Home Latest Health Updates Kannada Home Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಕಸದ ಬುಟ್ಟಿಗಳನ್ನು ಎಲ್ಲಿಡಬೇಕು? ಕಸವನ್ನು ಎಲ್ಲಿ ಎಸೆಯಬೇಕು...

Home Vastu Tips: ವಾಸ್ತು ಪ್ರಕಾರ ಮನೆಯಲ್ಲಿ ಕಸದ ಬುಟ್ಟಿಗಳನ್ನು ಎಲ್ಲಿಡಬೇಕು? ಕಸವನ್ನು ಎಲ್ಲಿ ಎಸೆಯಬೇಕು ?

Home Vastu Tips

Hindu neighbor gifts plot of land

Hindu neighbour gifts land to Muslim journalist

Home Vastu Tips: ಮನೆಯಲ್ಲಿ ಕಸ ಅಥವಾ ಹಳೆಯ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕುವ ಅಭ್ಯಾಸ ನಿಮಗಿದ್ದರೆ ಈ ಮಾಹಿತಿ ಖಂಡಿತಾ ತಿಳಿಯಿರಿ. ಹೌದು, ವಾಸ್ತು ಪ್ರಕಾರ(Home Vastu Tips), ಮನೆಯಲ್ಲಿರುವ ಹೆಚ್ಚಿನ ಕಸ ಅಥವಾ ತ್ಯಾಜ್ಯ ವಸ್ತುಗಳನ್ನು ಅನಿಷ್ಟ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಮನೆಯಲ್ಲಿ ಕಸವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ ಎಂದು ಪರಿಗಣಿಸಲಾಗಿದೆ.

ವಾಸ್ತು ನಿಯಮಗಳ (Vastu Tips) ಪಾಲನೆ ಮೂಲಕ ಜೀವನದಲ್ಲಿ ಕಷ್ಟಗಳು ದೂರವಾಗಿ ಸುಖ ಸಂತೋಷವನ್ನು ಪಡೆಯಲು ಈ ಮಾಹಿತಿ ತಿಳಿಯಿರಿ. ನೀವು ತಪ್ಪು ದಿಕ್ಕಿನಲ್ಲಿ ಕಸವನ್ನು ಇಡುವುದರಿಂದ ಮನೆಯಲ್ಲಿ ಆರ್ಥಿಕ ತೊಂದರೆ ಉಂಟಾಗುತ್ತದೆ. ಪ್ರಗತಿಗೂ ಧಕ್ಕೆಯಾಗುತ್ತದೆ. ಹಾಗಾಗಿ ಕಣ್ಣಿಗೆ ಕಾಣುವಂತೆ ನೇರ ದೃಷ್ಟಿಯಲ್ಲಿ ಕಸವನ್ನು ಎಂದಿಗೂ ಇಡಬೇಡಿ. ವಿಶೇಷವಾಗಿ ಪೂಜಾ ಸ್ಥಳವು ಕಸ ವಿಲೇವಾರಿ ಪ್ರದೇಶದ ಹತ್ತಿರ ಇರಬಾರದು ಎಂಬುದನ್ನು ನೆನಪಿಡಿ.

ವಾಸ್ತು ಪ್ರಕಾರ ತಪ್ಪಾಗಿಯೂ ಕಸವನ್ನು ವಾಯವ್ಯ, ಪಶ್ಚಿಮ, ಉತ್ತರ, ಪೂರ್ವ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕತೆ ಬರುವುದಲ್ಲದೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ.

ಅನೇಕ ಜನರು ತಮ್ಮ ಮನೆಯ ಮೇಲ್ಛಾವಣಿಯನ್ನು ಖಾಲಿ ಜಾಗವೆಂದು ಮನೆಯ ಕಸವನ್ನು, ಅಥವಾ ವೇಸ್ಟ್​ ಸಾಮಾನುಗಳನ್ನು ಅಲ್ಲಿ ಇಡುತ್ತಾರೆ. ವಾಸ್ತು ಪ್ರಕಾರ ಮನೆಯ ಮೇಲ್ಛಾವಣಿ, ಬಾಲ್ಕನಿ ಹಾಗೂ ಕೋಣೆಯ ಮೇಲೆ ಕಸ ಎಸೆಯಬಾರದು.

ವಾಸ್ತು ಪ್ರಕಾರ ಮನೆಯ ಬಾಲ್ಕನಿಯಲ್ಲಿ ಕಸ ಎಸೆಯಬಾರದು. ಹಾಗೆಯೇ ನೀರಿನಲ್ಲಿ ಕಸವನ್ನು ಇಡಬೇಡಿ. ಹಾಗೆ ಮಾಡಿದರೆ ಹಣಕಾಸಿನ ಸಮಸ್ಯೆಗಳಿಂದ ಯಾವಾಗಲೂ ತೊಂದರೆ ಅನುಭವಿಸುತ್ತೀರಿ.

ವಾಸ್ತು ಪ್ರಕಾರ ಹಳೆ ಪೊರಕೆಯನ್ನು ಮನೆಯಲ್ಲಿ ಇಡಬಾರದು. ಅಲ್ಲದೇ ಹಳೆಯ ದೇವರ ಚಿತ್ರಗಳನ್ನು ಕಸದ ಕೋಣೆಯಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಅಶುಭ ಫಲಗಳು ಉಂಟಾಗುತ್ತವೆ.

ಇದನ್ನೂ ಓದಿ: ಅಡಿಕೆ ಬೆಳೆಗಾರರಿಗೆ ಸಂಕಟ ತಂದ ಅಕಾಲಿಕ ಮಳೆ – ಮತ್ತೆ ಶುರುವಾಯ್ತು ಈ ಮಹಾಮಾರಿ !!