Home Interesting ವರ ಸಮಯಕ್ಕೆ ಸರಿಯಾಗಿ ಬರಲಿಲ್ಲವೆಂದು ಬೇರೊಬ್ಬನ ಜೊತೆ ಸಪ್ತಪದಿ ತುಳಿದ ವಧು!

ವರ ಸಮಯಕ್ಕೆ ಸರಿಯಾಗಿ ಬರಲಿಲ್ಲವೆಂದು ಬೇರೊಬ್ಬನ ಜೊತೆ ಸಪ್ತಪದಿ ತುಳಿದ ವಧು!

Hindu neighbor gifts plot of land

Hindu neighbour gifts land to Muslim journalist

ವಧುವಿಗೆ ವರ ಇಷ್ಟವಿಲ್ಲ ಎಂಬೆಲ್ಲ ಕಾರಣಕ್ಕೆ ಮದುವೆ ಮುರಿಯುವುದನ್ನು ಈ ಹಿಂದೆ ವೈರಲ್ ಆದ ವಿಡಿಯೋದಲ್ಲಿ ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ಸರಿಯಾದ ಸಮಯಕ್ಕೆ ವರ ಬರಲಿಲ್ಲ ಅಂತಾ ವಧು ಬೇರೊಬ್ಬನ ಜತೆ ವಿವಾಹವಾಗಿರುವ ವಿಸ್ಮಯ ಘಟನೆ ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯಲ್ಲಿ ನಡೆದಿದೆ.

ಮದುವೆ ಸಮಾರಂಭವು ಏಪ್ರಿಲ್​ 22ರಂದು ಬುಲ್ಧಾನಾ ಜಿಲ್ಲೆಯ ಮಲ್ಕಾಪುರ್​ ಪಂಗ್ರಾ ಗ್ರಾಮದಲ್ಲಿ ನಿಗದಿಯಾಗಿತ್ತು.ಮದುವೆಗಾಗಿ ಎಲ್ಲ ರೀತಿಯ ತಯಾರಿಯನ್ನು ಮಾಡಿಕೊಳ್ಳಲಾಗಿದ್ದು,ಸಂಜೆ 4 ಗಂಟೆಗೆ ಮದುವೆ ನಡೆಯಬೇಕಿತ್ತು. ಆದರೆ, ಸಮಯವಾದರೂ ವರ ಮಾತ್ರ ಬರಲೇ ಇಲ್ಲ.

ವಧು ಮತ್ತು ಆಕೆಯ ಕುಟುಂಬ ಸಾಕಷ್ಟು ಕಾದರೂ ಮದುಮಗನ ಸುಳಿವೇ ಸಿಗಲಿಲ್ಲ. ಸಮಯ 8 ಗಂಟೆ ಆಯಿತು. ನೋಡೋವರೆಗೂ ನೋಡಿ ಕೊನೆಗೆ ವಧುವಿನ ತಂದೆ ತಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಮಗಳನ್ನು ಕೊಟ್ಟು ಅದೇ ಮಂಟಪದಲ್ಲಿ ಮದುವೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಧುವಿನ ತಾಯಿ, ನಾವು 8 ಗಂಟೆಯವರೆಗೂ ಕಾದೆವು. ಆ ಬಳಿಕ ಮದುವೆ ಮಂಟಪಕ್ಕೆ ಆಗಮಿಸಿದ ವರ ಪಾನಮತ್ತನಾಗಿದ್ದ. ತನ್ನ ಸ್ನೇಹಿತರ ಜತೆ ಸೇರಿಕೊಂಡು ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿ ಮದ್ಯದ ಅಮಲಿನಲ್ಲೇ ಮಂಟಪಕ್ಕೆ ಬಂದಿದ್ದ. 4 ಗಂಟೆಯ ಬದಲು 8 ಗಂಟೆಗೆ ಬಂದಿದ್ದಲ್ಲದೆ, ನಮ್ಮೊಂದಿಗೆ ಜಗಳ ಆಡಲು ಆರಂಭಿಸಿದ. ಯಾಕೋ ಇದು ಸರಿಯಲ್ಲ ಅಂದುಕೊಂಡು ನಮ್ಮ ಸಂಬಂಧಿಕರಲ್ಲಿ ಒಬ್ಬರಿಗೆ ಮಗಳನ್ನು ಕೊಟ್ಟು ಅದೇ ಮಂಟಪದಲ್ಲಿ ಮದುವೆ ಮಾಡಿಕೊಟ್ಟೆವು ಎಂದು ಹೇಳಿದ್ದಾರೆ.