Home Latest Health Updates Kannada Raj Kundra: ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿಚ್ಛೇದನ ?! ‘ನಾವು ಬೇರೆಯಾಗಿದ್ದೇವೆ’...

Raj Kundra: ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿಚ್ಛೇದನ ?! ‘ನಾವು ಬೇರೆಯಾಗಿದ್ದೇವೆ’ ಪೋಸ್ಟ್ ವೈರಲ್ !!

Raj Kundra

Hindu neighbor gifts plot of land

Hindu neighbour gifts land to Muslim journalist

Raj Kundra: ಬಾಲಿವುಡ್ ದುನಿಯಾದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ಶಿಲ್ಪಾ ಶೆಟ್ಟಿ (Shilpa Shetty) ಆಕೆಯ .ಪತಿ ರಾಜ್ ಕುಂದ್ರಾ(Raj Kundra)ವೈವಾಹಿಕ ಜೀವನದ ಕುರಿತ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರು ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ರಾಜ್ ಕುಂದ್ರಾ ಟ್ವಿಟರ್ ನಲ್ಲಿ ಮಾಡಿದ ಪೋಸ್ಟ್ವೊಂದು ಭಾರೀ ಸಂಚಲನ ಮೂಡಿಸಿದೆ.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ (Raj Kundra) ಅವರು ತಮ್ಮ ‘UT 69’ (UT 69 Movie) ಸಿನಿಮಾ ಟ್ರೈಲರ್‌ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ. ನವೆಂಬರ್ 2009 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಿಲ್ಪಾ ಶೆಟ್ಟಿ(Shilpa Shetty)ಮತ್ತು ರಾಜ್ ಕುಂದ್ರಾ (Raj Kundra)ಜೋಡಿ ಮದುವೆಯಾಗಿ 14 ವರ್ಷಗಳನ್ನು ಪೂರೈಸಲಿದ್ದು, ಈ ನಡುವೆ ರಾಜ್ ತಮ್ಮ ವಿಚ್ಛೇದನದ(Divorce)ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಘೋಷಣೆ ಮಾಡಿದ್ದಾರೆ. ರಾಜ್ ಕುಂದ್ರಾ ಏಕಾಏಕಿ ಟ್ವೀಟರ್‌ನಲ್ಲಿ ʻʻನಾವು ಬೇರ್ಪಟ್ಟಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮಗೆ ಸಮಯವನ್ನು ನೀಡಿʼʼಎಂದು ಟ್ವೀಟ್‌ ಮಾಡಿದ್ದಾರೆ.

ರಾಜ್ ಕುಂದ್ರಾ ತಮ್ಮ ಟ್ವೀಟ್ ಮಾಡಿದ ಸ್ಕ್ರೀನ್ಶಾಟ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೂಡ ಹಂಚಿಕೊಂಡಿದ್ದಾರೆ.ಇದೀಗ ಈ ಸುದ್ದಿ ಸಖತ್‌ ವೈರಲ್‌ ಆಗುತ್ತಿದ್ದು, ಶಿಲ್ಪಾ ಶೆಟ್ಟಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಪ್ರಶ್ನೆ ಸಹಜವಾಗಿ ಅಭಿಮಾನಿಗಳನ್ನು ಕಾಡುತ್ತಿದೆ. ರಾಜ್ ಕುಂದ್ರಾ ಟ್ವಿಟರ್‌ನಲ್ಲಿ ಹಾಗೂ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡ ಅವರ ಅಪ್‌ಡೇಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು “ಪ್ರತ್ಯೇಕ ಎಂದರೆ? ವಿಚ್ಛೇದನ?” “ಇದು ನಿಜಕ್ಕೂ ಆಘಾತಕಾರಿ ಸುದ್ದಿ” ಎಂದು ಕಮೆಂಟ್‌ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾ ಮೂಲಕ ಕೆಲವರು ಇದು ಪ್ರಚಾರದ ಗಿಮಿಕ್ ಎಂದು ಕಮೆಂಟ್‌ ಮಾಡಿದ್ದಾರೆ.

 

ಇದನ್ನು ಓದಿ: Aadhaar Card: ಆಧಾರ್ ಕಾರ್ಡ್ ಇರೋರಿಗೆ ಸರ್ಕಾರದಿಂದ ಬಂತೊಂದು ಹೊಸ ಸೂಚನೆ !!