Home Latest Health Updates Kannada Red Rose Tips: ಗುಲಾಬಿ ಹೂವನ್ನು ಈ ರೀತಿ ಬಳಸಿ, ಸಾಲದ ಸಮಸ್ಯೆ ಬಗೆಹರಿಸಿ !

Red Rose Tips: ಗುಲಾಬಿ ಹೂವನ್ನು ಈ ರೀತಿ ಬಳಸಿ, ಸಾಲದ ಸಮಸ್ಯೆ ಬಗೆಹರಿಸಿ !

Hindu neighbor gifts plot of land

Hindu neighbour gifts land to Muslim journalist

ವಾಸ್ತು ಶಾಸ್ತ್ರದಲ್ಲಿ ಮರ ಮತ್ತು ಗಿಡಗಳ ವಿಶೇಷ ಮಹತ್ವವನ್ನು ಸಹ ತಿಳಿಸಲಾಗಿದೆ . ನಿರ್ದಿಷ್ಟ ಕಾರ್ಯವನ್ನು ಸಾಧಿಸಲು ಕೆಲವು ವಿಶೇಷ ಸಸ್ಯಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಅದರ ಪವಾಡಗಳು ವ್ಯಕ್ತಿಯ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತವೆ. ವಾಸ್ತುವಿನಲ್ಲಿ ಗುಲಾಬಿ ಗಿಡ ಅಂತಹ ಒಂದು ಸಸ್ಯವಾಗಿದೆ. ಮನೆಯಲ್ಲಿ ಗುಲಾಬಿ ಗಿಡ ನೆಟ್ಟು ನಂತರ ಆ ಗುಲಾಬಿ ಹೂವಿನ ದಳ ಮತ್ತು ಎಲೆಯಿಂದ ವಾಸ್ತು ಪ್ರಕಾರ ಕೆಲ ಸಲಹೆ ಪಾಲಿಸಿದರೆ ನಿಮ್ಮ ಸಾಲದ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ಹಣದ ಋಣ ಇದ್ದರೆ ನಮಗೆ ಯಾವತ್ತೂ ನೆಮ್ಮದಿ ಅನ್ನೋದು ಇರೋದಿಲ್ಲ. ಇನ್ನು ಆರ್ಥಿಕ ವಿಷಯ ಬಂದಾಗ ಒಡಹುಟ್ಟಿದವರು ಸಹ ಬಿಟ್ಟು ಕೊಡುವುದಿಲ್ಲ ಅಂತಹ ಸಮಾಜ ಮಾರ್ಪಟ್ಟಿದೆ. ಹಾಗಾಗಿ ಕೆಲವೊಮ್ಮೆ ಸಾಲ ಮಾಡಬೇಕಾಗುತ್ತದೆ. ಆದರೆ ಮಾಡಿದ ಸಾಲ ತೀರಿಸಲು
ಆಗದೇ ಚಿಂತೆಯಲ್ಲಿದ್ದರೆ ಅದಕ್ಕೆ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ. ಆ ಪರಿಹಾರವೇನು ಎಂಬುದು ಇಲ್ಲಿದೆ.

  • ಸುಮಾರು 5 ಹುಣ್ಣಿಮೆಗಳ ಕಾಲ 3 ಕೆಂಪು ಗುಲಾಬಿಗಳನ್ನು ನದಿಗೆ ಹಾಕಿ, ನಿಮ್ಮ ಕಷ್ಟಗಳು ನಿವಾರಣೆ ಮಾಡುವಂತೆ ಬೇಡಿಕೊಳ್ಳಿ. ಇದರಿಂದ ನಿಮ್ಮ ಕೆಲಸಗಳು ಸಹ ಬೇಗ ಪೂರ್ಣವಾಗುತ್ತದೆ ಹಾಗೂ ಆದಾಯ ಕೂಡ ಹೆಚ್ಚಾಗುತ್ತದೆ.
  • ಒಂದು ಬಿಳಿ ಬಟ್ಟೆ ತೆಗೆದುಕೊಂಡು ಅದಕ್ಕೆ ಗುಲಾಬಿ ಹೂವುಗಳನ್ನು ಕಟ್ಟಿ ಗೊಂಚಲು ತಯಾರಿಸಿ. ಇದನ್ನು ಹರಿಯುವ ನೀರಿನಲ್ಲಿ ಬಿಡಿ. ಈ ರೀತಿ ಪ್ರತಿ ಶುಕ್ರವಾರ ಮಾಡುವುದರಿಂದ ನಿಮ್ಮ ಜೀವನದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನಲಾಗುತ್ತದೆ.
  • 11 ಮಂಗಳವಾರ ನೀವು ಹನುಮಂತನಿಗೆ ಈ ಕೆಂಪು ಗುಲಾಬಿ ಹೂವು ಅರ್ಪಿಸಿದರೆ ನಿಮ್ಮ ಜೀವನದಲ್ಲಿ ನೆಮ್ಮದಿ ಹಾಗೂ ಸಂಪತ್ತು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಇದೆ.
  • ಮಂಗಳವಾರ, ನೀವು ಕೆಂಪು ಗುಲಾಬಿಗಳನ್ನು ತೆಗೆದುಕೊಂಡು, ಒಂದು ಕೆಂಪು ಬಟ್ಟೆಯಲ್ಲಿ ಸುತ್ತಿ. ಅದರ ಜೊತೆ ಶ್ರೀಗಂಧವನ್ನು ಸಹ ಹಾಕಿ. ಈ ಗಂಟನ್ನು ದೇವರ ಮನೆಯಲ್ಲಿ ಇಟ್ಟು, ಗಣೇಶನ ಪೂಜೆ ಮಾಡುವುದರಿಂದ ನಿಮ್ಮ ಸಾಲದ ಸಮಸ್ಯೆಗೆ ಪರಿಹಾರ ಸಿಗುವುದು ಮಾತ್ರವಲ್ಲ ಕುಟುಂಬದಲ್ಲಿ ಪ್ರಗತಿ ಹೆಚ್ಚಾಗುತ್ತದೆ.
  • ಕೆಂಪು ಗುಲಾಬಿ ಹೂವಿನ ಎಲೆಗಳ ಜೊತೆ ಕರ್ಪೂರ ಹಾಕಿ, ಸಂಜೆ ಆರತಿ ಮಾಡಬೇಕು. ಅಲ್ಲದೇ ಗುಲಾಬಿ ಹೂವಿನ ಎಲೆಯನ್ನು ದೇವರಿಗೆ ಅರ್ಪಿಸಿದರೆ ನಿಮ್ಮ ವರ್ಷಗಳ ಸಾಲದ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

ಹೌದು ವಾಸ್ತು ಪ್ರಕಾರ ಗುಲಾಬಿ ಎಸಳಿನಿಂದ ಈ ಮೇಲಿನ ರೀತಿಯ ಕ್ರಮವನ್ನು ಅನುಸರಿದಾಗ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಜೊತೆಗೆ ಮನಸಿಗೆ ನೆಮ್ಮದಿ ಸಿಗಲಿದೆ.