Home latest ಅಕ್ಕ ಫುಲ್ ಟೈಟ್ | ನಡು ಬೀದಿಯಲ್ಲೇ ಕುಡಿದು ಟೈಟಾಗಿ ಮಲಗಿದ ಯುವತಿ ರಂಪಾಟ!!!

ಅಕ್ಕ ಫುಲ್ ಟೈಟ್ | ನಡು ಬೀದಿಯಲ್ಲೇ ಕುಡಿದು ಟೈಟಾಗಿ ಮಲಗಿದ ಯುವತಿ ರಂಪಾಟ!!!

Hindu neighbor gifts plot of land

Hindu neighbour gifts land to Muslim journalist

ಕುಡಿದರೆ ಏನೆಲ್ಲಾ ಆವಾಂತರಗಳಾಗುತ್ತದೆ ಎನ್ನುವುದಕ್ಕೆ ಈ ಒಂದು ವೀಡಿಯೋ ನಿದರ್ಶನ. ನಶೆಯಲ್ಲಿ ಮುಳುಗಿದ ಯುವತಿಯೋರ್ವಳು ಸಾರ್ವಜನಿಕರ ಜೊತೆ ಅಷ್ಟು ಮಾತ್ರವಲ್ಲದೇ ಪೊಲೀಸರ ಜೊತೆನೇ ಅಸಹ್ಯವಾಗಿ ಮಾತನಾಡುತ್ತಾ, ಅಸಭ್ಯ ವರ್ತನೆ ಮಾಡಿದ್ದಾಳೆ.

ತಡ ರಾತ್ರಿ ಪಾರ್ಟಿ, ಒಳಗೆ ಸೇರಿತ್ತು ಗುಂಡು, ಯವತಿ ಟೈಟ್ ಫುಲ್. ಇಷ್ಟು ಸಾಕು ನೋಡಿ. ಎಣ್ಣೆ ಏಟಿನಿಂದ ಯುವತಿ ಪೊಲೀಸ್ ಕಾಲರ್ ಹಿಡಿದು ಯದ್ವಾ ತದ್ವಾ ಬೈಗುಳ, ಕ್ಯಾಬ್ ಡ್ರೈವರನ್ನೇ ಹೊರಕ್ಕೆ ಹಾಕಿ ಡ್ರೈವಿಂಗ್ ಮಾಡುವ ಸಾಹಸ, ನಡು ರಸ್ತೆಯಲ್ಲಿ ಸಿಕ್ಕ ಸಿಕ್ಕವರಿಗೆ ಡಿಕ್ಷನರಿಯಲ್ಲಿ ಇಲ್ಲದ ಪದಗಳ ಸ್ವಾಗತ.

ಮುಂಬೈನಲ್ಲಿ ಈ ಘಟನೆ ನಡೆದಿದೆ. ತಡ ರಾತ್ರಿ ಪಾರ್ಟಿ ಮುಗಿಸಿ ಅಂದರೆ ಕಂಠ ಪೂರ್ತಿ ಕುಡಿದ ಯುವತಿಯರು ಕ್ಯಾಬ್ ಮೂಲಕ ಮರಳುತ್ತಿದ್ದಾಗ ಮೂವರು ಯುವತಿಯರಲ್ಲಿ ಒಬ್ಬಳಿಗೆ ನಶೆ ಏರಿದೆ. ಕ್ಯಾಬ್ ಡ್ರೈವರ್ ಹಾಗೂ ಆತ ಇಡೀ ಕುಟುಂಬಕ್ಕೆ ಬೈಗುಳದ ಸುರಿಮಳೆಗೈದಿದ್ದಾಳೆ. ನಂತರ ಡ್ರೈವರ್ ಕಾಲರ್ ಹಿಡಿದು ಎಳೆದು ಹೊರಕ್ಕೆ ಹಾಕಿದ್ದಾಳೆ. ಬಳಿಕ ಕ್ಯಾಬ್ ಡ್ರೈವರ್ ಸೀಟ್ ಏರಿ ತಾನೇ ಕಾರು ಚಲಾಯಿಸುವುದಾಗಿ ರಂಪಾಟ ಮಾಡಿದ್ದಾಳೆ.

ಮುಂಬೈ ನಡು ಬೀದಿಯಲ್ಲಿ ಯುವತಿ ರಂಪಾಟ ನೋಡಿ ಜನ ಸೇರಿದರು. ಅಷ್ಟರಲ್ಲೇ ಮುಂಬೈ ಪೊಲೀಸರು ಸ್ಥಳಕೆ ಆಗಮಿಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಯುವತಿಯ ಆಕ್ರೋಶ ಹೆಚ್ಚಾಗಿದೆ. ವಾಹನದಿಂದ ಇಳಿದು ಬಂದ ಪೊಲೀಸ್ ಕಾಲರನ್ನೇ ಹಿಡಿದು ಬೈಗುಳ ಸುರಿಮಳೆಗೈದಿದ್ದಾಳೆ.

ಮಹಿಳಾ ಪೊಲೀಸ್ ಇಲ್ಲದ ಕಾರಣ ಪಾನಮತ್ತ ಯುವತಿಯನ್ನು ವಶಕ್ಕೆ ಪಡೆಯಲು ಗಸ್ತು ತಿರುಗುತ್ತಿದ್ದ ಪೊಲೀಸರು ಹರಸಾಹಸ ಮಾಡಬೇಕಾಯಿತು.ಯುವತಿ ರಂಪಾಟವನ್ನು ಕ್ಯಾಬ್ ಡ್ರೈವರ್ ಮೊಬೈಲ್ ಮೂಲಕ ಚಿತ್ರೀಕರಿಸಿಕೊಂಡಿದ್ದಾನೆ.

ಕ್ಯಾಬ್ ಡ್ರೈವರ್ ಈ ಯುವತಿಯರ ರಂಪಾಟದ ವೀಡಿಯೋ ರೆಕಾರ್ಡ್ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅತ್ತ ಕರ್ತವ್ಯ ನಿರತ ಪೊಲೀಸರಿಗೆ ಅಡ್ಡಿ ಸಾರ್ವಜನಿಕವಾಗಿ ಅಸಭ್ಯ ವರ್ತನೆ, ಸಾರ್ವಜನಿಕರಿಗೆ ಕಿರುಕುಳ ಸೇರಿದಂತೆ ಹಲವು ಪ್ರಕರಣಗಳು ಯುವತಿ ವಿರುದ್ಧ ದಾಖಲಾಗಿದೆ.