿ ಸಿಗೋವರೆಗೂ ಗಂಡು-ಹೆಣ್ಣು ಭೋಗಿಸುತ್ತಾರೆ. ಆದರೆ ಈ ಕ್ರಿಯೆಯಲ್ಲಿ(Intimate Health) ಕೆಲವೊಮ್ಮೆ ಮಹಿಳೆಯರು ತೃಪ್ತಿ ಹೊಂದುವುದು ತಡವಾಗುತ್ತದೆ. ಇದು ಯಾಕೆ?

ಯೋನಿಸಂ : ಮಹಿಳೆಯರ ಯೋನಿಯ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ತುಂಬಾ ನೋವು ಉಂಟಾಗುತ್ತದೆ. ಇಂಥ ಸಮಯದಲ್ಲಿ ಮಹಿಳೆಯರಿಗೆ ಲೈಂಗಿಕ ಸುಖ ಸಿಗೋದಿಲ್ಲ. ನೋವು ಕಾಡುತ್ತದೆ. ಪರಾಕಾಷ್ಠೆ ತಲುಪಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಸಂಕೋಚ ಬಿಟ್ಟು ಮಹಿಳೆಯರು ವೈದ್ಯರನ್ನು ಭೇಟಿಯಾಗಬೇಕು.

ಪರಾಕಾಷ್ಠೆ ಸ್ಥಳದ ಬಗ್ಗೆ ಅಜ್ಞಾನ : ಪ್ರತಿಯೊಬ್ಬ ಮಹಿಳೆಯ ದೇಹ ಭಿನ್ನವಾಗಿರುತ್ತದೆ. ಅದ್ರ ಸ್ಪಂದನೆ ಕೂಡ ಭಿನ್ನವಾಗಿರುತ್ತದೆ. ಮಹಿಳೆಯರು ತಮ್ಮ ದೇಹವನ್ನು ಸಂಪೂರ್ಣವಾಗಿ ಅರಿಯಬೇಕು. ಯಾವ ಸ್ಥಳದಲ್ಲಿ ಸ್ಪರ್ಶಿಸಿದ್ರೆ ಉತ್ತೇಜನ ಹೆಚ್ಚಾಗುತ್ತದೆ, ಪರಾಕಾಷ್ಠೆ ತಲುಪಬಹುದು ಎಂಬುದನ್ನು ತಿಳಿಯಬೇಕು.

ಇದನ್ನೂ ಓದಿ: Actress Alia Bhatt: ಆಲಿಯಾ ಭಟ್ ನಟಿಯಾಗಿರುವುದರ ಹೊರತಾಗಿ ಬ್ರಿಲಿಯಂಟ್ ಬ್ಯುಸಿನೆಸ್ ವುಮೆನ್ : ಆದಾಯದ ಮೂಲ ಗೊತ್ತಾದ್ರೆ ಶಾಕ್ ಆಗ್ತೀರ

ಯೋನಿ (Vagina) ಶುಷ್ಕತೆ : ಅನೇಕ ಮಹಿಳೆಯರ ಯೋನಿ ಶುಷ್ಕವಾಗಿರುತ್ತದೆ. ಅದು ಒಣಗಿದಾಗ ಮತ್ತು ತಾನಾಗಿಯೇ ನಯಗೊಳಿಸಲು ಸಾಧ್ಯವಾಗದೆ ಹೋದಾಗ ಸೆಕ್ಸ್ (Sex) ವೇಳೆ ನೋವು ಮತ್ತು ಕಿರಿಕಿರಿಯಾಗುತ್ತದೆ. ಯೋನಿ ಶುಷ್ಕವಾಗಿದ್ದಾಗ ಪರಾಕಾಷ್ಠೆ ತಲುಪಲು ಕಷ್ಟವಾಗುತ್ತದೆ. ಈ ಸತ್ಯ ಅರಿತು ಮಹಿಳೆಯರು ಯೋನಿ ಶುಷ್ಕತೆಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯಬೇಕು. ನೀರು ಆಧಾರಿತ ಲೂಬ್ರಿಕಂಟ್ ಬಳಸಬೇಕು. ಆದ್ರೆ ಯೋನಿ ಶುಷ್ಕತೆಯನ್ನು ತಪ್ಪಿಸಲು ಪರಿಮಳಯುಕ್ತ ಉತ್ಪನ್ನಗಳನ್ನು ಬಳಸಬೇಡಿ.

ಇದನ್ನೂ ಓದಿ: Parliament Election: ಕೇಂದ್ರೀಯ ಏಜೆನ್ಸಿಗಳಿಗೆ ತನಿಖೆಯಲ್ಲಿ ಮುಕ್ತ ಸ್ವಾತಂತ್ರ್ಯವಿದೆ : ಮೋದಿ

ಒತ್ತಡ ಮತ್ತು ಖಿನ್ನತೆ : ಒತ್ತಡ ಮತ್ತು ಖಿನ್ನತೆ ಮಾನಸಿಕ ಹಾಗೂ ದೈಹಿಕ ರೋಗಕ್ಕೆ ಕಾರಣವಾಗುತ್ತದೆ. ಒತ್ತಡದಿಂದ ನಾನಾ ಸಮಸ್ಯೆ ಕಾಡುತ್ತದೆ. ಅದ್ರಲ್ಲಿ ಸೆಕ್ಸ್ ಸಂತೃಪ್ತಿ ಕೂಡ ಸೇರಿದೆ. ಮಹಿಳೆ ಹೆಚ್ಚಿನ ಉದ್ವೇಗದಲ್ಲಿದ್ದರೆ ಆಕೆ ಪರಾಕಾಷ್ಠೆ ತಲುಪಲು ಕಷ್ಟವಾಗುತ್ತದೆ. ಆತಂಕ, ಒತ್ತಡ ದೀರ್ಘಕಾಲದವರೆಗೆ ಮುಂದುವರಿದರೆ ಅವು ಆರೋಗ್ಯಕ್ಕೆ ಮಾರಕ. ಪರಾಕಾಷ್ಠೆ ಮೆದುಳಿಗೆ ಸಂಬಂಧಿಸಿದ್ದು, ಮಾನಸಿಕ ಶಾಂತಿ ಇಲ್ಲಿ ಮುಖ್ಯ.